



ಮೇ 1 ರಂದು ಕಾರ್ಕಳದಲ್ಲಿ ಕಾಂಗ್ರೇಸ್ ಬೃಹತ್ ರೋಡ್ ಶೋ, ಸಮಾವೇಶ
ಕಾರ್ಕಳ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ವತಿಯಿಂದ ಕಾಂಗ್ರೇಸ್ ಕಾಲ್ನಡಿಗೆ ಜಾಥಾ ( ರೋಡ್ ಶೋ) ಹಾಗೂ ಬೃಹತ್ ಸಮಾವೇಶ ಮೇ 1 ಸೋಮವಾರ ರಂದು ಆಯೋಜಿಸಲಾಗಿದೆ.
ಅಂದು ಮದ್ಯಾನ 3ಕ್ಕೆ ಸ್ವರಾಜ್ಯ ಮೈದಾನದಿಂದ ಪ್ರಾರಂಭಗೊಳ್ಳುವ ಬೃಹತ್ ಜಾಥವು ಬಂಡೀಮಠ ಬಸ್ಸ್ ನಿಲ್ದಾಣದ ವರೆಗೆ ಕಾಲ್ನಡಿಗೆಯಲ್ಲಿ ರೋಡ್ ಶೋ ಮೂಲಕ ಸಾಗಿ ಬಂದು ಬೃಹತ್ ಸಮಾವೇಶದೊಂದಿಗೆ ಸಮಾಪನಗೊಳ್ಳಲಿದೆ.
ಪಕ್ದದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿಗಳಾದ ಡಾ.ಎಂ ವೀರಪ್ಪ ಮೊಯಿಲಿಯವರ ಗೌರವ ಉಪಸ್ಥಿತರಿದ್ದು ಅಭ್ಯರ್ಥಿ ಉದಯ್ ಶೆಟ್ಟಿ, ಪ್ರಮುಖ ಭಾಷಣಗಾರಾಗಿ ವಾಗ್ಮಿ ನಿಕೇತ್ ರಾಜ್ ಮೌರ್ಯ, ಸುಧೀರ್ ಕುಮಾರ್ ಮುರೋಳಿ, ಮತ್ತು ಜಿಲ್ಲಾದ್ಯಕ್ಷ ಅಶೋಕ್ ಕೊಡವೂರು ಪಕ್ಷದ ರಾಜ್ಯ ನಾಯಕರು, ಜಿಲ್ಲಾ ಮುಖಂಡರು ಭಾಗವಹಿಸಲಿದ್ದಾರೆ.
ಕ್ಷೇತ್ರದಾದ್ಯಂತ ಮತದಾರರು ಬದಲಾವಣೆಯನ್ನು ಬಯಸುತ್ತಿದ್ದು ಕಾರ್ಕಳ ಕಾಂಗ್ರೆಸ್ ಅಭ್ಯರ್ಥಿ ಉದಯ್ ಶೆಟ್ಟಿ ಪರವಾಗಿ ಒಲವು ತೋರಿಸುತ್ತಿದ್ದಾರೆ. ಪ್ರತೀ ಬೂತಿನಿಂದ 200 ಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ.ಶಾಸಕರ ಕಮಿಷನ್ ಮತ್ತು ಕಲೆಕ್ಷನ್ ಕಾರ್ಯವೈಖರಿಯಿಂದ ಬೇಸತ್ತವರು, ಕಾಂಗ್ರೇಸ್ ಗ್ಯಾರಂಟಿ ಕಾರ್ಡ್ ಮೇಲೆ ನಂಬಿ ಇಟ್ಟವರು ಇನ್ನೂ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ.ಭಯ ಮತ್ತು ಭ್ರಷ್ಟಾಚಾರ ಮುಕ್ತ ಸೌಹಾರ್ದ ಸಮಾಜಕ್ಕಾಗಿ ಕ್ಷೇತ್ರದ ಮತದಾರ ಬಂದುಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಯವಂತೆ ಪ್ರಚಾರ ಸಮಿತಿ ಅಧ್ಯಕ್ಷ
ಶುಭದರಾವ್ ತಿಳಿಸಿದ್ದಾರೆ.