



ಕಾಂಗ್ರೆಸ್ ಗ್ಯಾರಂಟಿ ವಿರೋಧಿಸುವವರು ಯೋಜನೆಯ ಫಲಾನುಭವಿಗಳಾಗುವುದಿಲ್ಲವೇ ?
ಕಾರ್ಕಳ: ಕಾಂಗ್ರೆಸ್ ಗ್ಯಾರಂಟಿ ಕಾರ್ಡನ್ನು ವಿರೋಧಿಸುವ ಬಿಜೆಪಿಗರು, ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದಲ್ಲಿ ಗ್ಯಾರಂಟಿ ಯೋಜನೆಯ ಫಲಾನುಭವಿಗಳಾಗುವುದಿಲ್ಲವೇ ?. ಈ ಯೋಜನೆಯ ಲಾಭ ಪಡೆಯುವುದಿಲ್ಲ ಎಂದಾದರೆ ಮೊದಲೇ ಬಹೀರಂಗಪಡಿಸಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಶುಭದ ರಾವ್ ಸವಾಲು ಹಾಕಿದ್ದಾರೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಕಂಡು ಭಯಭೀತರಾದ ಬಿಜೆಪಿಗರು ಅಪಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ಅಧಿಕಾರವಧಿಯಲ್ಲಿ ಜನಪರ ಯೋಜನೆಗಳನ್ನು ನೀಡದೆ, ಜನವಿರೋಧಿ ಆಡಳಿತದಿಂದ ಜನತೆಯಿಂದ
ತಿರಸ್ಕೃತರಾಗಿದ್ದರಿಂದ, ಬಿಜೆಪಿಗೆ ಅನ್ಯ ದಾರಿ ಉಳಿದಿಲ್ಲ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ. ಬಿಜೆಪಿ ಅಪಪ್ರಚಾರಕ್ಕೆ ಜನತೆ ಕಿವಿಗೊಡುವುದಿಲ್ಲ. ಕಾರ್ಕಳ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿ ಎಷ್ಟು ಅಪಪ್ರಚಾರ ನಡೆಸಿದರೂ, ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.