



ಮೋದಿ _ ಯೋಗಿ ಕಾರ್ಯಕ್ರಮಕ್ಕೆ ಕಾರ್ಕಳ ಬಿಜೆಪಿ ಭರ್ಜರಿ ತಯಾರಿ
ನಾಳೆ ( ಬುಧವಾರ, ಮೇ 3 ) ಮುಲ್ಕಿಯ ಕೋಲ್ನಾಡಿನಲ್ಲಿ ನಡೆಯಲಿರುವ ಸನ್ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರ ‘ಬೃಹತ್ ಚುನಾವಣಾ ಪ್ರಚಾರ ಸಭೆ”ಗೆ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ 10,000ಕ್ಕೂ ಮಿಕ್ಕಿ ಕಾರ್ಯಕರ್ತರು ಭಾಗವಹಿಸಲಿದ್ದು, ಈಗಾಗಲೇ ಕ್ಷೇತ್ರದ 209 ಬೂತ್ ಗಳಲ್ಲಿಯೂ ಸಿದ್ಧತೆಗಳು ನಡೆಯುತ್ತಿವೆ ಎಂದು ಕಾರ್ಕಳ ಬಿಜೆಪಿ ಮಾಧ್ಯಮ ವಕ್ತಾರರಾದ ಸಾಣೂರು ನರಸಿಂಹ ಕಾಮತ್ ರವರು ತಿಳಿಸಿರುತ್ತಾರೆ.
ಮೇ 6 ,ಶನಿವಾರ. ಕಾರ್ಕಳದಲ್ಲಿ ಯೋಗಿ ಬೃಹತ್ ರೋಡ್ ಶೋ:
ಕಾರ್ಕಳಕ್ಕೆ ಮೊಟ್ಟಮೊದಲ ಬಾರಿಗೆ ಶ್ರೀ ಯೋಗಿ ಆದಿತ್ಯನಾಥ್ ರವರ ಆಗಮನ , ಕಾರ್ಕಳದ ನಾಗರಿಕ ಬಂಧುಗಳಲ್ಲಿ ಹೊಸ ಉತ್ಸಾಹದ ವಾತಾವರಣ ನಿರ್ಮಾಣ ಮಾಡಲಿದ್ದು,ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ರವರು ಮೇ 6, ಶನಿವಾರ ಮಧ್ಯಾಹ್ನ ಎರಡುವರೆ ಗಂಟೆಗೆ ಕಾರ್ಕಳ ನಗರದ ಅನಂತಶಯನ ವೃತ್ತದಿಂದ ಮುಖ್ಯರಸ್ತೆಯಲ್ಲಿ ಸಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಗಾಂಧಿ ಮೈದಾನದವರೆಗೆ ” ಬೃಹತ್ ರೋಡ್ ಶೋ ‘ ನಡೆಸಲಿದ್ದು, ಈ ಬಗ್ಗೆ ಕಾರ್ಕಳ ಬಿಜೆಪಿ ಭರದ ಸಿದ್ಧತೆ ನಡೆಸುತ್ತಿದ್ದು, 25000ಕ್ಕೂ ಮಿಕ್ಕಿ ಬಿಜೆಪಿ ಕಾರ್ಯಕರ್ತರು, ಹಿತೈಷಿಗಳು ಮತ್ತು ಶ್ರೀ ಯೋಗೀಜಿಯವರ ಅಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಧ್ಯಕ್ಷರಾದ ಶ್ರೀ ಮಹಾವೀರ ಹೆಗಡೆಯವರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿರುತ್ತಾರೆ.