




ಕಾರ್ಕಳ:ಕಾರ್ಕಳ ವಿಧಾನಸಭಾ ಕ್ಷೇತ್ರದಾದ್ಯಂತ ಬಿರುಸಿನ ಮತದಾನ ನಡೆಯುತ್ತಿದ್ದು ಮತದಾನ ಪ್ರಕ್ರಿಯೆ ಅತ್ಯಂತ ಶಾಂತಿಯುತವಾಗಿ ನಡೆಯುತ್ತಿದೆ. ಈ ಬಾರಿ ಕಾರ್ಕಳ ಕ್ಷೇತ್ರ ದಲ್ಲಿ ಘಟಾನುಘಟಿ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದು ಇಂದು ಮತದಾನ ನಡೆಸಿದಾರೆ.
ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯಕುಮಾರ್ ಶೆಟ್ಟಿ ಸರ್ಕಾರಿ ಹಿ.ಪ್ರಾ ಶಾಲೆ ಮುನಿಯಾಲು ನಲ್ಲಿ ಕುಟುಂಬದ ಸಮೇತರಾಗಿ ಅಗಮಿಸಿ ಮತದಾನ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಾಸಕ ವಿ ಸುನೀಲ್ ಕುಮಾರ್ ಅವರು ನಿಟ್ಟೆ ಪ್ರಾಥಮಿಕ ಶಾಲೆ ಕಲಂಬಾಡಿಪದವು ನಲ್ಲಿ ಪತ್ನಿ ಜೊತೆ ಅಗಮಿಸಿ ಮತಚಲಾಯಿಸಿದ್ದಾರೆ. ಇನ್ನು ಪಕ್ಷೇತರ ಅಭ್ಯರ್ಥಿ ಪ್ರಮೋದ್ ಮುತಾಲಿಕ್ ಅವರು ಕುಕ್ಕುಂದೂರು ಗ್ರಾಪಂ ಮತಗಟ್ಟೆ ಯಲ್ಲಿ ಮತದಾನ ಚಲಾಯಿಸಿದ್ದಾರೆ.
ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ಕಾರ್ಕಳ ಕ್ಷೇತ್ರದವು ಅತ್ಯಂತ ಪೈಪೋಟಿಯಲ್ಲಿದ್ದು ಜಿದ್ದಾಜಿದ್ದಿನ ಕಣವಾಗಿ ಮಾರ್ಪಟಿದ್ದೆ.ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್ ಎದುರಾಳಿಯಾಗಿ ಈ ಬಾರಿ ಮುನಿಯಾಲು ಉದಯ್‌ಕುಮಾರ್ ಶೆಟ್ಟಿ ಪ್ರಬಲ ಎದುರಾಳಿಯಾಗಿದ್ದಾರೆ.ಇತ್ತ ಪ್ರಮೋದ್ ಮುತಾಲಿಕ್ ಹಿಂದುತ್ವದ ಮತಗಳನ್ನು ಬಾಚುವ ಮೂಲಕ ಯಾರಿಗೆ ಲಾಭ ಯಾರಿಗೆ ನಷ್ಟ ಅಗಲಿದೆ ಎಂಬುದು ಕಾದು ನೋಡಬೇಕಿದೆ.