





ಸುನೀಲ್ ಕುಮಾರ್ ಜಯಭೇರಿ: ಜೋಡುರಸ್ತೆ ಪೂರ್ಣಿಮಾ ಸಿಲ್ಕ್ ಮಾಲಕ ರವಿ ಪ್ರಕಾಶ್ ರಿಂದ ರೇಶ್ಮೆ ಶಾಲು ಹಾಕಿ ಸನ್ಮಾನ
ಕಾರ್ಕಳ:ಶಾಸಕ ಸುನೀಲ್ ಕುಮಾರ್ ಹ್ಯಾಟ್ರಿಕ್ ಜಯಭೇರಿ ಭಾರಿಸಿದ್ದು ಕಾರ್ಕಳದ ಜೋಡುರಸ್ತೆಯ ಪೂರ್ಣಿಮಾ ಸಿಲ್ಕ್ಸ್ ನ ಮುಂಭಾಗದಲ್ಲಿ ಶಾಸಕ ಸುನೀಲ್ ಕುಮಾರ್ ರವರಿಗೆ ಭರ್ಜರಿ ಸ್ವಾಗತ ಕೋರಲಾಯಿತು.
ಈ ಸಂದರ್ಭ ಪೂರ್ಣಿಮಾ ಸಿಲ್ಕ್ಸ್ ನ ಮಾಲಕ ರವಿ ಪ್ರಕಾಶ್ ರವರು ರೇಷ್ಮೆಯ ಶಾಲು ಹೊದಿಸಿ ಅಭಿನಂದಿಸಿದರು. ಅವರ ಧರ್ಮ ಪತ್ನಿ ಕಿರಣಾರವಿ ಪ್ರಕಾಶ್ ಪ್ರಭುರವರು ಹೂಗುಚ್ಚನೀಡಿ ಸಿಹಿ ವಿತರಿಸಿದರು.ಹಾಗೂ ಅವರ ಸುಪುತ್ರ ಪ್ರಜ್ವಲ್ ಪ್ರಭುರವರಿಂದ ಕೇಸರಿ ಹಾರ ಹಾಕಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಪೂರ್ಣಿಮಾ ಸಿಲ್ಕ್ಸ್ ನ ಸಿಬ್ಬಂದಿಗಳು,ಸಾರ್ವಜನಿಕರು ಉಪಸ್ಥಿತರಿದ್ದರು.
