ಹೆಬ್ರಿ ಸಮೀಪದ ಕೊಕ್ಕರ್ಣೆ ಕಜ್ಕೆಯಲ್ಲಿರುವ ಅರೆಮಾದನಹಳ್ಳಿ ಶಾಖಾ ಮಠದಲ್ಲಿ ಭಾನುವಾರ ನಡೆದ ಸಮಾಲೋಚನಾ ಸಭೆಯಲ್ಲಿ ಶ್ರೀ ಶಿವಸುಜ್ಞಾನ ಮೂರ್ತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿದರು.
ಕಜ್ಕೆ : ಅರೆಮಾದನಹಳ್ಳಿ ಶಾಖಾ ಮಠದಲ್ಲಿ ಶಿವಸುಜ್ಞಾನ ಮೂರ್ತಿ ಮಹಾಸ್ವಾಮೀಜಿ ಚಾತುರ್ಮಾಸ : ಸಮಾಲೋಚನಾ ಸಭೆ.
ಹೆಬ್ರಿ : ಕೊಕ್ಕರ್ಣೆ ಕಜ್ಕೆಯಲ್ಲಿರುವ ಶ್ರೀ ವಿಶ್ವಕರ್ಮ ಜಗದ್ಗುರು ಸುಜ್ಞಾನ ಪೀಠ ವಿಶ್ವಬ್ರಾಹ್ಮಣ ಮಹಾ ಸಂಸ್ಥಾನ ಮಠ ಅರೆಮಾದನಹಳ್ಳಿ ಶಾಖಾ ಮಠದಲ್ಲಿ ಶಿವಸುಜ್ಞಾನ ಮೂರ್ತಿ ಮಹಾಸ್ವಾಮೀಜಿ ಚಾತುರ್ಮಾಸ ಮತ್ತು ಕಜ್ಕೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ ನಿರ್ಮಾಣದ ಬಗ್ಗೆ ಸಮಾಲೋಚನಾ ಸಭೆಯು ಶಿವಸುಜ್ಞಾನ ಮೂರ್ತಿ ಮಹಾಸ್ವಾಮೀಜಿ ಅಧ್ಯಕ್ಷತೆಯಲ್ಲಿ ನಡೆಯಿತು. ಶ್ರೀ ಶಿವಸುಜ್ಞಾನ ಮೂರ್ತಿ ಮಹಾಸ್ವಾಮೀಜಿ ಆಶೀರ್ವಚನ ನೀಡಿ ದೇವಸ್ಥಾನ ನಿರ್ಮಾಣ ಮತ್ತು ಚಾತುರ್ಮಾಸದ ಯಶಸ್ವಿಗೆ ಸರ್ವರ ಸಹಕಾರ ಕೋರಿದರು. ಮೂಡಬಿದರೆ ಎಸ್ ಕೆಎಫ್ ಉಧ್ಯಮ ಸಮೂಹದ ಅಧ್ಯಕ್ಷ ಡಾ.ಜಿ.ರಾಮಕೃಷ್ಣ ಆಚಾರ್ ಮಾರ್ಗದರ್ಶನ ನೀಡಿದರು. ಸ್ಥಳೀಯ ಗಣ್ಯರು, ವಿವಿಧ ಸಂಘಸಂಸ್ಥೆಗಳ ಗಣ್ಯರು, ಪ್ರಮುಖರು, ಹೆಬ್ರಿ ರಾಜೇಶ ಆಚಾರ್ಯ, ವಿಶ್ವನಾಥ ಆಚಾರ್ಯ ಕೊಕ್ಕರ್ಣೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.