ಕಾರ್ಕಳ:ಛತ್ರಪತಿ ಫೌಂಡೇಶನ್ ಮೂಲಕ ಉಚಿತ ಪದವಿ ಶಿಕ್ಷಣ
ಕಾರ್ಕಳ ತಾಲೂಕಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಛತ್ರಪತಿ ಫೌಂಡೇಶನ್ ವತಿಯಿಂದ ಕಾರ್ಕಳದ ಶಿರಡಿ ಸಾಯಿ ಡಿಗ್ರಿ ಕಾಲೇಜಿನಲ್ಲಿ ಉಚಿತವಾದ ಪದವಿ ಶಿಕ್ಷಣದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು.
ಶಿಕ್ಷಣದಲ್ಲಿ ಆಸಕ್ತಿ ಇರುವ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಛತ್ರಪತಿ ಫೌಂಡೇಶನ್ ಅಧ್ಯಕ್ಷರಾದ ಗಿರೀಶ್ ರಾವ್ ಇವರು ತಿಳಿಸಿರುತ್ತಾರೆ.
ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಿರಡಿ ಸಾಯಿ ಡಿಗ್ರಿ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ಆಶಿಶ್ ಶೆಟ್ಟಿ ಇವರನ್ನು ಸಂಪರ್ಕಿಸಬಹುದು.8277392576