ಕಾರ್ಕಳ:ನಿವೃತ್ತ ಅಂಚೆ ಇಲಾಖೆ ಅಧಿಕಾರಿ ಗಣಪತಿ ಆಚಾರ್ಯ ನಿಧನ
ಕಾರ್ಕಳ : ಸಮಾಜ ಸೇವಕ, ಶಿಕ್ಷಕ, ನಿವೃತ್ತ ಅಂಚೆ ಇಲಾಖೆ ಅಧಿಕಾರಿ ಗಣಪತಿ ಆಚಾರ್ಯ ಬೆಳ್ಮಣ್ (65)ವ. ಅಲ್ಪಕಾಲದ ಅನಾರೋಗ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಬುಧವಾರ ನಿಧನರಾಗಿದ್ದಾರೆ.
ಬೆಳಣ್ ಪರಿಸರದ ವಿವಿಧ ಸಮಾಜಮುಖಿ ಸಂಘಟನೆಗಳಲ್ಲಿ ಗುರುತಿಸಿಕೊಂಡ ಇವರು 1998ರಲ್ಲಿ ಬೆಳ್ಳಣ್ ಜೇಸಿಐ ಘಟಕದ ಯಶಸ್ವಿ ಅಧ್ಯಕ್ಷರಾಗಿ ಘಟಕವನ್ನು ಮುನ್ನಡೆಸಿದ್ದು 1999ರಲ್ಲಿ ವಲಯ ಕಾರ್ಯದರ್ಶಿಯಾಗಿ ನಂತರ ವಲಯ ತರಬೇತುದಾರರಾಗಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಉಚಿತವಾಗಿ 12 ವರ್ಷಗಳ ಕಾಲ ಬೆಳ್ಮಣ್ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ಅಂಚೆ ಇಲಾಖೆ ಅಧಿಕಾರಿಯಾಗಿ, ಕಾರ್ಯಕ್ರಮ ನಿರೂಪಕರಾಗಿ, ಬೆಳ್ಳಣ್ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾಗಿದ್ದು, ಬೋಳ ವಿಶ್ವಕರ್ಮ ಸಮಾಜ ಸೇವಾ ಸಂಘದ ಮಾಜಿ ಅಧ್ಯಕ್ಷ ಪ್ರಸ್ತುತ ಪೂರ್ವಾಧ್ಯಕ್ಷ, ಉಡುಪಿ ಜಿಲ್ಲಾ ವಿಶ್ವಕರ್ಮ ಚಾರಿಟೇಬಲ್ ಟ್ರಸ್ಟ್ ನ ಕಾರ್ಯದರ್ಶಿ, ಬೆಳ್ಮಣ್ ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ, ನಂದಳಿಕೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿ ಕಾರ್ಯದರ್ಶಿ, ಬೆಳ್ಮಣ್ ಸ್ಪೋರ್ಟ್ಸ್ ಕ್ಲಬ್ ನ ಮಾರ್ಗದರ್ಶಕರಾಗಿದ್ದು ಹೀಗೆ ಹಲವಾರು ಸಂಘ ಸಂಸ್ಥೆಯಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿದ್ದರು.
ಮೃತರು ಪತ್ನಿ, ಒರ್ವ ಪುತ್ರಿ ಹಾಗೂ ಪುತ್ರ ಮತ್ತು ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.