ಸಿಐಎಸ್ಎ ಅಂತಾರಾಷ್ಟ್ರೀಯ ಪರೀಕ್ಷೆಯಲ್ಲಿ ಸಾಧನೆಗೈದ ಭಾರತದ ಮೊದಲ ಸಾಧಕಿ ಸಪ್ನಾ ಹೆಬ್ರಿ
ಹೆಬ್ರಿ : ಸಿಐಎಸ್ಎ ಅಂತಾರಾಷ್ಟ್ರೀಯ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆಯ ಹೆಬ್ರಿಯ ಸಪ್ನಾ ಅತ್ಯಧಿಕ ಅಂಕಗಳಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಟಾಪರ್ ಆಗಿ ಮೂಡಿ ಬಂದ ಭಾರತದ ಮೊದಲ ಮಹಿಳ ಸಾಧಕಿಯಾಗಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದ ಸಾಧನೆಯನ್ನು ಗುರುತಿಸಿ ಅಮೆರಿಕಾದ ಬೋಸ್ಟನ್ ನಲ್ಲಿ ಮೇ 10ರಂದು ನಡೆದ ಡಿಜಿಟಲ್ ಟ್ರಸ್ಟ್ ವಲ್ಡ್ ಕಾನ್ಪರೆನ್ಸ್ ನಲ್ಲಿ ಸಮ್ಮಾನ ದೊರೆತಿದೆ.
ಹೆಬ್ರಿಯ ಬೋಜ ಪೂಜಾರಿ ಲೀಲಾವತಿ ದಂಪತಿಯ ಪುತ್ರಿಯಾಗಿರುವ ಬೆಂಗಳೂರಿನ ಐಟಿ ಕಂಪೆನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾಯ೯ನಿವ೯ಹಿಸುವ ಇವರು ಅಂತಾರಾಷ್ಟ್ರೀಯ ಸಂಸ್ಥೆ ಐಸಾಕ ನಡೆಸಿದ ಸಿಬಿಎಸ್ ಎ ಸಟಿ೯ಫೈಡ್ ಇನ್ ಫಾಮೇ೯ಶನ್ ಸಿಸ್ಟಮ್ ಆಡಿಟರ್ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿ ದೇಶಕ್ಕೆ ಕೀತಿ೯ ತಂದಿದ್ದಾರೆ.