ಕಾರ್ಕಳ:ಅಂಗನವಾಡಿ ಕಾರ್ಯಕರ್ತೆಗೆ ಲಕ್ಷಾಂತರ ರೂಪಾಯಿ ವಂಚನೆ
ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ಆಮಿಷವೊಡ್ಡಿ ಅಂಗನವಾಡಿ ಕಾರ್ಯಕರ್ತೆಗೆ ಲಕ್ಷಾಂತರ ರೂಪಾಯಿ ವಂಚಿಸಿದ ಘಟನೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದಲ್ಲಿ ವರದಿಯಾಗಿದೆ.
ಮುಂಡ್ಕೂರಿನ ಅಂಗನವಾಡಿ ಕಾರ್ಯಕರ್ತೆ ಶಶಿಕಲಾ ಎಂಬುವವರಿಗೆ ವೇಣುಗೋಪಾಲ ಎಂಬವರು ಅಂಗನವಾಡಿಯ ಮೇಲ್ವಾಚಾರಕಿ ಹುದ್ದೆಗೆ ನೇಮಕಾತಿ ಮಾಡಿಸಿ ಕೊಡುವುದಾಗಿ ತಿಳಿಸಿ 2 ಲಕ್ಷ ಹಣವನ್ನು ಕೇಳಿದ್ದು ಅದರಂತೆ ಶಶಿಕಲಾರವರು ಮುಂಡ್ಕೂರು ಗ್ರಾಮದ ಸಚ್ಚರೀಪೇಟೆ ಕೆನರಾ ಬ್ಯಾಂಕ್ ತನ್ನ ಖಾತೆಯಿಂದ ಹಂತಹಂತವಾಗಿ ಒಟ್ಟು 2,80,003 ರೂಪಾಯಿ ಹಣವನ್ನು ವೇಣು ಗೋಪಾಲನಿಗೆ ಕಳುಹಿಸಿಕೊಟ್ಟಿದ್ದಾರೆ.
ಅಷ್ಟುಮಾತ್ರವಲ್ಲದೆ ಡಿ.23ರಂದು ವೇಣುಗೋಪಾಲ ಶಶಿಕಲಾರವರ ಮನೆಗೆ ಬಂದು ರಸ್ತೆ ಅಪಘಾತವಾಗಿ ಗಾಯಗೊಂಡ ತನ್ನ ಮಗಳ ಚಿಕಿತ್ಸೆಗಾಗಿ ಸಾಲ ರೂಪದಲ್ಲಿ 2,20,000ರೂ ಹಣವನ್ನೂ ಪಡೆದುಕೊಂಡಿದ್ದಾನೆ.
ಆದರೆ ಆತನು ಇದುವರೆಗೂ ಹಣವನ್ನು ವಾಪಾಸು ನೀಡದೇ, ಹಣದ ಬಗ್ಗೆ ವಿಚಾರಿಸಿದ್ದಕ್ಕೆ ಶಶಿಕಲಾವರ ಮೊಬೈಲ್ ನಂಬ್ರ ಬ್ಲಾಕ್ ಮಾಡಿದ್ದಾನೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.