Monday, October 2, 2023

ಕಾರ್ಕಳ:ಮೈ-ಟೆಕ್ ತಾಂತ್ರಿಕ ಕಾಲೇಜು ಪ್ರವೇಶಾರಂಭ

Homeಕಾರ್ಕಳಕಾರ್ಕಳ:ಮೈ-ಟೆಕ್ ತಾಂತ್ರಿಕ ಕಾಲೇಜು ಪ್ರವೇಶಾರಂಭ

ಕಾರ್ಕಳ:ಮೈ-ಟೆಕ್ ತಾಂತ್ರಿಕ ಕಾಲೇಜು ಪ್ರವೇಶಾರಂಭ

ಕಳೆದ 18 ವರ್ಷಗಳಿಂದ ಉಡುಪಿ ಜಿಲ್ಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿವಿಧ ತಾಂತ್ರಿಕ ವೃತ್ತಿ ಶಿಕ್ಷಣವನ್ನು ನೀಡುತ್ತಾ ಬಂದಿರುವ ಮೈ-ಟೆಕ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ 2023-24 ರ ಸಾಲಿಗೆ ಪ್ರವೇಶ ಆರಂಭವಾಗಿದೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಡಿಗ್ರಿ ಡಿಪ್ಲೊಮಾಗಳಲ್ಲಿ ಪಾಸ್ / ಫೇಲಾದ ವಿದ್ಯಾರ್ಥಿಗಳು ಅಥವಾ ಪದವಿ ಪಡೆದ ನಿರುದ್ಯೋಗಿ ಯುವಕ ಯುವತಿಯರಿಗೆ ತಾಂತ್ರಿಕ ವೃತ್ತಿ ತರಬೇತಿ ಪಡೆಯುವ ಅವಕಾಶ. ಜಾಗತಿಕ ಮಾರುಕಟ್ಟೆಯಲ್ಲಿ ಅತೀ ಹೆಚ್ಚಿನ ಬೇಡಿಕೆ ಇರುವ ರೆಫ್ರಿಜರೇಶನ್ ಎ.ಸಿ ಮೆಕ್ಯಾನಿಕ್, ಆಟೋಮೊಬೈಲ್,ಎಲೆಕ್ಟ್ರಿಷಿಯನ್, ನರ್ಸರಿ ಟೀಚರ್ಸ್ ಟ್ರೇನಿಂಗ್, ಆಫೀಸ್ ಮ್ಯಾನೇಜ್‌ಮೆಂಟ್, ಫಿಟ್ಟರ್ ಮೊದಲಾದ ಕೋರ್ಸುಗಳು ಲಭ್ಯವಿದೆ.ಅಲ್ಲದೆ 8th,9th ಫೇಲಾದವರು ನೇರವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯುವ ಅವಕಾಶ ಕಲ್ಪಿಸಲಾಗಿದೆ.ಅನುಭವಿ ಶಿಕ್ಷಕರಿಂದ ಸಂಪೂರ್ಣ ಪ್ರಾಯೋಗಿಕ ತರಬೇತಿ ನೀಡಲಾಗುವುದು. ಎಸ್.ಎಸ್.ಎಲ್.ಸಿ ಅನುತ್ತೀರ್ಣಗೊಂಡವರಿಗೆ ವಿಶೇಷ ತರಬೇತಿ ನೀಡಲಾಗುವುದು.

ತರಬೇತಿ ಪೋರ್ಣಗೊಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ಗೊದ್ರೇಜ್, ಎಲ್.ಜಿ, ಬ್ಲೂಸ್ಟಾರ್, ಮಾರುತಿ ಸುಜುಕಿ, ಹುಂಡೈ, ಇನ್‌ಫೋಸಿಸ್, ಡೆಲ್, ಕೆ ಎಂ.ಸಿ, ಇಂಪ್ರ, ಬೋಶ್, ಐ.ಎಫ್.ಬಿ, ಹರ್ಷ ಸ್ಟಲ್ಜ್, ಡ್ಯಾಕಿನ್, ಶಂಕರ್ ಎಲೆಕ್ಟಿçಕಲ್ಸ್ , ಶಾಂತಾ ಎಲೆಕ್ಟ್ರಿಕಲ್ಸ್ , ಅದಾನಿ, ಎಂ.ಆರ್.ಪಿ.ಎಲ್., ಶೀತಲ್ ರೆಫ್ರಿಜೆರೇಶನ್, ಮೊದಲಾದ ಕಂಪನಿಗಳಿಗೆ ಉದ್ಯೋಗ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ.

ಬಾರತ ಸರಕಾರದ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ನಿಗಮ ನವದೆಹಲಿಯೊಂದಿಗೆ ನೋಂದಾಯಿಸಲ್ಪಟ್ಟಿದ್ದು ಐಟಿಇಎಸ್ ಮುಂಬಯಿಯೊಂದಿಗೆ ಸಂಯೋಜನೆ ಹೊಂದಿದೆ. 2023-24 ರ ಸಾಲಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಮೈ-ಟೆಕ್ ನ ವಿವಿಧ ಶಾಖೆಗಳಲ್ಲಿ ವಿಚಾರಿಸಬಹುದು.ಶಿರ್ವ ಪೆಟ್ರೋಲ್ ಪಂಪ್ ಬಳಿ, ಕಾರ್ಕಳ ಸ್ಟುಡೆಂಟ್ ಕಾರ್ನರ್ ಬಳಿ, ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜು ಬಳಿ, ಬ್ರಹ್ಮಾವರ ಬಂಟರ ಭವನ ಬಳಿ, ಉಡುಪಿ ಕಿನ್ನಿಮುಲ್ಕಿ ಜಂಕ್ಷನ್ ಸಿಲ್ವರ್ ಮೈನ್ ಬಿಲ್ಡಿಂಗ್ ಇಲ್ಲಿ ಅರ್ಜಿ ಫಾರಂಗಳನ್ನು ಪಡೆದುಕೊಳ್ಳುವಂತೆ ಸಂಸ್ಥೆಯ ಸಂಚಾಲಕರಾದ ಶ್ರೀ ಉದಯ ಆಚಾರ್ಯ ಪಳ್ಳಿ ತಿಳಿಸಿದ್ದಾರೆ.

ಅಭಿನಂದನೆಗಳು
ಮೈ-ಟೆಕ್ ಐಟಿಐ ಕಾರ್ಕಳ ಇಲ್ಲಿ ರೆಫ್ರಿಜರೇಶನ್ ಎ.ಸಿ. ಮೆಕ್ಯಾನಿಕ್ ಕೋರ್ಸನ್ನು ಪೂರ್ಣಗೊಳಿಸಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ T.C.S(Tata co.services)) ನಲ್ಲಿ ಉದ್ಯೋಗಿಯಾಗಿರುವ  ಪ್ರತಿಕ್ ಎಸ್. ಆರ್. ಹಾಗೂ
ಇಂಪ್ರ ರೆಫ್ರಿಜರೇಶನ್ ಕೋ, ಉಡುಪಿ ಇಲ್ಲಿನ ಉದ್ಯೋಗಿ ಶ್ರೀ ಸುದರ್ಶನ್ ಇವರನ್ನು ಪ್ರಧಾನ ಕಛೇರಿ ಶಿರ್ವದಲ್ಲಿ ಸನ್ಮಾನಿಸಲಾಯಿತು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments