ಸಂತ ಲಾರೆನ್ಸ್ ಅನುದಾನಿತ ವಿದ್ಯಾ ಸಂಸ್ಥೆ ಅತ್ತೂರು -ನಿಟ್ಟೆ- ಕಾರ್ಕಳ
ಶಾಲಾ ಆರಂಭೋತ್ಸವ ಸಂಭ್ರಮ ಮತ್ತು ಕಲಿಕಾ ಸಾಮಾಗ್ರಿಗಳ ವಿತರಣೆ
ಅತ್ತೂರು ಶಾಲೆಯಲ್ಲಿ ಶಾಲಾ ಆರಂಭೋತ್ಸವವನ್ನು ಮೇ. 31ರಂದು ಸಡಗರದಿಂದ ಆಚರಿಸಲಾಯಿತು.
ಉಭಯ ವಿದ್ಯಾಸಂಸ್ಥೆಗಳ ಸಂಚಾಲಕರೂ, ಪವಿತ್ರ ಧರ್ಮಕ್ಷೇತ್ರದ ಗುರುಗಳಾದ ವಂ|ಫಾದರ್ ಆಲ್ಬನ್ ಡಿ’ಸೋಜಾರವರು ಸಭೆಯ ಅಧ್ಯಕ್ಷತೆ ವಹಿಸಿ, ಉದ್ಘಾಟಿಸಿ ಶುಭಾಸಂಶನೆಗೈದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ಕೊಡುಗೆಯಾಗಿ ನೀಡಿದ ಸುಮಾರು 1 ಲಕ್ಷ 20ಸಾವಿರ ರೂ. ಮೀರಿದ ಪುಸ್ತಕ, ಸ್ಕೂಲ್‌ಬ್ಯಾಗ್, ಕೊಡೆಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಹಳೆ ವಿದ್ಯಾರ್ಥಿಗಳ ಪರವಾಗಿ ಸುರೇಂದ್ರ ಶೆಟ್ಟಿ ಹಾಗೂ ದಿವಾಕರ ಬಂಗೇರರವರು ಮಾತನಾಡಿದರು. ಹಳೆ ವಿದ್ಯಾರ್ಥಿಗಳಾದ ಸುಚಿತಾ ಶೆಟ್ಟಿ, ಪ್ರಕಾಶ್ ಜೋಗಿ, ದಿಲನ್ ಡಿಸೋಜಾ, ಅಲನ್ ರೋಶನ್ ಡಿಮೆಲ್ಲೊ, ಲೋರೆನ್ಸ್ ಡಿಸೋಜಾ, ಹೆಲ್ವಿನ್ ಮತಾಯಸ್,ಗ್ರೇಸಿ ಡಿ’ಸೋಜಾ,ಲೀನಾ ನೊರೊನ್ಹಾ,ಮುಮ್ತಾಜ್, ಗಣೇಶ್, ಮಹೇಶ್ ಶೆಟ್ಟಿ, ದಿವ್ಯಾ ಜೈನ್, ಸೀಮಾ ಬಾನು, ಉಭಯ ಶಾಲಾ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
ಸುಬ್ರಹ್ಮಣ್ಯ ಉಪಾಧ್ಯಾಯ ಸ್ವಾಗತಿಸಿದರು. ಪ್ರದೀಪ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು ದಿವ್ಯಾ ವಂದಿಸಿದರು.