ಹೆಬ್ರಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಂದರ ಎನ್. ಬೇಗೂರ್ ಅವರನ್ನು ಸನ್ಮಾನಿಸಲಾಯಿತು.
ಹೆಬ್ರಿ ತಾಲ್ಲೂಕು ಭೂ ದಾಖಲೆಗಳ ಇಲಾಖೆಯ ಪರಿವೀಕ್ಷಕ ಸುಂದರ ಎನ್. ಬೇಗೂರ್ ಸೇವಾ ನಿವೃತ್ತಿ : ಸನ್ಮಾನ.
ಹೆಬ್ರಿ : ಹೆಬ್ರಿ ತಾಲ್ಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಪರಿವೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಸುಂದರ ಎನ್. ಬೇಗೂರ್ ಮತ್ತು ಪತ್ನಿ ಉಮಾವತಿ ಬೇಗೂರ್ ಅವರನ್ನು ಹೆಬ್ರಿ ತಾಲ್ಲೂಕು ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸನ್ಮಾನಿಸಲಾಯಿತು.
ಎಚ್‌ಡಿಕೋಟೆ ಎನ್‌ಬೇಗೂರಿನವರಾದ ಸುಂದರ ಎನ್. ಬೇಗೂರ್ ಭೂ ದಾಖಲೆಗಳ ಇಲಾಖೆಯಲ್ಲಿ ೨೮ ವರ್ಷಗಳ ಕಾಲ ಸೇವೆ ಸಲ್ಲಿಸಿ ತಾಲ್ಲೂಕು ಪರಿವೀಕ್ಷಕರಾಗಿ ನಿವೃತ್ತರಾಗಿದ್ದಾರೆ. ತನ್ನ ಸೇವಾವಧಿಯಲ್ಲಿ ಸಹಕರಿಸಿದ ಸರ್ವರಿಗೂ ಸುಂದರ ಎನ್. ಬೇಗೂರ್ ಕೃತಜ್ಞತೆ ಸಲ್ಲಿಸಿದರು. ಹೆಬ್ರಿ ತಹಶೀಲ್ಧಾರ್ ಪುರಂದರ್ ಕೆ, ಭೂ ದಾಖಲೆಗಳ ನಿರ್ದೇಶಕ ರೋಹಿತ್ ಟಿಕೆ, ಭೂ ದಾಖಲೆಗಳ ಸಹಾಯಕ ನಿರ್ದೇಶಕ ಪುಪ್ಪರಾಜ್, ಭೂ ದಾಖಲೆಗಳ ಇಲಾಖೆಯ ವಿವಿಧ ಅಧಿಕಾರಿಗಳು, ಹೆಬ್ರಿ ತಾಲ್ಲೂಕು ಕಚೇರಿಯ ಅಧಿಕಾರಿಗಳು ಉಪಸ್ಥಿತರಿದ್ದು ಶುಭಹಾರೈಸಿದರು. ಹೆಬ್ರಿ ತಾಲ್ಲೂಕು ಸರ್ವೇಯರ್ ರವಿರಾಜ್ ಸ್ವಾಗತಿಸಿ ಮಧು ವಂದಿಸಿ ತಾಲ್ಲೂಕು ಕಚೇರಿಯ ಮಹೇಶ್ ಕುಮಾರ್ ನಿರೂಪಿಸಿದರು.