Wednesday, February 21, 2024

ಮುನಿಯಾಲು: ವರಂಗ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ,ಕಾಂಗ್ರೆಸ್ ಮುಖಂಡ ರವಿ ಪೂಜಾರಿ ನಿಧನ

Homeಕಾರ್ಕಳಮುನಿಯಾಲು: ವರಂಗ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ,ಕಾಂಗ್ರೆಸ್ ಮುಖಂಡ ರವಿ ಪೂಜಾರಿ ನಿಧನ

ಹೆಬ್ರಿ : ಮುನಿಯಾಲು ಮೂಡುಕುಡೂರು ರವಿ ಪೂಜಾರಿ (52) ಅವರು ಶನಿವಾರ ಹೃದಯಾಘಾತದಿಂದ ನಿಧನರಾದರು. ತನ್ನ ಚಟ್ಕಲ್ ಪಾದೆಯ ಮನೆಯಲ್ಲಿರುವಾಗ ಎದೆನೋವು ಕಾಣಿಕೊಂಡಾಗ ಮುನಿಯಾಲಿನ ಕ್ಲಿನಿಕ್ ಗೆ ತಾನೇ ಕಾರು ಚಲಾಯಿಸಿಕೊಂಡು ತೆರಳಿದ್ದು ಕಾರು ಇಳಿದು ಕ್ಲಿನಿಕ್ ಗೆ ಹೋಗುವಾಗ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ರವಿ ಪೂಜಾರಿಯವರು ಸಮಾಜಸೇವಕರಾಗಿ ಎಲ್ಲರಿಗೂ ಬೇಕಾದವರಾಗಿದ್ದರು. ವರಂಗ ಗ್ರಾಮ ಪಂಚಾಯತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ವರಂಗ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕರಾಗಿ ಬಳಿಕ ಅಧ್ಯಕ್ಷರಾಗಿ 8 ವರ್ಷ ಸೇವೆ ಸಲ್ಲಿಸಿದ್ದರು.

ತಾಲ್ಲೂಕು ಪಂಚಾಯತಿ ಚುನಾವಣೆ ಗೆ ಸ್ಪರ್ಧಿಸಿ ಅತೀ ಕಡಿಮೆ ಅಂತರದಲ್ಲಿ ಪರಾಭವಗೊಂಡಿದ್ದರು. ಪ್ರಸ್ತುತ ವರಂಗ ಸಹಕಾರಿ ವ್ಯವಸಾಯಿಕ ಸಂಘದ ನಿರ್ದೇಶಕ ರಾಗಿದ್ದಾರೆ. ಮುನಿಯಾಲು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಸಂಘಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ.

ನೂರಾರು ಮಂದಿ ಮೃತರ ಅಂತಿಮ ದರ್ಶನ ಪಡೆದರು. ಮೂಡುಕುಡೂರು ಮೂಲ ನಿವಾಸ ಕಪಿಲದ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಯಿತು.ರವಿ ಪೂಜಾರಿಯವರು ಖ್ಯಾತ ಟೈಲರ್ ಆಗಿದ್ದ ದಿ.ಕೊಂಬ ಪೂಜಾರಿ ಅವರ ಪುತ್ರ.ಮೃತರಿಗೆ ಪತ್ನಿ ಇಬ್ಬರು ಗಂಡು ಮಕ್ಕಳಿದ್ದಾರೆ.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular