Thursday, April 18, 2024

ಕಾರ್ಕಳ:‘ಕರಾವಳಿ ಸಂಸ್ಕೃತಿ – ಸಮಕಾಲೀನ ಸವಾಲುಗಳು’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

Homeಕಾರ್ಕಳಕಾರ್ಕಳ:‘ಕರಾವಳಿ ಸಂಸ್ಕೃತಿ - ಸಮಕಾಲೀನ ಸವಾಲುಗಳು’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟನೆ

ಕಾರ್ಕಳ: ಸಂಸ್ಕೃತಿಯೊಳಗೆ ದೇವರು,ಧರ್ಮ,ಇತ್ಯಾದಿಗಳು ಒಳಗೊಂಡಿರುತ್ತವೆ.ಕರಾವಳಿ ಸಂಸ್ಕೃತಿಯಲ್ಲಿ ಕೃಷಿ ಪ್ರೀತಿ ವಿಕೃತಿಯಾಗಿಸಲು ಬಿಟ್ಟಿಲ್ಲ. ಆದರೆ ಇಂದಿನ ದಿನಮಾನದಲ್ಲಿ ಕೃಷಿಮೂಲ ಬದುಕು ಮಾಯವಾಗುತ್ತಿರುವ ಈ ಸಂದರ್ಭದಲ್ಲಿ ನಂಬಿಕೆಯ ಮೇಲೆ ಕಟ್ಟಲ್ಪಟ್ಟ ಈ ಬದುಕು ನಿಜ ಸಂಸ್ಕೃತಿಯನ್ನು ಉಳಿಸುವಲ್ಲಿ ವಿಫಲವಾಗುತ್ತಿದೆ. ಆಧುನಿಕತೆಯ ಕರಾಳ ಛಾಯೆ ಬಹಳ ಆಳವಾಗಿ ಬೇರೂರುತ್ತಿರುವಾಗ ವಿದ್ಯಾರ್ಥಿಗಳು , ಯುವಕರು ಚಿಂತಿಸಬೇಕು. ದ್ರಾವಿಡ ಮೂಲದ ಚೌಕಟ್ಟಿನಲ್ಲಿ ಬೆಳೆದು ಬಂದ ಈ ತುಳುನಾಡು ಇಂದಿಗೆ ಬೇರೆ ಅಂಶಗಳು ಪ್ರತಿರೋಧ ಒಡ್ಡಿದಾಗ ಬದಲಾವಣೆ ಒಳಪಡುತ್ತಿರುವಾಗ ಸೌಹಾರ್ದತೆ, ಶಾಂತಿ ಮರೀಚಿಕೆಯಾಗುತ್ತಿದೆ. ಇಂದು ಹಮ್ಮಿಕೊಂಡ ಈ ವಿಚಾರ ಸಂಕಿರಣ ಸತ್ವಪೂರ್ಣವಾಗಿದ್ದು, ಕೇಳಿದವರ ಮನಮುಟ್ಟುವುದರಲ್ಲಿ ಸಂಶಯವಿಲ್ಲ. ಇಂದು ಮತ್ತೆ ನಮ್ಮೆಲ್ಲ ಪೂರ್ವಚಿಂತನೆಗಳ ಮೇಲೆ ನಂಬಿಕೆಯ ಗೋಡೆಯನ್ನು ಕಟ್ಟಬೇಕು ಎಂಬುದಾಗಿ ಖ್ಯಾತ ಜಾನಪದ ವಿದ್ವಾಂಸ , ಸಂಶೋಧಕ ಡಾ. ಗಣೇಶ್ ಅಮೀನ್ ಸಂಕಮಾರ್ ಅವರು ಹೇಳಿದರು.

ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ‘ಕರಾವಳಿ ಸಂಸ್ಕೃತಿ – ಸಮಕಾಲೀನ ಸವಾಲುಗಳು’ ಎಂಬ ವಿಚಾರವಾಗಿ ಮಂಗಳೂರು ವಿಶ್ವವಿದ್ಯಾನಿಲಯ, ಶ್ರೀಧರ್ಮಸ್ಥಳ ಮಂಜುನಾಥೇಶ್ವರ ತುಳುಪೀಠ, ತುಳು ಸ್ನಾತಕೋತ್ತರ ಅಧ್ಯಯನವಿಭಾಗ, ವಿ.ವಿ. ಸಂಧ್ಯಾ ಕಾಲೇಜು,ಮಂಗಳೂರು ಇವುಗಳ ಸಹಯೋಗದಲ್ಲಿ ನಡೆದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ವಿದ್ಯಾರ್ಥಿಗಳ ಮನವನ್ನು ಈ ರೀತಿ ಕಟ್ಟುವ ಕೆಲಸ ಮನಮೆಚ್ಚುವಂತಹುದು ಎಂಬುದಾಗಿ ಹೇಳಿದರು. ಕಾಲೇಜಿನ ವಿಶ್ವಸ್ತಮಂಡಳಿಯ ಸದಸ್ಯರಲ್ಲೋರ್ವರಾದ ಟಿ.ಎ. ಜಗದೀಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಇಂತಹ ಕಾರ್ಯಕ್ರಮಗಳು ಪ್ರತಿ ಕಾಲೇಜಿನಲ್ಲಿ ನಡೆದರೆ ಅದರ ಫಲಶ್ರುತಿ ಲೋಕದ ಮುಂದೆ ಅತ್ತುತ್ತಮ ಸಮಾಜದ ನಿರ್ಮಾಣವಾಗಿ ಕಂಡುಬರುವುದರಲ್ಲಿ ಸಂಶಯವಿಲ್ಲವೆಂದರು.

ಸಮಾರಂಭದಲ್ಲಿ ಶ್ರೀ ಮಂಜುನಾಥೇಶ್ವರ ತುಳುಪೀಠದ ಸಂಯೋಜಕರಾದ ಡಾ. ಮಾಧವ ಮೂಡುಕೋಣಾಜೆ ಪ್ರಸ್ತಾವನೆಗೈದರು. ಕಾಲೇಜಿನ ಪ್ರಾಚಾರ್ಯ ಡಾ. ಮಂಜುನಾಥ್ ಎ.ಕೋಟ್ಯಾನ್ ಅವರು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರೂ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಅರುಣಕುಮಾರ ಎಸ್. ಆರ್. ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಶ್ರೀಮತಿ ವನಿತಾ ಶೆಟ್ಟಿ ವಂದಿಸಿದರು. ಇನ್ನೋರ್ವ ಉಪನ್ಯಾಸಕಿ ಶ್ರೀಮತಿ ಸುಲೋಚನಾ ಪಚ್ಚಿನಡ್ಕ ನಿರೂಪಿಸಿದರು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add