Thursday, July 18, 2024

ಬಜಗೋಳಿ ಜೈನ್ ಮಿಲನ್-ವಾರ್ಷಿಕ ಕ್ರೀಡಾಕೂಟ

Homeಕಾರ್ಕಳಬಜಗೋಳಿ ಜೈನ್ ಮಿಲನ್-ವಾರ್ಷಿಕ ಕ್ರೀಡಾಕೂಟ

ಬಜಗೋಳಿ ಜೈನ್ ಮಿಲನ್ – ವಾರ್ಷಿಕ ಕ್ರೀಡಾಕೂಟ

ಬಜಗೋಳಿ ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ವತಿಯಿಂದ ನಡೆಸಲಾಗುವ ವಾರ್ಷಿಕ ಕ್ರೀಡಾಕೂಟವನ್ನು ಖ್ಯಾತ ಬ್ಯಾಡ್ಮಿಂಟನ್ ಆಟಗಾರ ಹಾಗೂ ಬಜಗೋಳಿ ಬಂಡಸಾಲೆ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನ ಸ್ಥಾಪಕರಾದ ವೀರಂಜಯ ಜೈನ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಮುಡಾರು ಅಪ್ಪಾಯಿ ಬಸದಿಯ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಶಟಲ್ ಬ್ಯಾಡ್ಮಿಟನ್ ಆಟಗಾರ ಹಾಗೂ ಜೈನ್ ಕೇಬಲ್ ನೆಟ್ವರ್ಕ್ ಬಜಗೋಳಿ ಇದರ ಮಾಲಕರಾದ ಪೃಥ್ವಿರಾಜ್ ಜೈನ್ ರವರು ಆಗಮಿಸಿದ್ದರು.

ಬಜೆಗೊಳಿ ಜೈನ್ ಮಿಲನ್ ನ ಅಧ್ಯಕ್ಷರಾದ ಶಕುಂತಲಾ ವರ್ಮ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು, ಭಾರತೀಯ ಜೈನ್ ಮಿಲನ್ ವಲಯ 8 -ಮಂಗಳೂರು ವಿಭಾಗದ ವಲಯ ನಿರ್ದೇಶಕರಾದ ಶ್ರೀವರ್ಮ ಅಜ್ರಿಯವರ ಗೌರವ ಉಪಸ್ಥಿತಿಯಲ್ಲಿ ನಡೆಯಿತು.

ಸಾಮೂಹಿಕ ಪಂಚಾಣಮೋಕಾರ ಮಂತ್ರ ಪಠಣೆಯ ಮೂಲಕ ಪ್ರಾರಂಭವಾದ ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿ ಅಭ್ಯಾಗತರನ್ನು ಧಾರ್ಮಿಕ ಪಾಠಶಾಲೆಯ ಉಸ್ತುವಾರಿ ಸಮಿತಿ ಸಂಚಾಲಕರಾದ ಶರ್ಮಿಳ ಹೆಗ್ಡೆ ಸ್ವಾಗತಿಸಿದರು.

ಉದ್ಘಾಟಿಸಿ ಮಾತನಾಡಿದ ವೀರಂಜಯರವರು “ಮನಸ್ಸು ಮತ್ತು ಬುದ್ಧಿಯನ್ನು ಚುರುಕುಗೊಳಿಸುವ ಕ್ರೀಡೆಗಳಲ್ಲಿ ನಿರಂತರವಾಗಿ ತೊಡಗಿಕೊಳ್ಳುವ ಮೂಲಕ ನಾವೆಲ್ಲ ನಮ್ಮ ದೈಹಿಕ ಮಾತ್ರವಲ್ಲ ಮಾನಸಿಕ ಕ್ಷ ಕತೆಯನ್ನು ಕೂಡ ಕಾಪಾಡಿಕೊಳ್ಳಬಹುದು” ಎಂದು ನುಡಿದು ಕ್ರೀಡಾ ಕೂಟಕ್ಕೆ ಶುಭ ಹಾರೈಸಿದರು.

ಪ್ರಧಾನ ಅತಿಥಿ ಪೃಥ್ವಿರಾಜ್ ಜೈನ್ ಅವರೂ ಕ್ರೀಡಾ ಕೂಟದ ನಿರ್ವಹಣೆಯ ಜವಾಬ್ದಾರಿಯನ್ನು‌ ಸಹ ವಹಿಸಿಕೊಂಡು ಕೂಟದ ಕೊನೆಯವರೆಗೂ ಇದ್ದು ಸಹಕರಿಸಿದರು. ರೇವತಿ ಯವರು ಆಗಮಿಸಿದ ಸರ್ವರಿಗೂ ಧನ್ಯವಾದ ಸಮರ್ಪಿಸಿದರು ವೀರಜ್ ಅವರು ಕಾರ್ಯಕ್ರಮ ನಿರೂಪಿಸಿದರು.ಅದೇ ತನ್ನ ಐವತ್ತನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಪ್ರಧಾನ ಅತಿಥಿ ಪೃಥ್ವಿರಾಜ್ ಜೈನ್ ರವರಿಗೆ ಎಲ್ಲರೂ ಅಭಿನಂದಿಸಿ ಶುಭ ಹಾರೈಸಿದರು.

ಬಾಲಕ ಮತ್ತು ಬಾಲಕಿಯರಿಗೆ ಶಟಲ್ ಬ್ಯಾಡ್ಮಿಟನ್, ಚೆಸ್, ಕ್ಯಾರಂ ಹಾಗೂ ಕೆಲವು ಮನರಂಜನಾತ್ಮಕ ಆಟಗಳನ್ನ ಹಾಗೂ ಪುರುಷರು ಮತ್ತು ಮಹಿಳೆಯರಿಗೆ ಶಟಲ್ ಬ್ಯಾಡ್ಮಿಂಟನ್ ಹಾಗೂ ಮನೋರಂಜನಾತ್ಮಕ ಆಟಗಳನ್ನ ಆಯೋಜಿಸಲಾಗಿತ್ತು

ಸ್ಪರ್ಧೆಯ ವಿಜೇತರಿಗೆ ದಿನಾಂಕ 21 4 2024 ರಂದು ಮಹಾವೀರ ಜಯಂತಿಯ ಪ್ರಯುಕ್ತ ನಡೆಯುವ ವಿಶೇಷ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುವುದು.

ಇನ್ನು ಹೆಚ್ಚಿನ ಸುದ್ದಿಗಳು.

LEAVE A REPLY

Please enter your comment!
Please enter your name here

RELATED ARTICLES

Most Popular

Recent Comments

Times of karkala Add