Tuesday, May 12, 2026
Google search engine
Homeಕಾರ್ಕಳಮುಖ್ಯ ಶಿಕ್ಷಕ ಚಂದ್ರ ನಾಯ್ಕ್‌ ಅವರಿಗೆ ಕೋಟೇಶ್ವರ ಕೆಪಿಎಸ್‌ ಶಾಲೆಯಲ್ಲಿ "ಬೆಳದಿಂಗಳು ಚಂದ್ರ ನಾಯ್ಕ್‌ ಎಚ್‌...

ಮುಖ್ಯ ಶಿಕ್ಷಕ ಚಂದ್ರ ನಾಯ್ಕ್‌ ಅವರಿಗೆ ಕೋಟೇಶ್ವರ ಕೆಪಿಎಸ್‌ ಶಾಲೆಯಲ್ಲಿ “ಬೆಳದಿಂಗಳು ಚಂದ್ರ ನಾಯ್ಕ್‌ ಎಚ್‌ ” ಸಾರ್ವಜನಿಕ ಅಭಿನಂದನೆ

ಸೇವಾ ನಿವೃತ್ತರಾಗಲಿರುವ ಕೋಟೇಶ್ವರದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾಥಮಿಕ ವಿಭಾಗದ ಹಿರಿಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್‌ ಲಕ್ಷ್ಮಿ ದಂಪತಿಯನ್ನು ಅಭಿನಂದಿಸಲಾಯಿತು.

ಸದಾ ಹೊಸ ಯೋಚನೆ ಹೊಸ ಯೋಜನೆಯ ಮೂಲಕ ತಾನು ಸೇವೆ ಸಲ್ಲಿಸಿದ ಶಾಲೆಗಳ ಸರ್ವಾಂಗೀಣ ಅಭಿವೃದ್ದಿಗೆ ಎಲ್ಲರ ಸಹಕಾರವನ್ನು ಪಡೆದುಕೊಂಡು ನಿರಂತರವಾಗಿ ಶ್ರಮಿಸಿ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆಯನ್ನು ನೀಡಿರುವ ಅಪರೂಪದ ವ್ಯಕ್ತಿ ಕೋಟೇಶ್ವರ ಕೆಪಿಎಸ್‌ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್‌ ಎಚ್‌. ಸರ್ಕಾರಿ ಸೇವೆಯ ಜೊತೆಗೆ ಸಮಾಜದ ವಿವಿಧ ರಂಗದಲ್ಲೂ ಸಕ್ರೀಯರಾಗಿ ಜನಸೇವೆ ತನ್ನನ್ನು ಅರ್ಪಿಸಿದ್ದಾರೆ ಎಂದು ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಾಜಿ ಮಂಡಲ ಪ್ರಧಾನರಾದ ಉಡುಪಿ ತಾಲ್ಲೂಕಿನ ಪೆರ್ಡೂರು ಶಾಂತರಾಮ ಸೂಡ ಶುಭಶಂಸನೆ ಮಾಡಿದರು.

ಅವರು ಶನಿವಾರ ಕೋಟೇಶ್ವರದ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ ಪ್ರಾಥಮಿಕ ವಿಭಾಗದ ಹಳೇ ವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ ಮತ್ತು ಪೋಷಕ ಸಮಿತಿಯು ಚಂದ್ರ ನಾಯ್ಕ್‌ ಅವರ ಸೇವಾವಧಿಯ ಕುಂದಾಪುರ ಆನಗಳ್ಳಿ, ಬ್ರಹ್ಮಾವರ ಶಿರಿಯಾರ ಕೊಳ್ಕೆಬೈಲು, ಹೆಬ್ರಿಯ ಶಿವಪುರ ನಾಯರಕೋಡು, ಕುಂದಾಪುರ ತೆಕ್ಕಟೆಯ ಕುವೆಂಪು ಶತಮಾನೋತ್ಸವ, ಬೈಂದೂರು ವಂಡ್ಸೆ ಶಾಲೆಗಳ ಒಗ್ಗೂಡುವಿಕೆಯಿಂದ ಕೆಪಿಎಸ್‌ ಕೋಟೇಶ್ವರದ ಶ್ರೀ ಗೋಪಾಡಿ ರುಕ್ಮಿಣಿ ಶ್ರೀನಿವಾಸ ರಾವ್‌ ರಂಗಮಂಟಪದಲ್ಲಿ ” ಬೆಳದಿಂಗಳು ಚಂದ್ರ ನಾಯ್ಕ್‌ ಎಚ್‌ ” ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಇಲಾಖೆಯಲ್ಲಿ ಇಂತಹ ವ್ಯಕ್ತಿಗಳು ದೊರೆಯುವುದು ಕಷ್ಟ :

ನಮ್ಮಲ್ಲಿ 3 ತರಹದ ಜನ ಇದ್ದಾರೆ. ಸರ್ಕಾರ ಸಂಬಳ ಕೊಟ್ಟರೆ ಮಾತ್ರ ಕೆಲಸ ಮಾಡುವ ವರ್ಗವೊಂದಿದೆ, ಸರ್ಕಾರದಿಂದ ಎಷ್ಟು ನಾವು ಜೇಬಿಗಿಳಿಸಬಹುದು ಎನ್ನುವ ವರ್ಗವಿದೆ, ಸರ್ಕಾರ ಸಂಬಳ ಕೊಡಲಿ ಬಿಡಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ವರ್ಗ ಕೂಡ ಇದೆ. ಚಂದ್ರ ನಾಯ್ಕ್‌ ಅತ್ಯಂತ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದಾರೆ. ತಾನು ಸೇವೆ ಸಲ್ಲಿಸಿದ ಶಾಲೆಗಳನ್ನು ದಾನಿಗಳು ಮತ್ತು ಸರ್ವರ ಸಹಕಾರ ಪಡೆದು ಖಾಸಗಿ ಶಾಲೆಗೂ ಮೀರಿ ಬೆಳೆಸಿದ್ದಾರೆ. ಇಂತಹ ವ್ಯಕ್ತಿಗಳು ಸಿಗುವುದು ಅತ್ಯಂತ ಅಪರೂಪ, ಹೀಗೆ ಸೇವೆ ಮಾಡಲು ಯಾರಿಂದಲೂ ಅಸಾಧ್ಯ, ಚಂದ್ರ ನಾಯ್ಕ್‌ ಅವರ ಸೇವೆಯನ್ನು ಊರೇ ಕೊಂಡಾಡಿದೆ, ಶಿಕ್ಷಣ ಇಲಾಖೆಯಲ್ಲಿ ಇಂತಹ ವ್ಯಕ್ತಿಗಳು ದೊರೆಯುವುದು ಕಷ್ಟ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಗಣಪತಿ ಕೆ ಶಿವಮೊಗ್ಗ ಹೇಳಿದರು.

*ದೇವರಿಗಿಂತ ದೊಡ್ಡ ಸ್ಥಾನ ಗುರುವಿಗಿದೆ. ಅಂತಹ ಸಂಪೂರ್ಣ ವ್ಯಕ್ತಿತ್ವ ಚಂದ್ರ ನಾಯ್ಕ್‌ ಅವರಿಗಿದೆ.

:* ಕೆಪಿಎಸ್‌ ಕೋಟೇಶ್ವರದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಕೋಟೇಶ್ವರ ಶ್ರೀಧರ ವಿಠ್ಠಲ ಕಾಮತ್‌ ಮಾತನಾಡಿ ದೇವರಿಗಿಂತ ದೊಡ್ಡ ಸ್ಥಾನ ಗುರುವಿಗಿದೆ. ಅಂತಹ ಸಂಪೂರ್ಣ ವ್ಯಕ್ತಿತ್ವ ಚಂದ್ರ ನಾಯ್ಕ್‌ ಅವರಿಗಿದೆ. ಅವರದು ಮಾತೃಹೃದಯ. ಶಾಲೆಗೆ ದಾನಿಗಳು ಬಂದು ದೇಣಿಗೆ ಮಟ್ಟಿಗೆ ಜನರ ಪ್ರೀತಿಯನ್ನು ಗಳಿಸಿ ಅತ್ಯಂತ ಸಮರ್ಪಣಾ ಭಾವದಿಂದ ಸೇವೆ ಮಾಡಿ ನಮ್ಮ ಕೋಟೇಶ್ವರ ಶಾಲೆಯನ್ನು ಬೆಳಗಿಸಿದ್ದಾರೆ ಎಂದು ಅಭಿನಂದಿಸಿದ್ದಾರೆ.

ನಮ್ಮ ಶಾಲೆಯಲ್ಲಿ ಚಂದ್ರ ನಾಯ್ಕ್‌ ಒಳ್ಳೇಯ ರೀತಿಯಲ್ಲಿ ಕೆಲಸ ಮಾಡಿ ಮುನ್ನಡೆಸಿದ್ದಾರೆ

. : ಕೆಪಿಎಸ್‌ ಕೋಟೇಶ್ವರದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಥಶಿಲ್ಪಿ ರಾಜಗೋಪಾಲ ಆಚಾರ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯಲ್ಲಿ ಚಂದ್ರ ನಾಯ್ಕ್‌ ಒಳ್ಳೇಯ ರೀತಿಯಲ್ಲಿ ಕೆಲಸ ಮಾಡಿ ಮುನ್ನಡೆಸಿದ್ದಾರೆ. ಮುಂದೆ ಎಲ್ಲರೂ ಸೇರಿ ಅತ್ಯುತ್ತಮವಾಗಿ ಸೇವೆ ಸಲ್ಲಿಸಿ ಶಾಲೆಯನ್ನು ಬೆಳಗಿಸಿ ಎಂದರು.

35 ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದೇನೆ 

ಚಂದ್ರ ನಾಯ್ಕ್‌. : ಸಾರ್ವಜನಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಹಿರಿಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್‌ ಎಚ್ ಶಿಕ್ಷಣ ಇಲಾಖೆಯಲ್ಲಿ ೩೫ ವರ್ಷಗಳ ಸಾರ್ಥಕ ಸೇವೆಯನ್ನು ಸಲ್ಲಿಸಿದ್ದೇನೆ. ಸಾರ್ಥಕ ಭಾವವಿದೆ. ಸೇವೆಸಲ್ಲಿಸಿದ ಎಲ್ಲಾ ಶಾಲೆಯಲ್ಲೂ ಶಾಲೆಗಳ ಉನ್ನತಿಗಾಗಿ ಸೇವೆ ಮಾಡಿದ ಸಂತೃಪ್ತಿಯಿದೆ. ಸಮಾಜದ ಸೇವೆಗಾಗಿ ಇನ್ನಷ್ಟು ಸಕ್ರೀಯನಾಗುತ್ತೇನೆ. ಸೇವಾವಧಿಯಲ್ಲಿ ಸಹಕಾರ ನೀಡಿ ಕುಟುಂಬ ವರ್ಗ ಮತ್ತು ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಕುಂದಾಪುರ ತಾಲ್ಲೂಕಿನ ಶಂಕರನಾರಾಯಣದ ಹೆರಪಳ್ಳಿ ಚಂದ್ರ ನಾಯ್ಕ್‌ ಪರ್ಕಳ ಅವರನ್ನು ವಿಶಿಷ್ಠ ರೀತಿಯಲ್ಲಿ ಸಾರ್ವಜನಿಕವಾಗಿ ಗೌರವಿಸಿ ಬೀಳ್ಕೊಡುವ ಸಂಭ್ರಮದ ಕಾರ್ಯಕ್ರಮ ಕೋಟೇಶ್ವರದಲ್ಲಿ ನಡೆಯಿತು. ಚಂದ್ರ ನಾಯ್ಕ್‌ ಅವರ ಸಾರ್ವಜನಿಕ ಅಭಿನಂದನೆ ಬೀಳ್ಕೋಡುವ ಕಾರ್ಯಕ್ರಮ ಸಂಭ್ರಮದಲ್ಲಿ ಸ್ನೇಹ ಸಮ್ಮೀಲನ, ಗುರುವಂದನೆ, ಗುರುಶಿಷ್ಯರ ಸಮ್ಮೇಲನ, ಸಹಕರಿಸಿದವರ ನೆನೆಯುವ ಕಾರ್ಯ, ಜೀವನ ಮತ್ತು ವೃತ್ತಿ ಜೀವನದಲ್ಲಿ ಸಹಕರಿಸಿದ ಸರ್ವರನ್ನು ಸ್ಮರಿಸಿದ ರೀತಿ ಅವಿಸ್ಮರಣೀಯವಾಗಿ ಭಾವನಾತ್ಮಕವಾಗಿತ್ತು. ವಿಶೇಷ ಅಪರೂಪದ ಸಂಭ್ರಮದ ಕಾರ್ಯಕ್ರಮವಾಗಿ ಮೂಡಿಬಂತು. ಕೋಟೇಶ್ವರ ಕೆಪಿಎಸ್‌ ಶಾಲೆಯ ಹಿರಿಯ ಮುಖ್ಯ ಶಿಕ್ಷಕ ಚಂದ್ರ ನಾಯ್ಕ್‌ ಎಚ್‌, ಪತ್ನಿ ಲಕ್ಷ್ಮಿ, ಮಕ್ಕಳಾದ ಪ್ರಜ್ನಾ ಮತ್ತು ಪ್ರಜ್ವಲ್‌ ಅವರನ್ನು ಗೌರವಿಸಲಾಯಿತು.

ಚಂದ್ರ ನಾಯ್ಕ್‌ ಸೇವೆ ಸಲ್ಲಿಸಿದ ಶಾಲೆಗಳ ಮುಖ್ಯಸ್ಥರು, ಪ್ರಮುಖರು, ಸೇವಾವಧಿಯಲ್ಲಿ ಸಹಕರಿಸಿ ಹಲವರನ್ನು ಗೌರವಿಸಲಾಯಿತು. ನಾಟ್ಯ ಸ್ಕೂಲ್‌ ಆಫ್‌ ಡಾನ್ಸ್‌ ಕೋಟೇಶ್ವರ ತಂಡದಿಂದ ಸಾಂಸ್ಕೃತಿಕ ಸಿಂಚನ, ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಕಂಸವಧೆ ಯಕ್ಷಗಾನ ನಡೆಯಿತು.

ಇತಿಹಾಸ ಪ್ರಸಿದ್ಧ ಪೆರ್ಡೂರು ಶ್ರೀಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಮಾಜಿ ಮಂಡಲ ಪ್ರಧಾನರಾದ ಉಡುಪಿ ತಾಲ್ಲೂಕಿನ ಪೆರ್ಡೂರು ಶಾಂತರಾಮ ಸೂಡ, ಕೆಪಿಎಸ್‌ ಕೋಟೇಶ್ವರದ ಶತಮಾನೋತ್ಸವ ಸಮಿತಿಯ ಅಧ್ಯಕ್ಷರಾದ ಉದ್ಯಮಿ ಕೋಟೇಶ್ವರ ಶ್ರೀಧರ ವಿಠ್ಠಲ ಕಾಮತ್‌, ಕೆಪಿಎಸ್‌ ಕೋಟೇಶ್ವರದ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಥಶಿಲ್ಪಿ ರಾಜಗೋಪಾಲ ಆಚಾರ್ಯ,ಕೋಟೇಶ್ವರ ಡಾ. ಎನ್.ಆರ್.‌ ಆಚಾರ್ಯ ಮೆಮೋರಿಯಲ್‌ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಭಾಸ್ಕರ ಆಚಾರ್ಯ, ಉದ್ಯಮಿ ಮಲ್ಯಾಡಿ ಶಿವರಾಮ ಶೆಟ್ಟಿ, ಉದ್ಯಮಿ ಶಿರಿಯಾರ ಕೊಳ್ಕೆಬೈಲು ರವೀಂದ್ರ ನಾಥ ಶೆಟ್ಟಿ, ಉದ್ಯಮಿ ಶಂಕರ ಕಾಮತ್‌ ಕೋಟೇಶ್ವರ, ಉದ್ಯಮಿ ಗಜೇಂದ್ರ ಶೆಟ್ಟಿ ಮೂಡುಗೋಪಾಡಿ, ಕೊಳ್ಕೆಬೈಲು ನಡುಮನೆ ಪ್ರಸಾದ ಶೆಟ್ಟಿ, ಆಟಕೆರೆ ವಿಶ್ವನಾಥ ಪೈ ಕೋಟೇಶ್ವರ, ನಿವೃತ್ತ ಉಪಪ್ರಾಂಶುಪಾಲ ಹೆರೋಳ್ಳಿ ಕೃಷ್ಣ ಆಚಾರ್ಯ ನಿಟ್ಟೆ, ಕುಂದಾಪುರ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ ಕುಮಾರ್‌ ಶೆಟ್ಟಿ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಹಂಗಳೂರಿನ ಹರೀಶ ಕುಮಾರ್‌ ಶೆಟ್ಟಿ, ಕೋಟೇಶ್ವರದ ದಿನೇಶ ನಾಯ್ಕ್‌, ಬೈಂದೂರಿನ ಸುರೇಶ ಆಚಾರ್ಯ, ನಿವೃತ್ತ ಜೀವವಿಮಾ ಅಭಿವೃದ್ಧಿ ಅಧಿಕಾರಿ ರತ್ನಾಕರ ಶೆಟ್ಟಿ ಚೋರಾಡಿ, ನಿವೃತ್ತ ಮುಖ್ಯ ಶಿಕ್ಷಕಿ ಭಾರತಿ ಮೂಡುಗೋಪಾಡಿ, ಕೆಪಿಎಸ್‌ ಕೋಟೇಶ್ವರದ ಹಳೇ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಸುಬ್ರಹ್ಮಣ್ಯ ಶೆಟ್ಟಿಗಾರ್‌, ಶಾಲಾಭಿವೃದ್ಧಿ ಸಮಿತಿಯ ಮಾಜಿ ಉಪಾಧ್ಯಕ್ಷ ವಿಶ್ವನಾಥ್‌, ಎಂಜಿನಿಯರ್‌ ಗುರುರಾಜ ರಾವ್‌ ಕೋಟೇಶ್ವರ, ನಿವೃತ್ತ ಬ್ಯಾಂಕ್‌ ಮ್ಯಾನೇಜರ್‌ ಗೋಪಾಲಕೃಷ್ಣ ಕುಂಭಾಶಿ, ಉದ್ಯಮಿಗಳಾದ ರಂಗನಾಥ ಭಟ್‌, ವಿಠ್ಠಲದಾಸ್‌ ಭಟ್‌, ಎಸ್‌ ಡಿಎಂಸಿ ಸದಸ್ಯ ಅಶೋಕ್‌, ಶ್ರೀಧರ ಶೆಟ್ಟಿ ಆನಗಳ್ಳಿ, ಮುಖ್ಯ ಶಿಕ್ಷಕಿ ಪೂರ್ಣೀಮಾ, ಶಿವಪುರ ಖಜಾನೆಯ ರವಿ ಕುಮಾರ್‌, ಹಿರಿಯ ಶಿಕ್ಷಕಿ ಪಾರ್ವತಿ ಮುದ್ದೋಡಿ, ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಅಧ್ಯಕ್ಷ ಪ್ರಮೋದ್‌ ರೈ ಪಳಜ, ಕೊಳನ್‌ ಕಟ್ಟೆ ವಾಸುದೇವಾ ರಾವ್‌, ಯುಸೂಭ್‌ ಸಾಹೇಬ್‌ ಕೋಟೇಶ್ವರ, ಕೆಪಿಎಸ್‌ ಕೋಟೇಶ್ವರ ಪ್ರಾಂಶುಪಾಲ ಪ್ರಕಾಶ ಶೆಟ್ಟಿ, ಸುರೇಶ ಜೋಗಿ ಕೋಟೇಶ್ವರ, ಕೃಷ್ಣದೇವ ಕಾರಂತ್‌ ಕೋಣಿ, ಶ್ರೀಧರ ನಾಯ್ಕ್‌ ಕೋಟೇಶ್ವರ, ನಾಗರಾಜ್‌ ಕೋಟೇಶ್ವರ, ಮಂಜುನಾಥ ಗಾಣಿಗ, ಸೇರಿದಂತೆ ಕೋಟೇಶ್ವರ ಮತ್ತು ಉಡುಪಿ ಜಿಲ್ಲೆಯ ವಿವಿದೆಡೆಯ ಗಣ್ಯರು, ಶಿಕ್ಷಕ ಸಮೂಹ, ಶಿಷ್ಯ ವೃಂದದವರು, ಶಾಲಾ ವಿದ್ಯಾರ್ಥಿ ಸಮೂಹ, ಜನಪ್ರತಿನಿಧಿಗಳು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಸಂಘಸಂಸ್ಥೆಗಳ ಪ್ರಮುಖರು, ಚಂದ್ರ ನಾಯ್ಕ್‌ ಅವರ ಅಭಿಮಾನಿಗಳು ಸೇರಿದಂತೆ ನೂರಾರು ಮಂದಿ ” ಚಂದ್ರ ನಾಯ್ಕ್‌ ಅವರ ಬೆಳದಿಂಗಳ ಅಭಿನಂದನಾ ಸಂಭ್ರಮ ” ಕ್ಕೆ ಸಾಕ್ಷಿಯಾದರು.

ಮಮತಾ ಕಿಶೋರ್‌ ಅಭಿನಂದನ ಪತ್ರ ವಾಚಿಸಿದರು. ಮನೋಹರ ಪೈ ಅಂಕದಕಟ್ಟೆ ಪರಿಚಯಿಸಿದರು. ಕೃಷ್ಣ ಆಚಾರ್ಯ ನಿಟ್ಟೆ ಮತ್ತು ಪ್ರಸಾದ ಶೆಟ್ಟಿ ಕೊಳ್ಕೆಬೈಲ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರಾ ಬಿ. ಶೆಟ್ಟಿ ಸ್ವಾಗತಿಸಿದರು. ಶಿಕ್ಷಕ ಶಶಿಧರ ಶೆಟ್ಟಿ ನಂಚಾರು ನಿರೂಪಿಸಿದರು. ಸುಮನಾ ವಂದಿಸಿದರು.

 

 

 

 

 

 

 

 

 

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments