Home Blog

ಡಿ.15:ಭಾರತ U15 ವಾಲಿಬಾಲ್ ಬಾಲಕಿಯರ ತಂಡದ ನಾಯಕಿ ನಮ್ಮೂರಿನ ಹೆಮ್ಮೆಯ ಸಾಧಕಿಗೆ ಭವ್ಯ ಸ್ವಾಗತ ಕಾರ್ಯಕ್ರಮ

0

ಭಾರತ U15 ವಾಲಿಬಾಲ್ ಬಾಲಕಿಯರ ತಂಡದ ನಾಯಕಿ ನಮ್ಮೂರಿನ ಹೆಮ್ಮೆಯ ಸಾಧಕಿಗೆ ಭವ್ಯ ಸ್ವಾಗತ ಕಾರ್ಯಕ್ರಮ

ಡಿಸೆಂಬರ್ 4 ರಿಂದ 13 ವರಗೆ ಚೀನಾದಲ್ಲಿ ನಡೆದ ವಿಶ್ವ ಶಾಲಾ‌ ಮಕ್ಕಳ U15 ವಾಲಿಬಾಲ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ ಭಾರತದ ಬಾಲಕಿಯರ ವಾಲಿಬಾಲ್ ತಂಡದ ಕಪ್ತಾನಳಾಗಿ ತಂಡವನ್ನು ಮುನ್ನಡೆಸಿ ಉತ್ತಮ ಪ್ರದರ್ಶನ ನೀಡಿದ ಕರ್ನಾಟಕದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕ್ರೈಸ್ತಕಿಂಗ್ ಶಿಕ್ಷಣ ಸಂಸ್ಥೆಯ 9ನೇ ತರಗತಿ ವಿದ್ಯಾರ್ಥಿನಿ ಶಗುನ್ ಎಸ್‌ ವರ್ಮ ಹೆಗ್ಡೆ ತಾಯ್ನಾಡಿಗೆ ಮರಳುತ್ತಿರುವ ಸಂದರ್ಭದಲ್ಲಿ ಅವರನ್ನು ಗೌರವಪೂರ್ಣವಾಗಿ ಸ್ವಾಗತಿಸುವ ಸಲುವಾಗಿ ದಿನಾಂಕ 15 ಸೋಮವಾರ ಬೆಳಿಗ್ಗೆ 9:00ಕ್ಕೆ ಅನಂತಶಯನ ವೃತ್ತದಿಂದ ಕ್ರೈಸ್ತಕಿಂಗ್ ಶಿಕ್ಷಣ ಸಂಸ್ಥೆಯವರೆಗೆ ಸ್ವಾಗತ ಮೆರವಣಿಯನ್ನು ಶಿಕ್ಷಣ ಸಂಸ್ಥೆ ಹಾಗೂ ಕ್ರೀಡಾಭಿಮಾನಿಗಳ ವತಿಯಿಂದ ಆಯೋಜಿಸಲಾಗಿದೆ.

ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ‌ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮೂರಿನ ಕೀರ್ತಿಯನ್ನು‌ ಹೆಚ್ಚಿಸಿದ ಕ್ರೀಡಾಪಟುವನ್ನು ಸ್ವಾಗತಿಸುವ ‌ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಸಂಘಟಕರ ಪರವಾಗಿ ವಿನಂತಿಸಲಾಗಿದೆ.

ನಾಳೆ(ಡಿ.14) ಹುಟ್ಟೂರಿಗೆ ಆಗಮಿಸುತ್ತಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ವಂದನಾ ಕಾರ್ಯಕ್ರಮ

0

ಕಾರ್ಕಳದ ಪ್ರಖರ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿಯವರಿಂದ ದೇಶಭಕ್ತಿಯ ಮಾತುಗಳು

ಸೈನ್ಯದಿಂದ ನಿವೃತ್ತಿ ಹೊಂದಿ ಹುಟ್ಟೂರಿಗೆ ಆಗಮಿಸುತ್ತಿರುವ ಪ್ರವೀಣ್ ಕುಮಾರ್ ಶೆಟ್ಟಿ ಅವರಿಗೆ ನಾಳೆ ಕುಕ್ಕುಂದೂರು ವಿಜೇತ ಶಾಲಾ ಮೈದಾನದಲ್ಲಿ ವಂದನಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಕಾರ್ಕಳದ ಪ್ರಖರ ಯುವ ವಾಗ್ಮಿ ಶ್ರೀಕಾಂತ್ ಶೆಟ್ಟಿಯವರು ದೇಶಭಕ್ತಿ ಮಾತುಗಳನ್ನಾಡಲಿದ್ದಾರೆ.

ಸಂಜೆ ೪ ಗಂಟೆಗೆ ಬೆಳ್ಮಣ್ಣ್ ಪೇಟೆಯಿಂದ ಕುಕ್ಕುಂದೂರು ವಿಜೇತ ವಿಶೇಷ ಶಾಲಾ ಕ್ರೀಡಾಂಗಣದವರೆಗೆ ಬೃಹತ್ ವಾಹನ ಜಾಥಾ ನಡೆಯಲಿದ್ದು, ತದನಂತರದಲ್ಲಿ ವಾಗ್ಮಿ ಶ್ರೀಕಾಂತ್ ಶೆಟ್ಟಿ ದೇಶಭಕ್ತಿ ಮಾತುಗಳು ನಡೆಯಲಿವೆ. ಸಂಜೆ ೬.೩೦ಕ್ಕೆ ಸರಿಯಾಗಿ ತುಳು ನಾಟಕ ರಂಗದಲ್ಲಿ ಇತಿಹಾಸವನ್ನು ನಿರ್ಮಿಸಿದ ಶಿವ ದೂತೆ ಗುಳಿಗೆ ನಾಟಕ ಪ್ರದರ್ಶನವಾಗಲಿದೆ.

ಪೆರ್ಡೂರಿನಲ್ಲಿ ರಾಜ್ಯಮಟ್ಟದ ಸಂಗೀತ ಸ್ಪರ್ಧೆ, ಪ್ರಮಾಣ ಪತ್ರ ವಿತರಣೆ

0

 

 

ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ಪ್ರತಿಭೆ ಇರುತ್ತದೆ. ಇಂತಹ ವೇದಿಕೆಗಳು ಸಿಕ್ಕಾಗ ಅವಕಾಶವನ್ನು ಬಳಸಿಕೊಳ್ಳಬೇಕು. ಅಂತಹ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆ ಕಲ್ಪಿಸುತ್ತಿರುವ ಚಾಣಕ್ಯ ಸಂಸ್ಥೆಯ ಸಮಾಜ ಮುಖಿ ಚಿಂತನೆ ಶ್ಲಾಘನೀಯ. ಯಾವುದೇ ಒಂದು ಪ್ರತಿಭೆ ಅನಾವರಣವಾಗಬೇಕಾದರೆ ಅದಕ್ಕೆ ಸೂಕ್ತ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 8 ವರ್ಷಗಳಿಂದ ನಿರಂತರವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯ ರಾಜಕುಮಾರ್ ಶೆಟ್ಟಿ ಹೇಳಿದರು.

ಅವರು ಪೆರ್ಡೂರು ಅನಂತ ಸೌರಭ ಸಭಾಂಗಣದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು, ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ ಇವರ ಸಹಯೋಗದೊಂದಿಗೆ
ಚಾಣಕ್ಯ ಮ್ಯೂಸಿಕ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ನಡೆದ ರಾಜ್ಯ ಮಟ್ಟದ ಟ್ರ್ಯಾಕ್ ಸಂಗೀತ ಸಮರದ ಸೆಮಿಫೈನಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಾಯಕರಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಪೆರ್ಡೂರು ಯುವಕ ಸಂಘದ ಅಧ್ಯಕ್ಷ ಪ್ರಸಾದ ಆಚಾರ್ಯ ಮಾತನಾಡಿ ಪೆರ್ಡೂರಿನಲ್ಲಿ ಯಕ್ಷಗಾನ, ನೃತ್ಯ ತರಗತಿ ಆರಂಭಗೊಂಡಿದ್ದರಿಂದ ಇಲ್ಲಿನ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದಂತಾಗಿದೆ.

ಸಾಮಾಜಿಕ ಕಾರ್ಯಕರ್ತ ತ್ರಿವರ್ಣ ವಿಶ್ವ ವೇದಿಕೆಯ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಕಿಳಂಜೆ ಮಾತನಾಡಿ ಸಮಾಜಮುಖಿ ಚಿಂತನೆ ಇರುವ ಉದಯಕುಮಾರ್ ಶೆಟ್ಟಿ ಅವರು ಪತ್ರಿಕೋದ್ಯಮದ ಜೊತೆ ಗ್ರಾಮೀಣ ಪ್ರತಿಭೆಗಳನ್ನು ಬೆಳಗಿಗೆ ತರುವಲ್ಲಿ ವಿಶೇಷ ಶ್ರಮವಹಿಸುತ್ತಿದ್ದಾರೆ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು ಶೆಟ್ಟಿ ವಹಿಸಿದ್ದರು.

ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ಧಿಕಾರಿ ಸುಧಾಕರ್ ಕುಲಾಲ್ ಪಟ್ಲ, ಪ್ರಗತಿಪರ ಕೃಷಿಕ ಪ್ರವೀಣ್ ಕುಮಾರ್, ತುಳುನಾಡು ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ, ಉದ್ಯಮಿ ನವೀನ್ ಪೆರ್ಡೂರು, ಸಂಗೀತ ನಿರ್ದೇಶಕ ರಮೇಶ್ ಡಿ. ಸಂಗೀತ ಗುರುಗಳಾದ ಸ್ಮಿತಾ ಭಟ್, ಶ್ರುತಿ ಭಟ್, ಸುಕೇಶ್ ಕುಲಾಲ್, ಪ್ರಸನ್ನ ಮುನಿಯಾಲು ಮೊದಲಾದವರು ಉಪಸ್ಥಿತರಿದ್ದರು.

ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಚಾಣಕ್ಯ ಡ್ಯಾನ್ಸ ಅಕಾಡೆಮಿ ಪೆರ್ಡೂರು ತಂಡದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.

 

ಬಜಗೋಳಿಯಲ್ಲಿ ಭಾರತೀಯ ಜೈನ್ ಮಿಲನ್ ಜಿನ ಭಜನಾ ಸ್ಪರ್ಧೆ

0

ಭಾರತೀಯ ಜೈನ್ ಮಿಲನ್ ವಲಯ 8 ರ ಮಂಗಳೂರು ವಿಭಾಗದ ಜಿನಭಜನೆ ಸ್ಪರ್ಧೆಗಳ ಸೀಸನ್ 9 , ಬಜಗೋಳಿಯ ಸುಮ್ಮಗುತ್ತು ಬಂಡಸಾಲೆ ಧರ್ಮಶಾಲೆ ತೀರ್ಥದಲ್ಲಿ ಯಶಸ್ವಿಯಾಗಿ ನಡೆಯಿತು.

ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ವೀರ್ ಸುರೇಂದ್ರ ಕುಮಾರ್ ಜ್ಯೋತಿ ಬೆಳಗಿಸಿ ಸ್ಪರ್ಧೆಗಳನ್ನು ಉದ್ಘಾಟಿಸಿದರು. ಮೂಡುಬಿದಿರೆ ಜೈನ್ ಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಆಶೀರ್ವಚನಗೈದರು.ವೀರಾಂಗನ ಅನಿತಾ ಸುರೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಸನ್ನ ಕುಮಾರ್, ಪದ್ಮಪ್ರಸಾದ್ ಹೆಗ್ಡೆ, ಸುಮಂತ್ ಕುಮಾರ್ ಜೈನ್,ಸೋನಿಯಾ ವರ್ಮಾ,ಜಯವರ್ಮ ಹೆಗ್ಡೆ, ವಜ್ರನಾಭ ಚೌಟ, ಧರ್ಮರಾಜ ಜೈನ್ ಅತಿಥಿಗಳಾಗಿ ಭಾಗವಹಿಸಿದರು.

ಕಿರಿಯರ ವಿಭಾಗದ 35 ಹಾಗೂ ಹಿರಿಯರ ವಿಭಾಗದ 58 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು.

ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಕಾರ್ಕಳ ಜೈನ ಮಠದ ಲಲಿತಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ಹಾಗೂ ಮೂಡುಬಿದಿರೆ ಚಾರುಕೀರ್ತಿ ಮಹಾಸ್ವಾಮಿಗಳು ಆಶೀರ್ವಚನಗೈದರು.

ಡಿ.ಸುರೇಂದ್ರಕುಮಾರ್, ಅನಿತಾ ಸುರೇಂದ್ರ ಕುಮಾರ್ ಸೋನಿಯವರ್ಮ, ಕೆ.ಯುವರಾಜ ಭಂಡಾರಿ, ಪುಷ್ಪರಾಜ್ ಜೈನ್, ಯುವರಾಜ್ ಜೈನ್,ಪ್ರವೀಣ್ ಕುಮಾರ್, ರತ್ನಾಕರ್ ಜೈನ್, ಮಯೂರಕೀರ್ತಿ, ರಕ್ಷಿತ್ ಜೈನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಪ್ರಶಸ್ತಿ ವಿತರಿಸಿದರು, ಸುದರ್ಶನ್ ಜೈನ್ ಸಭೆಯ ಅಧ್ಯಕ್ಷರಾಗಿ ಭಾಗವಹಿಸಿದರು.

ವಿಭಾಗದ ನಿರ್ದೇಶಕರಾದ ಜಯರಾಜ ಕಂಬಳಿ, ಸೋಮಶೇಖರ್, ಪ್ರಮೋದ್ ಕುಮಾರ್, ಶ್ರೀವರ್ಮ ಆಜ್ರಿ, ಸುಕುಮಾರ್ ಬಲ್ಲಾಳ್ ,ರಾಜಶ್ರೀ ಹೆಗ್ಡೆ, ಯುವರಾಜ್ ಬಲಿಪ, ಕಾರ್ಯದರ್ಶಿ ಸುಭಾಶ್ಚಂದ್ರ ಜೈನ್, ಜೊತೆ ಕಾರ್ಯದರ್ಶಿಗಳಾದ ಶ್ವೇತಾ ಜೈನ್, ಶಶಿಕಲಾ ಹೆಗ್ಡೆ, ಮಿಲನ್ ಅಧ್ಯಕ್ಷ ವರ್ಧಮಾನ ಜೈನ್, ಕಾರ್ಯದರ್ಶಿ ಓಂ ಪ್ರಕಾಶ್ ಜೈನ್, ಯುವ ಜೈನ್ ಮಿಲನ್ ಅಧ್ಯಕ್ಷ ಪ್ರಧಾನ ಜೈನ್, ಉಪಾಧ್ಯಕ್ಷ ವಿರಾಜ್ ಜೈನ್ ಕಾರ್ಯದರ್ಶಿ ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.

ಹಿರಿಯರ ವಿಭಾಗದಲ್ಲಿ ಧರ್ಮಸ್ಥಳದ ಬಾಹುಬಲಿ ಸೇವಾ ಸಮಿತಿ ಪ್ರಥಮ ಬಹುಮಾನ, ಉಜಿರೆಯ ಶುಕ್ಲ ತಂಡ ದ್ವಿತೀಯ ಪ್ರಶಸ್ತಿ ಹಾಗೂ ಮೂಡುಬಿದಿರೆಯ ಸಂಪೂಜ್ಯ ತಂಡ ತೃತೀಯ ಪ್ರಶಸ್ತಿಗಳನ್ನು ಜಯಿಸಿದರೆ, ಸುವರ್ಣ ಪ್ರಶಸ್ತಿ ಬೆಳ್ತಂಗಡಿಯ ಕಾಣಿಯೂರು ವಿಜಯ ಧ್ವನಿ ಹಿರಿಯ ನಾಗರಿಕರ ತಂಡ ಗಳಿಸಿತು.

ಬಜಗೋಳಿಯ ಅನಂತಶ್ರೀ ತಂಡ, ಉಜಿರೆಯ ಶ್ರುತ ತಂಡ, ಮಂಗಳೂರಿನ ಗೊಮ್ಮಟೇಶ್ವರ ತಂಡ, ಮೂಡುಬಿದಿರೆಯ ಬ್ರಾಹ್ಮಿ ಮತ್ತು ರತ್ನತ್ರಯ ತಂಡಗಳು ರಾಜ್ಯ ಮಟ್ಟದ ಸ್ಪರ್ಧೆಗಳ ಅರ್ಹತಾ ಪ್ರಶಸ್ತಿ ಗಳಿಸಿದವು.

ಕಿರಿಯರ ವಿಭಾಗದಲ್ಲಿ ಬಂಟ್ವಾಳದ ವಿಟ್ಲ ಸಮ್ಯಕ್ತ್ವ ಪ್ರಥಮ, ಉಜಿರೆಯ ಶುಕ್ಲ ದ್ವಿತೀಯ ಹಾಗೂ ಮೂಡುಬಿದಿರೆಯ ಚಾರುಶ್ರೀ ತಂಡ ತೃತೀಯ ಪ್ರಶಸ್ತಿ ಗಳಿಸಿತು.ಉಜಿರೆಯ ಹರ್ಷದ, ವೇಣೂರಿನ ಜಿನ ಪ್ರವಕ್ತ ಮತ್ತು ಶ್ರೀ ಪ್ರವಕ್ತ ತಂಡಗಳು ಸೆಮಿಫೈನಲ್ ಗೆ ಅರ್ಹತಾ ಪ್ರಶಸ್ತಿ ಗಳಿಸಿದವು.

 

 

ಹೆಬ್ರಿಯ ಚಾಣಕ್ಯ ಸಂಸ್ಥೆ ರಾಜ್ಯಮಟ್ಟದ ಸಂಗೀತ ಸ್ಪರ್ಧೆ ವಾಯ್ಸ್ ಆಫ್ ಚಾಣಕ್ಯ-2025 ಸೀಸನ್ 8 ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ- ಶಾಂತರಾಮ ಸೂಡ

0

ಹೆಬ್ರಿಯ ಚಾಣಕ್ಯ ಸಂಸ್ಥೆ ರಾಜ್ಯಮಟ್ಟದ ಸಂಗೀತ ಸ್ಪರ್ಧೆ ವಾಯ್ಸ್ ಆಫ್ ಚಾಣಕ್ಯ-2025 ಸೀಸನ್ 8

ಗ್ರಾಮೀಣ ಪ್ರತಿಭೆಗಳ ಅನಾವರಣಕ್ಕೆ ವೇದಿಕೆ- ಶಾಂತರಾಮ ಸೂಡ

ಹೆಬ್ರಿ, ಡಿ. 8: ಯಾವುದೇ ಒಂದು ಪ್ರತಿಭೆ ಅನಾವರಣವಾಗಬೇಕಾದರೆ ಅದಕ್ಕೆ ಸೂಕ್ತ ವೇದಿಕೆ ಅಗತ್ಯ. ಈ ನಿಟ್ಟಿನಲ್ಲಿ ಕಳೆದ 8 ವರ್ಷಗಳಿಂದ ಹೆಬ್ರಿಯ ಚಾಣಕ್ಯ ಸಂಸ್ಥೆ ನಿರಂತರವಾಗಿ ಸಂಗೀತ ಸ್ಪರ್ಧೆಯನ್ನು ಆಯೋಜಿಸುವುದರ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುತ್ತಿರುವುದು ಶ್ಲಾಘನೀಯ ಎಂದು ಪೆರ್ಡೂರು ಬಂಟರ ಸಂಘ ಹಾಗೂ ಪೆರ್ಡೂರು ಬಂಟರ ಸೌಹಾರ್ದ ಸಹಕಾರಿ(ನಿ) ಇದರ ಅಧ್ಯಕ್ಷ ಕೆ. ಶಾಂತರಾಮ ಸೂಡ ಹೇಳಿದರು.

ಅವರು ಪೆರ್ಡೂರು ಅನಂತ ಸೌರಭ ಸಭಾಂಗಣದಲ್ಲಿ ಚಾಣಕ್ಯ ಮ್ಯೂಸಿಕ್ ಅಕಾಡೆಮಿ ಹೆಬ್ರಿ ಇವರ ನೇತೃತ್ವದಲ್ಲಿ ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘ ಪೆರ್ಡೂರು,ಉದಯಕೃಷ್ಣಯ್ಯ ಶೆಟ್ಟ ಚಾರಿಟೇಬಲ್ ಟ್ರಸ್ಟ್‌ ಇವರ ಸಹಯೋಗದೊಂದಿಗೆ ನಡೆದ ರಾಜ್ಯ ಮಟ್ಟದ ಟ್ರ್ಯಾಕ್ ಸಂಗೀತ ಸಮರದ ಸೆಮಿಫೈನಲ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕುಂಬಾರರ ಗುಡಿ ಕೈಗಾರಿಕಾ ಸಂಘ, ಪೆರ್ಡೂರು ಇದರ ಅಧ್ಯಕ್ಷ ಸಂತೋಷ ಕುಲಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿ ಯಾವುದೇ ಒಂದು ಕ್ಷೇತ್ರದಲ್ಲಿ ಸಾಧನೆ ಮಾಡಬೇಕಾದರೆ ತರಬೇತಿ ಮತ್ತು ನಿರಂತರ ಪ್ರಯತ್ನ ಅಗತ್ಯ. ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ಸೂರಿ ನಡಿ ಕಲಿಸುವ ಚಾಣಕ್ಯ ಸಂಸ್ಥೆಯಲ್ಲಿ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಅವರ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ ಎಂದರು.

ಎಸ್.ಕೆ. ಗೋಲ್ಡಸ್ಮಿತ್ ಇಂಡಸ್ಟ್ರೀಯಲ್ ಕೋ- ಅಪರೇಟಿವ್ ಸೊಸೈಟಿ ಲಿ., ಮಂಗಳೂರು ಇದರ ಅಧ್ಯಕ್ಷ ಉಪೇಂದ್ರ ಆಚಾರ್ಯ ಪೆರ್ಡೂರು ಮಾತನಾಡಿ ಉದಯಕುಮಾರ್ ಶೆಟ್ಟಿ ಅವರು ಕೇವಲ ಪತ್ರಕರ್ತರಾಗಿರದೆ ಸಮಾಜಮುಖಿ ಚಿಂತನೆ ಜೊತೆ ಇಂತಹ ಹಲವಾರು ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದರ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.

ಸಮಾರಂಭದಲ್ಲಿ ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಮೋದ್ ರೈ ಪಳಜೆ,ಉದ್ಯಮಿ ಸತೀಶ್ ಶೆಟ್ಟಿ ಕುತ್ಯಾರುಬೀಡು, ಅನಂತಪದ್ಮನಾಭ ದೇವಳದ ಸ್ವಾಗತ ಸಮಿತಿಯ ಅಧ್ಯಕ್ಷ ಸಂದೀಪ್ ಶೆಟ್ಟಿ,ಚಾಣಕ್ಯ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ, ಪ್ರವೀಣ್ ಪಟೇಲ್, ಪ್ರಸನ್ನ ಮುನಿಯಾಲು, ವನಿತಾ, ಅಮೃತ ಸುಕೇಶ್ ಕುಲಾಲ್, ನಿತ್ಯಾನಂದ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಚಾಣಕ್ಯ ಸಂಗೀತ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಪ್ರಾರ್ಥಿಸಿದರು ಸಂಗೀತ ನಿರ್ದೇಶಕ ರಮೇಶ್ ಡಿ. ಸಂಗೀತ ಗುರುಗಳಾದ ಸ್ಮಿತಾ ಭಟ್, ಶ್ರುತಿ ಭಟ್ ತೀರ್ಪುಗಾರರಾಗಿ ಭಾಗವಹಿಸಿದ್ದರು. ಚಾಣಕ್ಯ ಸಂಸ್ಥೆಯ ಅಧ್ಯಕ್ಷ
ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ,ಮುದ್ರಾಡಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ್ ಭಟ್ ಬಲ್ಲಾಡಿ ಕಾರ್ಯಕ್ರಮ ನಿರೂಪಿಸಿ, ರಚಿತಾ ಕಬ್ಬಿನಾಲೆ ವಂದಿಸಿದರು. ಚಾಣಕ್ಯ ಡ್ಯಾನ್ಸ ಅಕಾಡೆಮಿ ಪೆರ್ಡೂರು ತಂಡದ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ವೈವಿಧ್ಯ ಕಾರ್ಯಕ್ರಮ ನಡೆಯಿತು.

ಈದು: ಪರಸ್ಪರ ಸೇವಾ ಟ್ರಸ್ಟ್ (ರಿ)ಈದು -ನಾರಾವಿ ವತಿಯಿಂದ ಹಿಂದೂ ಸಂಘಟನೆ ಕಾರ್ಯಕರ್ತ ಸಂತೋಷ್ ಆಚಾರ್ಯರವರಿಗೆ ಧನ ಸಹಾಯ

0

 

ಪರಸ್ಪರ ಸೇವಾ ಟ್ರಸ್ಟ್ (ರಿ)ಈದು -ನಾರಾವಿ ವತಿಯಿಂದ ಹಿಂದೂ ಸಂಘಟನೆಯ ಕಾರ್ಯಕರ್ತ ಸಂತೋಷ್ ಆಚಾರ್ಯರವರಿಗೆ ಧನ ಸಹಾಯ ಮಾಡಲಾಯಿತು.

ಇವರು ಒಂದು ತಿಂಗಳ ಹಿಂದೆ ವೆಡ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮನೆಯ ಮಾಡಿನಿಂದ ಕೆಳಗೆ ಬಿದ್ದು ಸೊಂಟ ಮತ್ತು ಕಾಲುಗಳಿಗೆ ಗಂಭೀರ ಗಾಯವಾಗಿ ತಿಂಗಳ ಕಾಲ ಚಿಕಿತ್ಸೆ ಪಡೆದು ಕೆಲವು ದಿನಗಳ ಹಿಂದೆ ಆಸ್ಪತ್ರೆಯಿಂದ ಬಂದು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸಂತೋಷ್ ರವರು ಕಡು ಬಡತನದಿಂದ ವಯಸ್ಸಾದ ತಂದೆ ತಾಯಿ ತನ್ನ ಎರಡು ವರ್ಷದ ಮಗು ಮತ್ತು ತನ್ನ ಹೆಂಡತಿಯೊಂದಿಗೆ ಜೀವನ ಸಾಗಿಸುತ್ತಿದ್ದು ಮನೆಗೆ ಆಧಾರ ಸ್ತಂಭವಾಗಿದ್ದ ಸಂತೋಷ್ ಈ ಆಕಸ್ಮಿಕ ಅವಘಡದಿಂದ ಮನೆಯಲ್ಲಿ ಕೂರುವ ಹಾಗೆ ಆಗಿದೆ. ಈ ಕಷ್ಟದ ಸಮಯವನ್ನು ತಿಳಿದ ಪರಸ್ಪರ ಸೇವಾ ಟ್ರಸ್ಟ್ ನ ಕಾರ್ಯಕರ್ತರು ಊರಿನವರ ಸಹಕಾರದಿಂದ ಒಂದು ಲಕ್ಷದ ಸಹಾಯಧನವನ್ನು ನೀಡಿದ್ದಾರೆ.

ಕ್ರಿಯೇಟಿವ್ ಕಾಲೇಜು ವಾರ್ಷಿಕೋತ್ಸವ – 2025

0

 

ಬಹುಮುಖ ಪ್ರತಿಭೆಗಳ ಸಂಭ್ರಮದ ವೇದಿಕೆ

ವೀರಪ್ಪ ಮೊಯ್ಲಿ, ಚುಟುಕು ಬ್ರಹ್ಮ ದುಂಡಿರಾಜ್, ಕುದ್ರೋಳಿ ಗಣೇಶ್, ಸು ಫ್ರಮ್ ಸೋ ಖ್ಯಾತಿಯ ರವಿ ಅಣ್ಣ ( ಶನಿಲ್ ಗೌತಮ್ ) ಮೊದಲಾದ ದಿಗ್ಗಜರು ಭಾಗಿ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನ ವಾರ್ಷಿಕೋತ್ಸವ ಆವಿರ್ಭವವು “ಸಿಂದೂರ ಸಂಭ್ರಮ” ಪರಿಕಲ್ಪನೆಯಲ್ಲಿ ಡಿ. 4, 5, 6 ರಂದು ಅದ್ದೂರಿಯಾಗಿ ಜರುಗಿತು.

ಡಿ. 4 ರಂದು ಕ್ರಿಯೇಟಿವ್ ಯಕ್ಷಾರಾಧನಮ್ ಹವ್ಯಾಸಿ ಕಲಾವಿದರಿಂದ ‘ಶ್ರೀರಾಮಾನುಗ್ರಹ ಸಿಂದೂರ ವಿಜಯ’ ಯಕ್ಷಗಾನ ಪ್ರದರ್ಶನ ನಡೆಯಿತು.

ಡಿ. 5 ರಂದು ದಿ. ಎಚ್.ಎಸ್ ವೆಂಕಟೇಶಮೂರ್ತಿಯವರ ಸವಿ ನೆನಪಿನ ಕುರಿತ ‘ ಭಾವ ನಮನ ‘ ಭಾವಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಖ್ಯಾತ ನಿರೂಪಕ ಅವಿನಾಶ್ ಕಾಮತ್ ರವರು ಕಾರ್ಯಕ್ರಮ ನಿರೂಪಿಸಿದರು.

ಕಾಲೇಜಿನ ವಿವಿಧ ಸ್ಪರ್ಧಾವಳಿಗಳ ಬಹುಮಾನ ವಿತರಣಾ ಕಾರ್ಯಕ್ರಮ ಜರುಗಿತು. ಸಹ ಸಂಸ್ಥಾಪಕರಾದ ವಿದ್ವಾನ್ ಗಣಪತಿ ಭಟ್ ರವರು ಪ್ರಾಸ್ತಾವಿಕ ನುಡಿಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು.

ಉದ್ಘಾಟಕರಾಗಿ ಆಗಮಿಸಿದ ಡಾ. ಜಿ. ರಾಮಕೃಷ್ಣ ಆಚಾರ್, ಸ್ಥಾಪಕರು, ಎಸ್. ಕೆ.ಎಫ್ ಎಲಿಕ್ಸರ್ ಇಂಡಿಯಾ ಮತ್ತು ಸಂಜೀವಿನಿ ಗೋಧಾಮ ಮುನಿಯಾಲು ಇವರು ಮಾತನಾಡಿ ‘ ಕಾಲೇಜುಗಳು ಬರಿ ಪಠ್ಯದ ಅಭ್ಯಾಸ ನೀಡುವ ಸ್ಥಳವಲ್ಲ. ವಿದ್ಯಾರ್ಥಿಗಳ ಸಾಮರ್ಥ್ಯವನ್ನೆತ್ತಿ ಹಿಡಿಯುವ ವೇದಿಕೆಗಳಾಗಬೇಕು. ಅಂತಹ ವೇದಿಕೆಗಳನ್ನು ವಿದ್ಯಾರ್ಥಿಗಳಿಗೆ ಕಲ್ಪಿಸಿ ಕೊಡುತ್ತಿರುವ ಕ್ರಿಯೇಟಿವ್ ಕಾಲೇಜಿನ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು.

ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ವಿಶ್ರಾಂತ ಪ್ರಾಚಾರ್ಯರಾದ ಕೆ. ಗುಣಪಾಲ್ ಕಡಂಬ, ಖ್ಯಾತ ನಟ ಶನಿಲ್ ಗೌತಮ್ ಇವರು ತಮ್ಮ ಮಾತುಗಳಲ್ಲಿ ಪ್ರತಿಭೆಗಳನ್ನು ಗುರುತಿಸಿ ಬೆಳೆಸುವಂತಹ ಕಾರ್ಯಕ್ರಮಗಳನ್ನು ಕಾಲೇಜು ಕೈಗೊಂಡಿರುವ ಬಗ್ಗೆ ಶ್ಲಾಘಿಸಿದರು.

ರಾತ್ರಿ ಅಂತಾರಾಷ್ಟ್ರೀಯ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಮ್ಯಾಜಿಕ್ ಶೋ ಕಾರ್ಯಕ್ರಮ ನಡೆದು, ಇದು ಎಲ್ಲರ ಮನಸೂರೆಗೊಂಡಿತು.

ಡಿ. 6 ರಂದು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನೆರವೇರಿತು. ಈ ಸಂದರ್ಭದಲ್ಲಿ 180 ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ಪ್ರೋತ್ಸಾಹ ಧನವನ್ನೂ ನೀಡಲಾಯಿತು. ಮುಖ್ಯ ಅತಿಥಿ ವಿರೂಪಾಕ್ಷ ದೇವರಮನೆ ಇವರು ‘ವಿದ್ಯಾರ್ಥಿಗಳ ಸಾಧನೆ ಎಂದರೆ ಕೇವಲ ಅಂಕಗಳಲ್ಲ. ವ್ಯಕ್ತಿತ್ವ ನಿರ್ಮಾಣವೂ ಅದೇ ಮಟ್ಟಿಗೆ ಮಹತ್ವದ್ದು. ವಿದ್ಯಾರ್ಥಿಗಳು ಸತತ ಅಭ್ಯಾಸದೊಂದಿಗೆ ತಮ್ಮ ಧ್ವನಿಯನ್ನು ಸ್ವಸ್ಥ ಸಮಾಜ ನಿರ್ಮಾಣದತ್ತ ರವಾನಿಸಬೇಕು ‘ ಎಂಬ ಸಂದೇಶವನ್ನು ನೀಡಿದರು. ಈ ಸಂದರ್ಭದಲ್ಲಿ ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯನ್ನು ವೇದಿಕೆಯಲ್ಲಿ 150 ವಿದ್ಯಾರ್ಥಿಗಳ ಸಮ್ಮುಖದಲ್ಲಿ ಗೀತ ಗಾಯನದೊಂದಿಗೆ ನೆರವೇರಿಸಲಾಯಿತು.

ಅಪರಾಹ್ನ ಚುಟುಕು ಚಕ್ರವರ್ತಿ ಎಚ್. ದುಂಡಿರಾಜ್ ರವರ ಉಪಸ್ಥಿತಿಯಲ್ಲಿ ‘ ಕ್ರಿಯೇಟಿವ್ ಸಾಹಿತ್ಯ ಸಾಂಗತ್ಯ ‘ ಕಾರ್ಯಕ್ರಮ ಜರುಗಿತು. ದುಂಡಿರಾಜ್ ರವರು ‘ ಯುವ ಮನಸ್ಸುಗಳ ಓದಿನ ಅಭ್ಯಾಸವೇ ಅವರ ಬದುಕಿನ ಶಕ್ತಿ ಕೇಂದ್ರ. ಪುಸ್ತಕವು ವ್ಯಕ್ತಿಯ ಚಿಂತನೆಗೆ ದಿಕ್ಕು ತೋರಿಸುವ ಗುರು ‘ ಎಂದು ಹೇಳಿದರು.

ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ಜರುಗಿತು. ಪ್ರಾಚಾರ್ಯ ವಿದ್ವಾನ್ ಗಣಪತಿ ಭಟ್ ರವರು ವಾರ್ಷಿಕ ವರದಿ ವಾಚಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕರ್ನಾಟಕ ಸರ್ಕಾರದ ಮಾಜಿ ಮುಖ್ಯಮಂತ್ರಿಗಳಾದ ವೀರಪ್ಪ ಮೊಯ್ಲಿ ರವರು ‘ ಶಿಕ್ಷಣ ಎಂದರೆ ಉದ್ಯೋಗ ಸಿಗುವ ಮಾರ್ಗ ಮಾತ್ರವಲ್ಲ. ಅದು ವ್ಯಕ್ತಿತ್ವ ನಿರ್ಮಾಣದ ಮೂಲನೆಲೆ. ಯುವಜನಾಂಗ ಮಾನವೀಯತೆಯೊಂದಿಗೆ ಕೈಜೋಡಿಸಿದಾಗ ಸಮಾಜದಲ್ಲಿ ನಿಜವಾದ ಬದಲಾವಣೆ ನಡೆಯುತ್ತದೆ ಎನ್ನುತ್ತಾ ಕ್ರಿಯೇಟಿವ್ ಕಾಲೇಜು ನಡೆಸುತ್ತಿರುವ ನೈತಿಕತೆ ಆಧಾರಿತ ಶೈಕ್ಷಣಿಕ ಚಟುವಟಿಕೆಗಳನ್ನು ಶ್ಲಾಘಿಸಿ, ಸಂಸ್ಥೆಯ ಮುಂದಿನ ಬೆಳವಣಿಗೆಗೆ ಶುಭ ಹಾರೈಸಿದರು.

ಸಂಸ್ಥೆ ಆರಂಭವಾಗಿ ಐದು ವರ್ಷಗಳು ಪೂರ್ಣಗೊಳ್ಳುವ ಶುಭಸಂದರ್ಭದಲ್ಲಿ ಐದು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಬೋಧಕೇತರ ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸಂಜೆ 7 ರಿಂದ ಕ್ರಿಯೇಟಿವ್ ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ” ಸಿಂದೂರ ಸಂಭ್ರಮ ” ಪರಿಕಲ್ಪನೆಯ ಅತ್ಯಂತ ವರ್ಣ ರಂಜಿತ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಾರ್ಷಿಕೋತ್ಸವ ಸಮಾರಂಭವು ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ, 2500 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು, ಬೋಧಕ – ಬೋಧಕೇತರ ವರ್ಗದವರು, ಪೋಷಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

 

ಡಿ.8 ರಿಂದ 11:ಕಾರ್ಕಳ ಬೆದ್ರ ಪ್ರೀಮಿಯರ್ ಲೀಗ್-2025

0

ಡಿ.8 ರಿಂದ 11:ಕಾರ್ಕಳ ಬೆದ್ರ ಪ್ರೀಮಿಯರ್ ಲೀಗ್-2025

ಎಸ್ ಬಿ ಸಿ ಕ್ರಿಕೆಟರ್ಸ್ ರವರ , ಬಂಡಿಮಠ ಫೌಂಡೇಶನ್ ಪ್ರಾಯೋಜಿತ ಕಾರ್ಕಳ ಬೆದ್ರ ಪ್ರೀಮಿಯರ್ ಲೀಗ್-2025 ವಿಶಿಷ್ಟ ಕ್ರಿಕೆಟ್ ಪಂದ್ಯಾವಳಿ ಡಿ.8 ರಿಂದ 11ರ ವರೆಗೆ ಕಾರ್ಕಳದ ಗಾಂಧಿಮೈದಾನದಲ್ಲಿ ನಡೆಯಲಿದೆ.

ಡಿಸೆಂಬರ್ 8 ರಿಂದ 11ರ ವರೆಗೆ ನಾಲ್ಕು ದಿನಗಳ ಕಾಲ ಅದ್ದೂರಿಯಾಗಿ ನಡೆಯಲಿದೆ, ಪ್ರಥಮ 1,11,111 ಮತ್ತು ದ್ವಿತೀಯ 66,666 ನಗದು ಬಹುಮಾನ ಹಾಗು ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ , ಬೆಸ್ಟ್ ಬೌಲರ್ , ಬೆಸ್ಟ್ ಬ್ಯಾಟ್ಸಮನ್ ನಗದು ಮತ್ತು ಟ್ರೋಫಿ ನೀಡಲಾಗುದು.

ಪ್ರಪ್ರಥಮ ಬಾರಿಗೆ ಕಾರ್ಕಳದಲ್ಲಿ ಇಂತಹ ದೊಡ್ಡ ಮಟ್ಟದ ಕ್ರಿಕೆಟ್ ಪಂದ್ಯಾಟವು ನಡೆಯಲಿದ್ದು, ಕಾರ್ಕಳ , ಮೂಡಬಿದ್ರಿ , ಬೆಳ್ತಂಗಡಿ ಮಂಗಳೂರು ವಲಯದ ಆಟಗಾರರು ಈ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.

ಕೊನೆಗೂ ಮದುವೆ ಬಗ್ಗೆ ಮೌನ ಮುರಿದು ವದಂತಿಗಳಿಗೆ ತೆರೆ ಎಳೆದ ಸ್ಮೃತಿ ಮಂಧಾನ

0

ಕೊನೆಗೂ ಮದುವೆ ಬಗ್ಗೆ ಮೌನ ಮುರಿದು ವದಂತಿಗಳಿಗೆ ತೆರೆ ಎಳೆದ ಸ್ಮೃತಿ ಮಂಧಾನ

ಮುಂಬೈ: ಸಂಗೀತ ಸಂಯೋಜಕ ಪಲಾಶ್ ‌ಮುಚ್ಚಲ್‌ ಜೊತೆಗಿನ ಮದುವೆ ಮುಂದೂಡಿಕೆ ಕುರಿತು ಕೆಲ ದಿನಗಳಿಂದ ಹರಿದಾಡುತ್ತಿದ್ದ ನಾನಾ ವದಂತಿಗಳಿಗೆ ಟೀಂ ಇಂಡಿಯಾ ಸ್ಟಾರ್‌ ಆಟಗಾರ್ತಿ ಸ್ಮೃತಿ ಮಂಧಾನ ತೆರೆ ಎಳೆದಿದ್ದಾರೆ.

ಮದುವೆಯನ್ನ ರದ್ದುಗೊಳಿಸಿರುವುದಾಗಿ ಖುದ್ದು ಸ್ಮೃತಿ ಅವ್ರೇ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಳ್ಳುವ ಮೂಲಕ ಎಲ್ಲಾ ವದಂತಿಗಳಿಗೆ ಫುಲ್‌ಸ್ಟಾಪ್‌ ಇಟ್ಟಿದ್ದಾರೆ. ಅಲ್ಲದೇ ಈ ಹೇಳಿಕೆಯೊಂದಿಗೆ ಈ ವಿಷಯ ಕೊನೆಗೊಳಿಸಲು ಬಯಸುತ್ತೇನೆ ಅಂತಲೂ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಸ್ಮೃತಿ ಇನ್‌ಸ್ಟಾ ಪೋಸ್ಟ್‌ನಲ್ಲಿ ಏನಿದೆ?
ಕಳೆದ ಕೆಲ ವಾರಗಳಿಂದ ನನ್ನ ಜೀವನದ ಬಗ್ಗೆ ಸಾಕಷ್ಟು ಊಹಾಪೋಹಗಳು ಹಬ್ಬಿವೆ. ಹಾಗಾಗಿ ಈ ಸಮಯದಲ್ಲಿ ನಾನು ಮಾತನಾಡುವುದು ಮುಖ್ಯ ಅಂತ ಭಾವಿಸಿ ಮಾತನಾಡ್ತಿದ್ದೇನೆ. ನಾನು ತುಂಬಾ ಖಾಸಗಿ ವ್ಯಕ್ತಿ, ಅದನ್ನ ಹಾಗೆಯೇ ಇಡಲು ಬಯಸುತ್ತೇನೆ. ಆದರೆ ಮದುವೆಯನ್ನ ರದ್ದುಗೊಳಿಸಲಾಗಿದೆ ಎಂಬುದನ್ನ ಸ್ಪಷ್ಟಪಡಿಸಬೇಕಾಗಿದೆ.

ಈ ವಿಷಯವನ್ನು ಇಲ್ಲಿಗೆ ಮುಗಿಸಲು ನಾನು ಬಯಸುತ್ತೇನೆ, ನೀವೂ ಕೂಡ ಈ ವಿಷಯವನ್ನ ಇಲ್ಲಿಗೆ ಬಿಡಬೇಕೆಂದು ಮನವಿ ಮಾಡ್ತೇನೆ. ದಯವಿಟ್ಟು ಈ ಸಮಯದಲ್ಲಿ ಎರಡೂ ಕುಟುಂಬಗಳ ಗೌಪ್ಯತೆ ಗೌರವಿಸಿ. ನಮ್ಮದೇ ಹಾದಿಯಲ್ಲಿ ಮುಂದುವರಿಯಲು ನಮಗೆ ಅವಕಾಶ ಮಾಡಿಕೊಡಿ ಅಂತ ವಿನಂತಿಸಿಕೊಳ್ಳುತ್ತೇನೆ.

ನಮ್ಮೆಲ್ಲರನ್ನೂ ಮತ್ತು ನನ್ನನ್ನು ಮುನ್ನಡೆಸುವ ಒಂದು ಉನ್ನತ ಉದ್ದೇಶವಿದೆ ಎಂದು ನಾನು ನಂಬುತ್ತೇನೆ. ಅದು ಯಾವಾಗಲೂ ನನ್ನ ದೇಶವನ್ನು ಉನ್ನತ ಮಟ್ಟದಲ್ಲಿ ಪ್ರತಿನಿಧಿಸುತ್ತಿದೆ. ಸಾಧ್ಯವಾದಷ್ಟು ಕಾಲ ಭಾರತಕ್ಕಾಗಿ ಆಟವಾಡುವುದನ್ನ ಮತ್ತು ಟ್ರೋಫಿಗಳನ್ನು ಗೆಲ್ಲುವುದನ್ನು ಮುಂದುವರಿಸಬೇಕೆಂದು ನಾನು ಭಾವಿಸುತ್ತೇನೆ. ಅದರ ಕಡೆಗೆಯೇ ನನ್ನ ಗಮನ ಶಾಶ್ವತವಾಗಿರುತ್ತದೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಇದು ಮುಂದುವರಿಯುವ ಸಮಯ ಅಂತ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ರೆ ಕಳೆದ ನ.23ರಂದು ಸ್ಮೃತಿ-ಪಲಾಶ್‌ ಮುಚ್ಚಲ್‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದರು. ಆದ್ರೆ ಅಲ್ಲಿ ಆಗಿದ್ದೇ ಬೇರೆ. ಮದುವೆಗೆ ಕೆಲ ಗಂಟೆಗಳು ಬಾಕಿಯಿರುವಾಗಲೇ ಮಂಧಾನ ತಂದೆಗೆ ಲಘು ಹೃದಯಾಘಾತವಾಗಿತ್ತು. ಅವರು ಸಂಪೂರ್ಣ ಗುಣಮುಖರಾಗುವವರೆಗೆ ಮದುವೆ ಸಮಾರಂಭ ಮುಂದೂಡಲು ಸ್ಮೃತಿ ನಿರ್ಧರಿಸಿದ್ದರು. ಈ ಬೆನ್ನಲ್ಲೇ ಸ್ಮೃತಿ ಮಂಧಾನ ತನ್ನ ಇನ್‌ಸ್ಟಾಗ್ರಾಂ ಖಾತೆಯಿಂದ ಪಲಾಶ್‌ ಹಾಗೂ ವಿವಾಹಕ್ಕೆ ಸಂಬಂಧಿಸಿದ ಎಲ್ಲಾ ಫೋಟೋ ಹಾಗೂ ವಿಡಿಯೋಗಳನ್ನು ಡಿಲೀಟ್ ಮಾಡಿದ್ರು.

ಇದರ ಮಧ್ಯೆ ಸ್ಮೃತಿ ಜೊತೆ ಮದುವೆ ನಿಶ್ಚಯವಾಗಿದ್ದರೂ ಪಲಾಶ್‌ ಮುಚ್ಚಲ್ ಬೇರೊಬ್ಬ ಯುವತಿ ಜೊತೆ ಚಾಟ್ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಬಳಿಕ ಪಲಾಶ್‌ ತನ್ನ ಎಕ್ಸ್‌ ಗರ್ಲ್‌ಫ್ರೆಂಡ್‌ ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಅವರಿಗೆ ಪ್ರಪೋಸ್‌ ಮಾಡಿದ್ದ ಫೋಟೋಗಳು ಹಾಗೂ ಆಕೆಯೊಂದಿಗೆ ರೊಮ್ಯಾಂಟಿಕ್‌ ಮೂಡ್‌ನಲ್ಲಿದ್ದ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಬಳಿಕ ಮದುವೆ ರದ್ದಾಗಿದೆ ಎಂಬ ವಿಷಯ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಆಗುತ್ತಲೇ ಇತ್ತು. ಇದೀಗ ಈ ಎಲ್ಲ ವದಂತಿಗಳಿಗೆ ಖುದ್ದು ಸ್ಮೃತಿ ಮಂಧಾನ ಅವರೇ ತೆರೆ ಎಳೆದಿದ್ದಾರೆ.

ಡಿ.6 ರಂದು ಚೈತನ್ಯ ಕಲಾವಿದರಿಂದ ರಾಘು ಮೇಸ್ಟ್ರು ನಾಟಕ ಪ್ರದರ್ಶನ

0

ಚೈತನ್ಯ ಕಲಾವಿದರು ಬೈಲೂರು ಇವರ ತಂಡದಿಂದ ಈ ವರ್ಷದ ನೂತನ ಹಾಸ್ಯಮಯ ನಾಟಕ ರಾಘು ಮೇಸ್ಟ್ರು ಉಚಿತ ಪ್ರದರ್ಶನವು ಡಿ.6ರಂದು ಸಂಜೆ 6 ಗಂಟೆಗೆ ಕಾರ್ಕಳದ ಗಾಂಧಿ ಮೈದಾನ ಬಳಿಯ ಕ್ರೈಸ್ಟ್ ಕಿಂಗ್ ಚರ್ಚ್ ಕ್ಯಾಂಪಸ್ ನಲ್ಲಿ ನಡೆಯಲಿದೆ.

ಎಕ್ಸೆಲೆನ್ಸ್ ಡಿಗ್ರಿ ಕಾಲೇಜು ಮೂಡಬಿದ್ರೆ, ಹೋಟೆಲ್ ಕಾರ್ಕಳ ಇನ್ ಅನಘ ಗ್ರಾಂಡ್ , ಬಲ್ಮಠ ಫೌಂಡೇಶನ್, ಬಾಲಾಜಿ ಮೊಬೈಲ್ಸ್ ಕಾರ್ಕಳ, ನಿತ್ಯಾನಂದ ಎಲೆಕ್ಟ್ರಿಕಲ್ಸ್, ವಿಜಯಾನಂದ ಎಲೆಕ್ಟ್ರಿಕಲ್ಸ್ ಕಾರ್ಕಳ, ಜೆಎಂಜೆ ಎಲೆಕ್ಟ್ರಾನಿಕ್ಸ್ ಅಂಡ್ ಫರ್ನಿಚರ್ಸ್ ಕಾರ್ಕಳ, ದೈವಾನುಗ್ರಹ ಟೂರ್ಸ್ ಅಂಡ್ ಟ್ರಾವೆಲ್ಸ್ ಜೋಡುರಸ್ತೆ ಅವರ ಸಹಕಾರದೊಂದಿಗೆ ಈ ಉಚಿತ ಪ್ರದರ್ಶನ ನಡೆಯಲಿದೆ.

ಪ್ರಸನ್ನ ಶೆಟ್ಟಿ ಬೈಲೂರುರವರ ಸಾರಥ್ಯ, ಕಥೆ, ನಿರ್ದೇಶನದಲ್ಲಿ ನಾಟಕ ಮೂಡಿಬಂದಿದೆ. ಕಿರಣ್ ಗರಡಿಮಜಲು ಸಂಗೀತ, ಉಮೇಶ್ ಪರಪು ರಂಗವಿನ್ಯಾಸ, ನಿಧೀಶ್ ಸೌಂಡ್ಸ್ ರಂಗನಪಲ್ಕೆ ಧ್ವನಿ ಮತ್ತು ಬೆಳಕು ನೀಡಿ ನಾಟಕ ರಚನೆಗೆ ಸಹಕರಿಸಿದ್ದಾರೆ.

ನಾಟಕ ವೀಕ್ಷಣೆಗೆ ಉಚಿತ ಪ್ರವೇಶವಾಗಿದ್ದು, ಕಲಾಭಿಮಾನಿಗಳೆಲ್ಲರೂ ಬಂದು ನಾಟಕ ವೀಕ್ಷಿಸಿ ಪ್ರೋತ್ಸಾಹಿಸಬೇಕಾಗಿ ಚಿತ್ರ ತಂಡ ವಿನಂತಿಸಿದೆ.