
ಚಾಣಕ್ಯ ಚಿತ್ರಕಲಾ ತರಬೇತಿ ಕೇಂದ್ರ ಹೆಬ್ರಿ ಇದರ ನೇತೃತ್ವದಲ್ಲಿ ನೇತಾಜಿ ಫ್ರೆಂಡ್ಸ್ ಕ್ಲಬ್ ಮುದ್ರಾಡಿ , ಬಂಟರ ಸಂಘ ಹೆಬ್ರಿ, ಲಯನ್ಸ್ ಕ್ಲಬ್ ಹೆಬ್ರಿ ಸಿಟಿ, ಜೆಸಿಐ ಹೆಬ್ರಿ ಇವರ ಸಹಯೋಗದೊಂದಿಗೆ ಸ್ವಾತಂತ್ರ‍್ಯ ದಿನಾಚರಣೆ ಅಂಗವಾಗಿ ನಡೆದ 9ನೇ ವರ್ಷದ ಹೆಬ್ರಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.
ಹೆಬ್ರಿ ತಾಲೂಕು ವ್ಯಾಪ್ತಿಯ ಸುಮಾರು 90ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭಾಗವಹಿಸಿದ್ದು, ಸಬ್ ಜೂನಿಯರ್ ವಿಭಾಗದಲ್ಲಿ ಹೆಬ್ರಿ ಎಸ್. ಆರ್ ಸ್ಕೂಲ್ ನ ಶಾರ್ವಿ ಪ್ರಥಮ, ಅಮೃತ ಭಾರತಿಯ ಸಮರ್ಥ್ ದ್ವಿತೀಯ, ಎಸ್ ಆರ್ ಸ್ಕೂಲ್ ನ ಅರ್ವಿ ಎಸ್. ಭಂಡಾರಿ ತೃತೀಯ ಸ್ಥಾನ ಪಡೆದುಕೊಂಡಿದ್ದು ಚಿರಾಯು ಆರ್. ಪೂಜಾರಿ, ಸಾನಿಧ್ಯ, ಪರಿನ್ ಕೆ.ಎ.ಗೌಡ, ಜಾನ್ನವಿ, ಆಯುಷಿ ವಿ. ಶೆಟ್ಟಿ ತೀರ್ಪುಗಾರರ ಮೆಚ್ಚುಗೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ. ಜೂನಿಯರ್ ವಿಭಾಗದಲ್ಲಿ ಸ್ತುತಿ ಆಚಾರ್ಯ, ಕೆಪಿಎಸ್ ಮುನಿಯಾಲು ಪ್ರಥಮ, ಸುಗೊಶ್ ಜೆಎನ್ ವಿ ಚಾರ ದ್ವಿತೀಯ, ಸಮೃದ್ಧಿ ಭಟ್ ಎಸ್ ಆರ್ ಸ್ಕೂಲ್ ಹೆಬ್ರಿ ತೃತೀಯ ಸ್ಥಾನ ಪಡೆದುಕೊಂಡಿದ್ದು, ನಕ್ಷತ್ರ ಪಿ. ಶೆಟ್ಟಿ, ತ್ರಿಷಾ ಆಚಾರ್ಯ, ಸ್ಪರ್ಶ ಶೆಟ್ಟಿ, ಸುಯೋಗ್ ಆರ್. ಶೆಟ್ಟಿ, ಧನ್ಯ ಯು.ಶೆಟ್ಟಿ, ರಿಯಾನ್, ಅನೀಶ್, ಹಾರ್ದಿಕಾ, ಹೃಥ್ವಿಕ್ ಹೆಬ್ಬಾರ್ , ಹಾರ್ದಿಕ್ ಹೆಬ್ಬಾರ್, ಶೈನಿ, ಪ್ರಧನ್ವಿ, ಗಗನ್ ಜಿ. ತೀರ್ಪುಗಾರರ ಮೆಚ್ಚುಗೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
ಸೀನಿಯರ್ ವಿಭಾಗದಲ್ಲಿ ಅಮೃತ ಭಾರತಿ ಶಾಲೆಯ ಕೃಷ್ಣಪ್ರಸಾದ್ ಭಟ್ ಪ್ರಥಮ, ಕೆಪಿಎಸ್ ಮುನಿಯಾಲಿನ ವಂಶಿತ್ ಆಚಾರ್ಯ ದ್ವಿತೀಯ, ಎಸ್. ಆರ್. ಸ್ಕೂಲ್ ನ ಪ್ರಣಮ್ ಮತ್ತು ಅಮೃತ ಭಾರತಿಯ ಆಶಿಶ್ ಎಚ್ ತೃತೀಯ ಸ್ಥಾನ ಪಡೆದುಕೊಂಡಿದ್ದು, ಶ್ರೇಯ, ಮಂಗಲ ರೈ, ಮನ್ವಿತ್ ಬಿ. ಎಲ್, ಸಾನ್ವಿ ಸಂತೋಷ್, ಅಂಕಿತ್, ಆಯುಷ್ ಎಸ್. ಭಂಡಾರಿ, ಶೋಬಿತ್, ಕಿರಣ್ಮಯಿ, ಸ್ಪರ್ಶ ನಾಯಕ್, ಅಜಯ್ ಕುಮಾರ್, ಸಮರ್ಥ್ ಎಸ್. ತೀರ್ಪುಗಾರರ ಮೆಚ್ಚುಗೆ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣಾ ಸಮಾರಂಭ ಸೆ. 5ರಂದು ಮಧ್ಯಾಹ್ನ 2 ಗಂಟೆಗೆ ಹೆಬ್ರಿ ಶ್ರೀಮತಿ ಶೀಲಾ ಸುಭೋದ್ ಬಂಟರ ಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.






































