ದೇಶದಲ್ಲಿ ಶೇ.40ರಷ್ಟು ಪದವೀಧರರಿಗೆ ಉದ್ಯೋಗ ದೊರೆಯುತ್ತಿಲ್ಲ. ಪದವಿ ಬಳಿಕ 1 ವರ್ಷದೊಳಗೆ 7%ಗೆ ಮಾತ್ರ ನೌಕರಿ ದೊರೆತಿದೆ. 20 ರಿಂದ 29 ವರ್ಷದ 1.1 ಕೋಟಿ ಪದವೀಧರರು ದೇಶದಲ್ಲಿ ಎಂದು ನಿರುದ್ಯೋಗಿಗಳಾಗಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲ ಯವು ನೀಡಿರುವ ‘ಸ್ಟೇಟ್ ಆಫ್ ವರ್ಕಿಂಗ್ ಇಂಡಿಯಾ’ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಪದವಿ ಪಡೆದು 1 ವರ್ಷದೊಳಗೆ ಖಾಯಂ ಉದ್ಯೋಗ ಪಡೆಯಲು ಶೇ.7ರಷ್ಟು ಮಂದಿಗೆ ಮಾತ್ರ ಸಾಧ್ಯವಾಗುತ್ತಿದೆ. ಜತೆಗೆ 15-25 ವರ್ಷದ ಶೇ.40ರಷ್ಟು ಯುವಕರು, 25-29 ವರ್ಷದ ಶೇ.20 ರಷ್ಟು ಯುವಕರು ನಿರುದ್ಯೋಗಿಗಳಾಗಿ ದ್ದಾರೆ ಎನ್ನಲಾಗಿದ್ದು, ಈ ವರದಿಯು 2023ರವರೆಗಿನ ದತ್ತಾಂಶಗಳನ್ನು ವರದಿ ಯಲ್ಲಿ ಪರಿಗಣಿಸಲಾಗಿದೆ.
2004-05 ರಿಂದ 2023 ರ ವರೆಗೆ ಪ್ರತಿ ವರ್ಷ ಸುಮಾರು 50 ಲಕ್ಷ ಮಂದಿ ಪದವಿ ಪಡೆಯುತ್ತಿದ್ದು, ಈ ಪೈಕಿ 28 ಲಕ್ಷಮಂದಿಗಷ್ಟೇ ಉದ್ಯೋಗ ದೊರೆಯುತ್ತಿದೆ ಎನ್ನಲಾಗಿದೆ. ಅರ್ಧಕ್ಕೇ ಶಿಕ್ಷಣ ಬಿಡುವವರ ಪ್ರಮಾಣವೂ ಹೆಚ್ಚುತ್ತಿದೆ ಎಂದು ವರದಿ ಹೇಳಿದ್ದು, 2017ರಲ್ಲಿ ಶೇ.38ರಷ್ಟಿದ್ದ ಶಿಕ್ಷಣ ಪಡೆಯುವ ಪುರುಷರ ಪ್ರಮಾಣ 2024ರ ವೇಳೆಗೆ ಶೇ.34ಕ್ಕೆ ಕುಸಿದಿದೆ ಎನ್ನಲಾಗಿದೆ.



















