ಭಾರತೀಯ ಸೇನೆಯಲ್ಲಿ ವಿಶೇಷ ಕಾರ್ಯಪಡೆಯಾಗಿರುವ ಬ್ಲಾಕ್ ಕ್ಯಾಟ್ ಕಮಾಂಡೊ ಪಡೆಗೆ ಕಾರ್ಕಳದ ಹೆಬ್ರಿ ತಾಲೂಕಿನ ದಿ. ಜಗದೀಶ್ ಶೆಟ್ಟಿ ಮತ್ತು ಸತ್ಯವತಿ ಶೆಟ್ಟಿ ದಂಪತಿಗಳ ಸುಪುತ್ರ ಸಚಿನ್ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕ ಉದಯ ಶೆಟ್ಟಿ ಮುನಿಯಾಲು ಅವರ ನೇತೃತ್ವದಲ್ಲಿ ಯೋಧ ಸಚಿನ್ ಶೆಟ್ಟಿಯವರ ಮನೆಗೆ ಭೇಟಿ ನೀಡಿ ದೇಶ ರಕ್ಷಣೆಯ ಸೇವೆಯಲ್ಲಿರುವ ವೀರಪುತ್ರನ ಮಾತೃಶ್ರೀ ಸತ್ಯವತಿ ಶೆಟ್ಟಿಯವರಿಗೆ ಶಾಲು ಹೊದಿಸಿ ಗೌರವಿಸಲಾಯಿತು.
ಈ ಕುರಿತು ಮಾತನಾಡಿದ ಉದಯ್ ಶೆಟ್ಟಿ ಮುನಿಯಾಲು,ರವರು, ದೇಶ ಸೇವೆ ಮಾಡುವ ಮಾನಸಿಕತೆ ಯುವ ಸಮೂಹದಲ್ಲಿ ಬಿತ್ತುವ ಕೆಲಸ ಆಗಬೇಕು. ದೇಶದ ರಕ್ಷಣೆಗಾಗಿ ಯುವ ಶಕ್ತಿ ಸಿದ್ಧರಾದಾಗ ದೇಶ ಸುಭದ್ರವಾಗುತ್ತದೆ. ಸಚಿನ್ ಅವರು ಕಾರ್ಕಳದ ಯುವ ಸಮುದಾಯಕ್ಕೆ ಪ್ರೇರಣೆ. ಕಾರ್ಕಳದ ಗೌರವವನ್ನು ಇಮ್ಮಡಿಗೊಳಿಸಿದ ಯೋಧ ಸಚಿನ್ ಶೆಟ್ಟಿಯವರಿಗೆ ಶುಭವನ್ನು ಹಾರೈಸಿದರು.
ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋಪಿನಾಥ್ ಭಟ್, ಪ್ರಚಾರ ಸಮಿತಿಯ ಅಧ್ಯಕ್ಷರಾದ ನವೀನ್ ಅಡ್ಯಂತಾಯ, ಚಾರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ದಿನೇಶ್ ಶೆಟ್ಟಿ, ನೀಲೇಶ್ ಪೂಜಾರಿ, ಹರೀಶ್ ಶೆಟ್ಟಿ ನಾಡ್ಪಾಲು, H.B ಸುರೇಶ್, ನಿತೇಶ್ S.P, ದಯಾನಂದ ಶೆಟ್ಟಿ ಚಾರ, ಹೆಬ್ರಿ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಸಂದೀಪ್ ಆಚಾರ್ಯ, ಸಂಪತ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.















