Wednesday, March 18, 2026
Google search engine
Homeಕಾರ್ಕಳಮೂರನೇ ಬಾರಿಗೆ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ನಿರ್ದೇಶನದಂತೆ ಗಡೀಪಾರು ಆದೇಶ

ಮೂರನೇ ಬಾರಿಗೆ ಮಹೇಶ್ ಶೆಟ್ಟಿ ತಿಮರೋಡಿಗೆ ಹೈಕೋರ್ಟ್ ನಿರ್ದೇಶನದಂತೆ ಗಡೀಪಾರು ಆದೇಶ

ಮಹೇಶ್ ಶೆಟ್ಟಿ ತಿಮರೋಡಿಯವರನ್ನು ರೌಡಿಶೀಟರ್ ಎಂಬ ನೆಲೆಯಲ್ಲಿ ಪುತ್ತೂರು ಸಹಾಯಕ ಕಮೀಷನರ್ ಸ್ಟೆಲ್ಲಾವರ್ಗೀಸ್ ಅವರು ಹೈಕೋರ್ಟ್ ನಿರ್ದೇಶನದಂತೆ ಇದೀಗ ಮತ್ತೆ 3ನೇ ಬಾರಿಗೆ ಗಡೀಪಾರು ಮಾಡಿ ಆದೇಶ ನೀಡಿದ್ದು, ಮಾ. 16ರಂದು ಈ ಆದೇಶ ಹೊರಡಿಸಿದ್ದಾರೆ. ಮಾ. 16ರಿಂದ ಸೆ. 16ರ ವರೆಗೆ ಅವರನ್ನು ದ.ಕ. ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಗಡೀಪಾರು ಮಾಡಿ ಆದೇಶಿಸಿದ್ದಾರೆ.

ಆದೇಶವನ್ನು ಜಾರಿ ಮಾಡುವ ನಿಟ್ಟಿನಲ್ಲಿ ಬೆಳ್ತಂಗಡಿ ಡಿವೈಎಸ್ಪಿ ರೋಹಿಣಿ ಸಿ.ಕೆ. ನೇತೃತ್ವದ ಪೊಲೀಸರ ತಂಡ ಮಾ. 16ರಂದು ರಾತ್ರಿ ಉಜಿರೆ ತಿಮರೋಡಿಯಲ್ಲಿರುವ ಮಹೇಶ್ ಶೆಟ್ಟಿ ಮನೆಗೆ ತೆರಳಿದ್ದು, ಆದರೆ ಅವರು ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಹೀಗಾಗಿ ಕೆಪಿ ಆ್ಯಕ್ಟಿನ ಅನ್ವಯ ತಲೆಮರೆಸಿಕೊಂಡಿರುವ ವ್ಯಕ್ತಿಯ ಗಡೀಪಾರಿನ ಪ್ರಕ್ರಿಯೆ ಪ್ರಕಾರ ಅವರ ಮನೆಯ ಗೋಡೆಗೆ ಆದೇಶ ಪ್ರತಿ ಅಂಟಿಸಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿಯನ್ನು ದ.ಕ. ಜಿಲ್ಲೆಯಿಂದ ಒಂದು ವರ್ಷ ಗಡೀಪಾರು ಮಾಡಿ 2025ರ ಸೆ. 17ರಂದು ಮೊದಲ ಬಾರಿಗೆ ಒಂದು ನೀಡಿದ್ದರು. ಇದನ್ನು ಆದೇಶ
ಪ್ರಶ್ನಿಸಿ ತಿಮರೋಡಿ ಹೈಕೋರ್ಟ್‌ಗೆ ಹೋಗಿದ್ದು, ಸರಿಯಾದ ಕಾರಣ ನೀಡುವಂತೆ ತಿಳಿಸಿದ ಮೇರೆಗೆ ಪುತ್ತೂರಿನ ఎసి ಕೋರ್ಟ್‌ನಲ್ಲಿ ವಿಚಾರಣೆ ನಡೆದು ಡಿ. 16ರಂದು 2ನೇ ಬಾರಿಗೆ 9 ತಿಂಗಳ ಅವಧಿಗೆ ಗಡೀಪಾರು ಮಾಡಿ ಆದೇಶವನ್ನು ಹೊರಡಿಸಲಾಗಿತ್ತು. ಈ ಕುರಿತು ಉಜಿರೆಯಲ್ಲಿ ಪೊಲೀಸ್ ಅನೌಸ್ ಮೆಂಟ್ ಕೂಡ ಮಾಡಲಾಗಿತ್ತು.

ಎರಡನೇ ಗಡೀಪಾರು ಆದೇಶದ ವಿರುದ್ಧವೂ ಅವರು ಹೈಕೋರ್ಟ್ ಮೆಟ್ಟಿಲೇರಿದ್ದು, ಅವರ ಅರ್ಜಿಯ ಆಕ್ಷೇಪಣೆಗಳನ್ನು ಪರಿಗಣಿಸಿ 3 ವಾರದಲ್ಲಿ ಹೊಸದಾಗಿ ಆದೇಶ ಹೊರಡಿಸುವಂತೆ ನಿರ್ದೇಶನ ನೀಡಿತ್ತು. ಅದರಂತೆ ಪುತ್ತೂರು ಎಸ್ಪಿ ಯವರು ಇದೀಗ ಮತ್ತೆ ಮಾ. 16ರಿಂದ ಸೆ. 16ರ ವರೆಗೆ ಅವರನ್ನು ದ.ಕ. ಜಿಲ್ಲೆಯಿಂದ ರಾಯಚೂರಿನ ಮಾನ್ವಿಗೆ ಗಡೀಪಾರು ಮಾಡಿ ಆದೇಶಿಸಿದ್ದಾರೆ. ಪ್ರಾರಂಭದಲ್ಲಿ ಒಂದು ವರ್ಷಕ್ಕೆ 2ನೇ ಬಾರಿಗೆ ಅದು 9 ತಿಂಗಳಿಗೆ ಇಳಿಕೆಯಾಗಿತ್ತು. ಇದೀಗ ಮೂರನೇ ಬಾರಿಯ ಗಡಿಪಾರು ಆದೇಶ 6 ತಿಂಗಳಿಗೆ ಇಳಿಕೆಯಾಗಿದೆ.

ಇನ್ನು ಗಡೀಪಾರು ಆದೇಶಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ್ದ ಮೇಲ್ಮನವಿಯನ್ನು ಮಂಗಳವಾರ ಹೈಕೋರ್ಟ್ ವಜಾಗೊಳಿಸಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments