ಎದೆನೋವಿನಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಮೇ. 20ರಂದು ವರದಿಯಾಗಿದೆ.
ಹೆಬ್ರಿ ಚಾರ ಗ್ರಾಮದ ರತ್ನಾಕರ ಶೆಟ್ಟಿ (57) ಮೃತಪಟ್ಟವರು. ರತ್ನಾಕರ ಶೆಟ್ಟಿಯವರು ಈ ಹಿಂದೆ ಮುಂಬೈನಲ್ಲಿ ಹೊಟೆಲ್ ಕೆಲಸ ಮಾಡಿಕೊಂಡಿದ್ದು, ಸದ್ಯ ಕೃಷಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಮನೆಯಲ್ಲಿರುವಾಗ ಎದೆನೊವು ಕಾಣಿಸಿಕೊಂಡಿದ್ದು, ಕೂಡಲೇ ಅವರನ್ನು ಹೆಬ್ರಿ ರಾಘವೇಂದ್ರ ಆಸ್ಪತ್ರೆಯಲ್ಲಿ ಕೊಂಡ್ಹೊಯ್ದು ವೈದ್ಯರು ಪರೀಕ್ಷಿಸಿದಾಗ ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
































