Friday, May 29, 2026
Google search engine
Homeಕಾರ್ಕಳಹೊಸ್ಮಾರು:ವಿಪರೀತ ಮಧ್ಯಪಾನ ಮಾಡಿ ಅಸ್ವಸ್ಥ-ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ಹೊಸ್ಮಾರು:ವಿಪರೀತ ಮಧ್ಯಪಾನ ಮಾಡಿ ಅಸ್ವಸ್ಥ-ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು

ವಿಪರೀತ ಮದ್ಯಪಾನ ಮಾಡಿ ಬಿದ್ದು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಹೊಸ್ಮಾರಿನಲ್ಲಿ ನಡೆದಿದೆ.

ಆನಂದ (50)ಮೃತಪಟ್ಟವರು. ಇವರು ವಿಪರೀತ ಕುಡಿತದ ಅಭ್ಯಾಸವನ್ನು ಹೊಂದಿದ್ದು ದಿ.24 ರಂದು ಮಧ್ಯಾಹ್ನ ಈದು ಗ್ರಾಮದ ಹೊಸ್ಮಾರು ಎಂಬಲ್ಲಿ ವಿಪರೀತ ಮದ್ಯಪಾನ ಮಾಡಿ ಬಿದ್ದು ತೀವ್ರ ಅಸ್ವಸ್ಥಗೊಂಡಿದ್ದರು.

ಕೂಡಲೇ ಅವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದ್ದು ದಿ.27 ರಂದು ರಾತ್ರಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿರುತ್ತಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments