Tuesday, June 2, 2026
Google search engine
Homeಕಾರ್ಕಳಕೂಡಬೆಟ್ಟು: ಪಿಎಂ ಶ್ರೀ ಕೆಪಿಎಸ್ ಕೂಡಬೆಟ್ಟು ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ ಮತ್ತು ಮುಖ್ಯೋಪಾಧ್ಯಾಯರಿಗೆ ಸನ್ಮಾನ

ಕೂಡಬೆಟ್ಟು: ಪಿಎಂ ಶ್ರೀ ಕೆಪಿಎಸ್ ಕೂಡಬೆಟ್ಟು ಶಾಲೆಯಲ್ಲಿ ಸಂಭ್ರಮದ ಶಾಲಾ ಆರಂಭೋತ್ಸವ ಮತ್ತು ಮುಖ್ಯೋಪಾಧ್ಯಾಯರಿಗೆ ಸನ್ಮಾನ

ಕೂಡಬೆಟ್ಟು ಪಿಎಂ ಶ್ರೀ ಕೆಪಿಎಸ್ ಶಾಲೆಯಲ್ಲಿ 2026-27 ನೇ ಸಾಲಿನ ಶಾಲಾ ಆರಂಭೋತ್ಸವವನ್ನು ಅತ್ಯಂತ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಹೊಸದಾಗಿ ಶಾಲೆಗೆ ಹೆಜ್ಜೆ ಇಟ್ಟ ಪುಟ್ಟ ಮಕ್ಕಳಿಗೆ ಬಲೂನುಗಳನ್ನು ನೀಡಿ, ಸಿಹಿ ವಿತರಿಸುವ ಮೂಲಕ ಅತ್ಯಂತ ಪ್ರೀತಿಯಿಂದ ಬರಮಾಡಿಕೊಳ್ಳಲಾಯಿತು. ಇದು ಹೊಸ ಶೈಕ್ಷಣಿಕ ವರ್ಷಕ್ಕೆ ಶಾಲಾ ಆವರಣದಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

ಸಭಾ ಕಾರ್ಯಕ್ರಮವನ್ನು ನಿವೃತ್ತ ತಹಶೀಲ್ದಾರ್ ಶಾಂತಾರಾಮ ಚಿಪ್ಳೂಣ್ಕರ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯಕ್ಕಾಗಿ ಶುಭ ಹಾರೈಸಿ, ಸಂದೇಶ ನೀಡಿದರು. ಇದೇ ವೇಳೆ ಶಾಲೆಗೆ ನೂತನ ಪೂರ್ಣಕಾಲಿಕ ಮುಖ್ಯೋಪಾಧ್ಯಾಯರಾಗಿ ನೇಮಕಗೊಂಡಿರುವ ರಾಧಾಕೃಷ್ಣ ಜೋಶಿ ಅವರನ್ನು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿ (SDMC) ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಬಳಿಕ ಸರ್ಕಾರದ ವತಿಯಿಂದ ಬಂದಿದ್ದ ಉಚಿತ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ನೂತನ ಮುಖ್ಯ ಶಿಕ್ಷಕರು ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ಹರಿಣಿ ಅವರು ಇಡೀ ಕಾರ್ಯಕ್ರಮವನ್ನು ನಿರೂಪಿಸಿದರು, ದೈಹಿಕ ಶಿಕ್ಷಣ ಶಿಕ್ಷಕಿ ಸಂಧ್ಯಾ ಅವರು ವಂದನಾರ್ಪಣೆ ಮಾಡಿದರು. ಶಾಲಾ ಆರಂಭೋತ್ಸವವು ಮಕ್ಕಳ ಮುಖದಲ್ಲಿ ನಗು ತರುವ ಮೂಲಕ ಯಶಸ್ವಿಯಾಗಿ ನೆರವೇರಿತು.

ವೇದಿಕೆ ಮೇಲೆ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶಶಿಧರ್ ಭಟ್, ವಿಜಯಾ ಬಾಲಕೃಷ್ಣ ಹೆಗ್ಡೆ,ಕಂದಾಯ ಇಲಾಖೆಯ ನಿವೃತ್ತ ಅಧಿಕಾರಿ ಮಧುಸೂಧನ ಜೋಶಿ ಕೆರ್ವಾಶೆ ವ್ಯವಸಾಯ ಸೇವಾ ಸಹಕಾರಿ ಸಂಘದ ನಿಕಟಪೂರ್ವ ಅಧ್ಯಕ್ಷ ಅನಿಲ್ ಎಸ್ ಪೂಜಾರಿ,ನಿವೃತ್ತ ತಹಶೀಲ್ದಾರ್ ಶಾಂತಾರಾಮ ಚಿಪ್ಳೂಣ್ಕರ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ಶಿವರಾಜ್ ಉಪಸ್ಥಿತರಿದ್ದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments