ಹೆಬ್ರಿಯ ಕನ್ಯಾನ ರೈತಸೇವಾ ಗ್ರಾಮೋದ್ಯೋಗ ಸಂಸ್ಥೆಯ ವಠಾರದಲ್ಲಿ ಸುಮಾರು 200 ವಿವಿದ ತಳಿಯ ಗಿಡಗಳನ್ನು ನೆಟ್ಟು ವನಮಹೋತ್ಸವ ಆಚರಿಸಲಾಯಿತು.
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಸಭೆಯಲ್ಲಿ ಸಂಸ್ಥೆಯ ಮಾಲಕರಾದ ಸರಸ್ವತಿ ನಾಯಕ್, ಆಡಳಿತ ನಿರ್ದೇಶಕ ಲಕ್ಶ್ಮೀ ನಾರಾಯಣ ನಾಯಕ್, ಶಿವಪುರ ಸುರೇಶ ಶೆಟ್ಟಿ, ಸಂಸ್ಥೆಯ ಹಿರಿಯರಾದ ಉಪೇಂದ್ರ ಹೆಬ್ಬಾರ್, ಜಯಾನಂದ ಕುಲಾಲ್, ಅರುಣ್ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಸಿಬ್ಬಂದಿಗಳಾದ ಗಗನ್ ಶೆಟ್ಟಿ ನಿರೂಪಿಸಿದರು.
















