2024 ರ ಲೋಕಸಭಾ ಚುನಾವಣೆಯಲ್ಲಿ ಶ್ರೀ ರಾಮ ಮಂದಿರ ಇರುವ ಅಯೋದ್ಯೆ ವ್ಯಾಪ್ತಿಯ ಪೈಜಾಬಾದ್ ಲೋಕಸಭೆ ಕ್ಷೇತ್ರದ ಜನ ಬಿಜೆಪಿ ಅಭ್ಯರ್ಥಿಯನ್ನು ಐವತೈದು ಸಾವಿರಕ್ಕೂ ಹೆಚ್ಷು ಮತಗಳ ಅಂತರದಿಂದ ಸೋಲಿಸಿದಾಗಲೇ ಇವರ ಪ್ರಾಮಾಣಿಕತೆಯ ಅರಿವಾಗಿದೆ. ದೇಶದಲ್ಲಿ ಅಧಿಕಾರ ಹಿಡಿಯಲು ಕಾರಣವಾದ ಅಯೋದ್ಯೆಯಲ್ಲಿಯೇ ಜನ ಇವರನ್ನು ಸೋಲಿಸುವ ಮೂಲಕ ಇವರ ಅಪ್ರಮಾಣಿಕತೆಯನ್ನು ಅಂದೇ ಇಡೀ ದೇಶಕ್ಕೆ ಸಾರಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದರಾವ್ ಅಭಿಪ್ರಾಯಪಟ್ಟಿದ್ದಾರೆ
ಅಯೋಧ್ಯೆ ರಾಮಮಂದಿರದ ಹೆಸರಿನಲ್ಲಿ ಕೋಟ್ಯಾಂತರ ಜನರ ಭಾವನೆಗಳನ್ನು ರಾಜಕೀಯವಾಗಿ ಬಳಸಿಕೊಂಡ ಬಿಜೆಪಿ , ಇಂದು ಅದೇ ವಿಚಾರದಲ್ಲಿ ಅವ್ಯವಹಾರದ ಆರೋಪಗಳು ಕೇಳಿಬಂದಾಗ ಉತ್ತರ ನೀಡದೆ ಮೌನವಾಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ ಎಂದರು.
ರಾಮ ಮಂದಿರ ಹೆಸರಿನಲ್ಲಿ ಜನರ ಭಾವನೆಗಳೊಂದಿಗೆ ಚೆಲ್ಲಾಟವಾಡಿ ಅಧಿಕಾರ ಪಡೆದ ಬಿಜೆಪಿ ಈಗ ಅದೇ ರಾಮಮಂದಿರ ನಿರ್ಮಾಣ ಕಾರ್ಯದಲ್ಲೇ ಹಣದ ಅವ್ಯವಹಾರದ ಆರೋಪಗಳು ಎದುರಾದಾಗ ಉತ್ತರಿಸಬೇಕಾದ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಭಕ್ತರ ಕೋಟ್ಯಾಂತರ ರೂಪಾಯಿ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತೊರಬೇಕಾದ ಬಿಜೆಪಿ ಮತ್ತು ಸಂಘ ಪರಿವಾರ ಸಂಘಟನೆಗಳು ಏನನ್ನೋ ಮುಚ್ಚಿಡುತ್ತಿವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಜನರ ನಂಬಿಕೆಯೊಂದಿಗೆ ರಾಜಕೀಯ ಮಾಡಿದವರಿಗೆ ಜನರ ಮುಂದೆ ಸತ್ಯ ಹೇಳುವ ಧೈರ್ಯ ಇರಬೇಕು. ಜನರ ಆರೋಪಗಳ ಬಗ್ಗೆ ಸ್ಪಷ್ಟ ಉತ್ತರ ನೀಡಿ ಪಾರದರ್ಶಕತೆ ತೋರಬೇಕಾಗಿರುವುದು ಬಿಜೆಪಿ ಹಾಗೂ ಸಂಘ ಪರಿವಾರದ ನೈತಿಕ ಜವಾಬ್ದಾರಿಯಾಗಿದೆ.
ಅಂದು ದೇವರ ಹೆಸರಿನಲ್ಲಿ ರಾಜಕೀಯ ಲಾಭ ಪಡೆದವರು, ಇಂದು ದೇವರ ಹೆಸರಿನಲ್ಲೇ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸಬೇಕಾದ ಪರಿಸ್ಥಿತಿಗೆ ಬಂದಿದ್ದಾರೆ, ರಾಮನ ಹೆಸರಿನಲ್ಲಿ ಅಧಿಕಾರ ಪಡೆದವರನ್ನು ಅದೇ ಶ್ರೀರಾಮ ಅಧಿಕಾರದಿಂದ ಕೆಳಗಿಳಿಸಲಿದ್ದಾನೆ. ಅಯೋಧ್ಯೆ ರಾಮನ ವಿಚಾರದಲ್ಲಿ ಉದ್ದುದ್ದ ಭಾಷಣ ಮಾಡುತ್ತಿದ್ದ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರುಗಳಿಗೆ ಇಂದು ಬಹಿರಂಗವಾಗಿ ಮುಖ ತೋರಿಸದಂತ ಪರಿಸ್ಥಿತಿಯನ್ನು ಶ್ರೀರಾಮನೇ ನಿರ್ಮಾಣ ಮಾಡಿದ್ದಾನೆ. ಹಿಂದುತ್ವವಾದಿ ಎಂದು ಹೇಳಿಕೊಳ್ಳುವ ಕಾರ್ಕಳ ಶಾಸಕರು ಈ ಬಗ್ಗೆ ಯಾಕೆ ಮೌನವಾಗಿದ್ದಾರೆ..? ಎಲ್ಲ ಗೊಂದಲಗಳಿಗೆ ಉತ್ತರ ನೀಡಬೇಕಾದ ಬಿಜೆಪಿ ಮೌನವಹಿಸಿರುವುದು ಕೋಟ್ಯಾಂತರ ರೂಪಾಯಿ ದೇಣಿಗೆಯಲ್ಲಿ ಅದರ ಪಾತ್ರವನ್ನು ಸೂಚಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















