ಕಾರ್ಕಳ: ವಯಸ್ಸಾದಂತೆ ಹಿರಿಯ ನಾಗರಿಕರು ಮೊತ್ತ ಮೊದಲು ಮಾಡಲೇಬೇಕಾದ ಕೆಲಸ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು. ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಇರುವ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಎಳೆ ಬಿಸಿಲಲ್ಲಿ ನಡಿಗೆ ಇವುಗಳನ್ನು ಪ್ರತಿನಿತ್ಯ ಅನುಸರಿಸುವುದರಿಂದ ಮೂಳೆ ಸಾಂದ್ರತೆ ಕಾಪಾಡಿಕೊಳ್ಳಬಹುದು ಎಂದು ಮೂಳೆ ತಜ್ಞ ಡಾ. ರಾಮದಾಸ ಶೆಣೈ ಹೇಳಿದರು.ಅವರು ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆ, ತೆಳ್ಳಾರು ರಸ್ತೆ, ಕಾರ್ಕಳ ಇಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕ
ರಿಗಾಗಿ ಆಯೋಜಿಸಿದ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು .
ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಸಚ್ಚಿದಾನಂದ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಗಮಿಸಿದ 90 ರೋಗಿಗಳಿಗೆ ಉಚಿತ ಪೋರ್ಟಬಲ್ BMD (Bone Mineral Density) ಪರೀಕ್ಷೆ ನಡೆಸಲಾಯಿತು.
ಆಸ್ಪತ್ರೆಯ ಮೂಳೆ ತಜ್ಞರುಗಳಾದ ಡಾ. ರಾಮದಾಸ್ ಶೆಣೈ , ಡಾ. ಆಲ್ಡನ್ ಡಿಸೋಜಾ, ಡಾ. ಶಶಾಂಕ್ ಶೆಟ್ಟಿ ಶಿಬಿರದಲ್ಲಿ ಭಾಗವಹಿಸಿದ ಹಿರಿಯ ನಾಗರಿಕರ ಆರೋಗ್ಯ ತಪಾಸಣೆ ನಡೆಸಿ, ಸೂಕ್ತ ಸಲಹೆ ಸೂಚನೆ ನೀಡಿದರು.



















