Thursday, July 30, 2026
Google search engine
Homeಕಾರ್ಕಳಆ. 1 : ಚಾ ಪರ್ಕ ಕಲಾವಿದೆರ್‌ ಕುಡ್ಲ ಅಭಿನಯಿಸುವ ʼಯಾನೊರಿ ಬರೊಲಿಯಾʼ ತುಳು ಹಾಸ್ಯಮಯ...

ಆ. 1 : ಚಾ ಪರ್ಕ ಕಲಾವಿದೆರ್‌ ಕುಡ್ಲ ಅಭಿನಯಿಸುವ ʼಯಾನೊರಿ ಬರೊಲಿಯಾʼ ತುಳು ಹಾಸ್ಯಮಯ ನಾಟಕ ಪ್ರದರ್ಶನ

ಆ. 1 : ಚಾ ಪರ್ಕ ಕಲಾವಿದೆರ್‌ ಕುಡ್ಲ ಅಭಿನಯಿಸುವ ʼಯಾನೊರಿ ಬರೊಲಿಯಾʼ ತುಳು ಹಾಸ್ಯಮಯ ನಾಟಕ ಪ್ರದರ್ಶನ

ಕಾರ್ಕಳ : ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿ ಮತ್ತು ಲಿಯೋ ಕ್ಲಬ್‌ ಕಾರ್ಕಳ ಕ್ರಿಯೇಟಿವ್‌ ವತಿಯಿಂದ ಕ್ಯಾನ್ಸರ್‌ ಪೀಡಿತ ಮಕ್ಕಳಿಗೆ ನಿಧಿ ಸಂಗ್ರಹ ಕಾರ್ಯಕ್ರಮದ ಅಂಗವಾಗಿ ಚಾ ಪರ್ಕ ಕಲಾವಿದೆರ್‌ ಕುಡ್ಲ ಅಭಿನಯಿಸುವ ಯಾನೊರಿ ಬರೊಲಿಯಾ ತುಳು ಹಾಸ್ಯಮಯ ನಾಟಕ ಪ್ರದರ್ಶನ ಆ. 1ರಂದು ಸಂಜೆ 6.00 ಗಂಟೆಗೆ ಕಾರ್ಕಳದ ಕಾಬೆಟ್ಟು ಅಂಬೇಡ್ಕರ್‌ ಭವನದಲ್ಲಿ ನಡೆಯಲಿರುವುದು. 27 ವರ್ಷಗಳ ಹಿಂದೆ ರಂಗಭೂಮಿಯಲ್ಲಿ ಚಾರಿತ್ರಿಕ ದಾಖಲೆ ನಿರ್ಮಿಸಿರುವ ಕಾಪಿಕಾಡ್‌, ವಾಮಂಜೂರು ಮತ್ತು ಸಾಯಿಕೃಷ್ಣ ಸಮಾಗಮದೊಂದಿಗೆ ಯಾನೊರಿ ಬರೊಲಿಯಾ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾದ ಲಯನ್ಸ್‌ ಜಿಲ್ಲೆ 317ಸಿಯ ಸಹಕಾರದೊಂದಿಗೆ 5 ಸಂವತ್ಸರಗಳನ್ನು ಪೂರೈಸಿರುವ ಲಯನ್ಸ್‌ ಕ್ಲಬ್‌ ಕಾರ್ಕಳ ಸಿಟಿಯ 2026/27ನೇ ಸಾಲಿನ ಅಧ್ಯಕ್ಷರು ನಯನ ನಾಯಕ್‌, ಕಾರ್ಯದರ್ಶಿ ನಿಹಾಲ್‌ ಶೆಟ್ಟಿ ಜಕ್ಕನ್‌ಮಕ್ಕಿ, ಕೋಶಾಧಿಕಾರಿ ಟಿ. ಕೆ. ರಘುವೀರ್‌ ಹಾಗೂ ಸರ್ವ ಸದಸ್ಯರ ಮುತುವರ್ಜಿಯಲ್ಲಿ ಸಕಲರ ಮೆಚ್ಚುಗೆಗಿಂತ ಮೇಲ್ದರ್ಜೆಯ ಸೇವೆಯೆ ಮುಖ್ಯವೆಂದು ತಿಳಿದು ಕ್ಯಾನ್ಸರ್‌ ಪೀಡಿತ ಮಕ್ಕಳ ಸಹಾಯಾರ್ಥವಾಗಿ ಈ ಕಾರ್ಯಕ್ರಮವನ್ನು ಹಮಿಕೊಳ್ಳಲಾಗಿದೆ. ಕಾರ್ಕಳದ ಅಂಬೇಡ್ಕರ್‌ ಭವನದಲ್ಲಿ ಟಿಕೆಟ್‌ ರಹಿತ ನಾಟಕ ಪ್ರದರ್ಶನ ಇದಾಗಿದ್ದು, ಸಮಸ್ತ ಜನರನ್ನು ಆದರಪೂರ್ವಕವಾಗಿ ಲಯನ್ಸ್‌ ಸಿಟಿ ವತಿಯಿಂದ ಅಮಂತ್ರಿಸಲಾಗಿದೆ ಎಂದು ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments