ಮಣಿಪಾಲ ಜ್ಞಾನಸುಧಾ ಆಂಗ್ಲ ಮಾಧ್ಯಮ ಫ್ರೌಢಶಾಲೆ,ವಿದ್ಯಾ ನಗರದಲ್ಲಿ ಗುರು ಪೂರ್ಣಿಮೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಹಿರಿಯಡ್ಕದ ನಿವೃತ್ತ ಉಪನ್ಯಾಸಕಿ ನಳಿನಾದೇವಿ ಎಮ್ ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಇವರು, ಪುರಾಣದ ಕಾಲದಿಂದಲೂ ಗುರುವಿಗೆ ಉನ್ನತ ಸ್ಥಾನವನ್ನು ನೀಡಿ ಗೌರವಿಸಲಾಗುತ್ತಿದೆ.
ವಿದ್ಯಾರ್ಥಿಗಳ ಬದುಕು ಬೆಳಗಿಸುವ ಕಾರ್ಯದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಗುರುಗಳನ್ನು ನಾವು ಗೌರವಿಸಬೇಕು ಎಂದು ಮೌಲ್ಯಯುತ ಮಾತುಗಳನ್ನಾಡಿದರು.ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮುಖ್ಯ ಅತಿಥಿಯವರಿಗೆ ಪಾದಪೂಜೆಯನ್ನು ನೆರವೇರಿಸಿ ಗುರು ವಂದನೆಯನ್ನು ಸಲ್ಲಿಸಲಾಯಿತು.
ಮಣಿಪಾಲ ಜ್ಞಾನಸುಧಾ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶ್ರೀ ನವೀನ್, ಜೆ.ಇ.ಇ/ನೀಟ್ ಫೌಂಡೇಶನ್ ಸ್ಟ್ಯೂಡೆಂಟ್ ಕೊರ್ಡಿನೇಡರ್ ಶ್ರೀಮತಿ ಶಮಿತ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಮಂಜುಳ ಕಾರ್ಯಕ್ರಮ ನಿರೂಪಿಸಿದರು.





















