ಕಾರ್ಕಳ ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜಿನಲ್ಲಿ ರೆಂಜಾಳ ಮುಕ್ತಾ ನರಸಿಂಹ ಶೆಣೈ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ಶ್ರೀಮತಿ ನಗರ್ ಕಿಶೋರಿ ಶೆಣೈ ಇವರು ಸಭಾಂಗಣದ ಉದ್ಘಾಟಣೆ ಹಾಗೂ ಛಾಯಾಚಿತ್ರವನ್ನು ಅನಾವರಣಗೊಳಿಸಿದರು.
ಶ್ರೀ ವೆಂಕಟರಮಣ ದೇವಳದ ಒಂದನೇ ಮುಕ್ತೇಸರರಾಗಿರುವ ಶ್ರೀಯುತ ಜಯರಾಮ ಪ್ರಭು ಇವರು ದೀಪ ಪ್ರಜ್ವಲನೆ ಮಾಡುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಎಸ್.ವಿ.ಎಜ್ಯುಕೇಷನ್ ಟ್ರಸ್ಟ್ನ ಕಾರ್ಯದರ್ಶಿಗಳಾದ ಶ್ರೀ ಕೆ.ಪಿ ಶೆಣೈ ಇವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀ ಚಿದಾನಂದ ಶೆಟ್ಟಿ ವಿದ್ಯಾರ್ಥಿಕ್ಷೇಮಪಾಲನಾ ಅಧಿಕಾರಿ ಇವರು ಸಭಾಂಗಣಕ್ಕೆ ದೇಣಿಗೆಯನ್ನು ನೀಡಿದ ಶ್ರೀಮತಿ ನಗರ್ ಕಿಶೋರಿ ಶೆಣೈ ಇವರನ್ನು ಪರಿಚಯಿಸಿದರು. ಸನ್ಮಾನವನ್ನು ಸ್ವೀಕರಿಸಿದ ಶ್ರೀಮತಿ ನಗರ್ ಕಿಶೋರಿ ಶೆಣೈ ಇವರು ತಮ್ಮ ಅನಿಸಿಕೆಯನ್ನು ಈ ಸಂದರ್ಭದಲ್ಲಿ ಹಂಚಿಕೊಂಡರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀಮತಿ ವಿಭಾ ಧೀರಜ್ ನಾಯಕ್, ಬೇಲಾಡಿ ಜಯವಂತ ಕಾಮತ್, ಡಾ ಶೈಲಭ್ ನಗರ್ ಹಾಗೂ ಶ್ರೀ ತುಕಾರಾಮ್ ನಾಯಕ್ ತಮ್ಮ ಶುಭ ನುಡಿಗಳನ್ನಾಡಿದರು. ಟ್ರಸ್ಟ್ ನ ಉಪಾಧ್ಯಕ್ಷರಾದ ಶ್ರೀ ಕಮಲಾಕ್ಷ ಕಾಮತ್ ಅವರು ಅಧ್ಯಕ್ಷೀಯ ನುಡಿಗಳನ್ನಾಡಿದರು. ಟ್ರಸ್ಟ್ನ ಕೋಶಾಧ್ಯಕ್ಷರಾದ ಶ್ರೀ ರವೀಂದ್ರನಾಥ್ ಪೈ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಗೀತಾ ಜಿ ಇವರು ಸ್ವಾಗತಿಸಿದರು. ಸೀತಾರಾಮ್ ನಾಯಕ್, ವಾಣಿಜ್ಯ ವಿಭಾಗದ ಮುಖ್ಯಸ್ಥರು ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಕು. ಅರ್ಪಿತಾ ಎ ಜೈನ್ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.



















