ಶ್ರೀಮಹಾಗಣಪತಿ ಗಣೇಶೋತ್ಸವ ಸಮಿತಿ ಮೂರೂರು ಹಿರ್ಗಾನ ಇಲ್ಲಿನ 3ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಂಭ್ರಮದಿಂದ ಜರುಗಲಿದೆ. ಗಣೇಶೋತ್ಸವ ಸಮಿತಿ ಹಾಗೂ ರೈಡರ್ಸ್ ಆಫ್ ಕಾರ್ಕಳ ಸಹಯೋಗದಲ್ಲಿ ಎಣ್ಣೆಹೊಳೆಯಿಂದ ಬೆಳಗ್ಗೆ 8 ಗಂಟೆಗೆ ಗಣೇಶನ ವಿಗ್ರಹದ ಮೆರವಣಿಗೆ ನಡೆಯಲಿದ್ದು, ಜೊತೆಗೆ ಭಕ್ತರಿಂದ ಬೆಳ್ಳಿಯ ಕಿರೀಟ ಹಾಗೂ ನೆಲ್ಲಿಕಟ್ಟೆಯ ಶ್ರೀಮತಿ ಶ್ರೀ ಸವಿತಾ ಪ್ರಕಾಶ್ ಶೆಟ್ಟಿಯವರಿಂದ ಅರ್ಪಿತವಾದ ಬೆಳ್ಳಿಯ ತ್ರಿಶೂಲವನ್ನು ಪುರಮೆರವಣಿಗೆಯ ಮೂಲಕ ತರಲಾಗುತ್ತದೆ.
ಗಣೇಶೋತ್ಸವದ ಪ್ರಯುಕ್ತ, ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮದೊಂದಿಗೆ ಬಹುಮಾನ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಮಂಗಳವಾರದಂದು ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಇವರಿಂದ ಕನಕಾಂಗಿ ಕಲ್ಯಾಣ ಎಂಬ ಯಕ್ಷಗಾನ ನಡೆಯಲಿದೆ. ಎಲ್ಲಾ ಭಗವದ್ಭಕ್ತರನ್ನು ಶ್ರೀಗಣೇಶೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಆತ್ಮೀಯವಾಗಿ ಸ್ವಾಗತ ಕೋರಿದ್ದಾರೆ.


























