ಶ್ರೀ ವೆಂಕಟರಮಣ ಪ್ರಥಮ ದರ್ಜೆ ಕಾಲೇಜಿನ ಯುತ್ ರೆಡ್ಕ್ರಾಸ್ ಘಟಕದ ಉದ್ಘಾಟನೆಯನ್ನು ಸಮಾರಂಭವು ನಡೆಯಿತು. ಭಾರತೀಯ ರೆಡ್ಕ್ರಾಸ್ ಜಿಲ್ಲಾ ಕಾರ್ಯದರ್ಶಿಯಾಗಿರುವ ಗಣನಾಥ ಶೆಟ್ಟಿ, ಎಕ್ಕಾರು ಇವರು ದೀಪ ಬೆಳಗಿಸುವುದರೊಂದಿಗೆ ನೆರವೇರಿಸಿದರು. ಇವರು ತಮ್ಮ ಉದ್ಘಾಟನಾ ಭಾಷಣದಲ್ಲಿ ರೆಡ್ಕ್ರಾಸ್ ಸಂಸ್ಥೆಯ ಹುಟ್ಟು, ಬೆಳವಣಿಗೆ, ಗುರಿ, ಮಹತ್ವವನ್ನು ತಿಳಿಸಿ ಪದಾಧಿಕಾರಿಗಳಿಗೆ ಶುಭ ಹಾರೈಸಿದರು. ಪ್ರಾಂಶುಪಾಲೆ ಪ್ರೊ|ಗೀತಾ. ಜಿ ಅಧ್ಯಕ್ಷತೆ ವಹಿಸಿದ್ದರು. ರೆಡ್ಕ್ರಾಸ್ ಯೋಜನಾ ಅಧಿಕಾರಿ ಸೋನಾ ಸ್ವಾಗತಿಸಿದರು. ಸಹನಾ ಕಾರ್ಯಕ್ರಮ ನಿರೂಪಿಸಿ ಸ್ವಾತಿ ವಂದಿಸಿದರು.




























