ಉದ್ಯಮಿ ಡೇವಿಡ್ ಡಿಸೋಜಾ ಕೊಲೆ ಪ್ರಕರಣ ಆರೋಪಿ ಭೂಗತ ಪಾತಕಿ ಹೇಮಂತ್ ಪೂಜಾರಿಯ ಸಹಚರನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಕಾರ್ಕಳ ನಿವಾಸಿಯಾಗಿರುವ ಹಾಲಿ ಸುರತ್ಕಲ್ ನಿವಾಸಿಯಾಗಿರುವ ಅಬ್ದುಲ್ ರಾಹಿಸ್ (29) ಬಂಧಿತ ಆರೋಪಿ ಈಗಾಗಲೇ ಮಂಗಳೂರು ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ ಬಾಂಬೆ ಫೈನಲ್ನ ಸೂಚನೆಯಂತೆ ಕೆಲಸ ಮಾಡುತ್ತಿದ್ದ ಅಬ್ದುಲ್ ರಾಹೀಸ್, ಪಾತಕಿ ಹೇಮಂತ್ ಪೂಜಾರಿಯ ಹಣದ ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದಎನ್ನಲಾಗಿದೆ.
ಪಾತಕಿ ಹೇಮಂತ್ ಪೂಜಾರಿ ಉದ್ಯಮಿಗಳಿಗೆ ಜೀವ ಬೆದರಿಕೆ ಹಾಕಿ ಪಡೆಯುತ್ತಿದ್ದ ಹಣವನ್ನು ಈ ಆರೋಪಿಯೇ ಸಂಗ್ರಹ ಮಾಡುತ್ತಿದ್ದ ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದು ತನಿಖೆ ಮುಂದುವರಿಸಿದ್ದಾರೆ.





























