ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಕಾರ್ಕಳ ತಾಲೂಕು ಘಟಕದಿಂದ ಕಾರ್ಕಳ ನಗರ ಕಾಳಿಕಾಂಬ ಪ್ರದೇಶದ ಜಗದೀಶ್ ರಾವ್, ಹರ್ಷ ರಾವ್, ಸುನೀಲ್ ರಾವ್ 3 ಜನ ಕಾಪು ಬೀಚ್ ಬಳಿ ಸಮುದ್ರದಲ್ಲಿ 12 ವರ್ಷಗಳ ಹಿಂದೆ ದುರ್ಮರಣಕ್ಕಿಡಾದ ಸ್ಮರಣಾರ್ಥ ಪ್ರತಿ ವರ್ಷದಂತೆ , ಕಾಳಿಕಾಂಬ – ಕರಿಯಕಲ್ಲು ಜಂಕ್ಷನ್ ವರೆಗೆ ರಸ್ತೆ ಬದಿ ಸ್ವಚ್ಛತಾ ಕಾರ್ಯಕ್ಕೆ ಸ್ವಚ್ಛ ಕಾರ್ಕಳ ಬ್ರಿಗೇಡ್ ನ ಸದಸ್ಯರಾದ ಫೆಲಿಕ್ಸ್ ವಾಜ್ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಉಡುಪಿ ಜಿಲ್ಲಾಧ್ಯಕ್ಷರಾದ ಪ್ರಕಾಶ್ ರಾವ್, ತಾಲೂಕು ಅಧ್ಯಕ್ಷ ಕೆ. ಬಿ. ಕೀರ್ತನ್ ಕುಮಾರ್, ನಿವೃತ್ತ ಶಾಲಾ ಮುಖ್ಯೋಪಾಧ್ಯಾಯ ವಸಂತ. ಎಂ, ಉದ್ಯಮಿ ಸುರೇಶ್ ಕೋಟ್ಯಾನ್,ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸುಧಾಕರ ಕೋಟ್ಯಾನ್, ಸತೀಶ್ ರಾವ್, ಹರಿಶ್ಚಂದ್ರ ರಾವ್, ಧೀರಜ್ ರಾವ್, ನಾಗೇಶ್ ರಾವ್, ದಿನೇಶ್ ರಾವ್, ವಿನ್ಯಾಸ್, ನಿಖಿಲ್, ಪ್ರಶಾಂತ್ ರಾವ್, ಸುಧೀರ್ ರಾವ್, ಅಮೋಘ, ವಿಘ್ನೇಶ್, ವಿಜೇತ್, ಭುವನ್ ಮೊದಲಾದವರು ಉಪಸ್ಥಿತರಿದ್ದರು.































