ಪ್ರಧಾನಿ ಹುದ್ದೆಯನ್ನು ತ್ಯಜಿಸುವ ಮೂಲಕ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರು .ಸೂಪರ್ ಪಿಎಂ ಹದ್ದೆ ಅಲಂಕರಿಸಿದ್ದರು. (ಪ್ರಧಾನಿಗಿಂತ ಹೆಚ್ಚಾಗಿ ಅಧಿಕಾರ ನಡೆಸುವವರು) ಎಂದು ಬುಧವಾರ ಬಿಜೆಪಿ ವ್ಯಂಗ್ಯ ಮಾಡಿದೆ. ಸೋನಿಯಾ ಅವರ ಆತ್ಮಕತೆ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿಶ್ಲೇಷಣೆ ಮಾಡಿದ ಬಿಜೆಪಿ ವಕ್ತಾರ ಸುಭಾಂಶ್ ತ್ರಿವೇದಿ, 2004ರಲ್ಲಿ ಪ್ರಧಾನಿ ಹುದ್ದೆಯನ್ನು ತ್ಯಜಿಸಿದ ಸೋನಿಯಾ, ರಾಷ್ಟ್ರೀಯ ಸಲಹಾ ಮಂಡಳಿಯ (ಎನ್ಸಿ) ಅಧ್ಯಕ್ಷೆಯಾಗುವ ಮೂಲಕ ಸಂಪುಟ ದರ್ಜೆಯ ಸ್ಥಾನಮಾನವನ್ನು ಪಡೆದರು. ಅದು ಕೂಡ ಲಾಭದಾಯಕ ಹುದ್ದೆಯಾಗಿತ್ತು ಎಂದು ಕಾಲೆಳೆದಿದ್ದಾರೆ.































