Wednesday, November 18, 2026
Google search engine
Homeಕಾರ್ಕಳನಿಟ್ಟೆಯಲ್ಲಿ ಎಂಸಿಎ ಪ್ರಾಜೆಕ್ಟ್ ಎಕ್ಸ್‌ಪ್ರೊ 2026 ಉದ್ಘಾಟನೆ

ನಿಟ್ಟೆಯಲ್ಲಿ ಎಂಸಿಎ ಪ್ರಾಜೆಕ್ಟ್ ಎಕ್ಸ್‌ಪ್ರೊ 2026 ಉದ್ಘಾಟನೆ

ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂಸಿಎ ವಿಭಾಗವು  ‘ಎಂಸಿಎ ಎಕ್ಸ್‌ಪ್ರೊ – 2026’ ನ್ನು ಆಯೋಜಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಟ್ಯಾಗ್ ಹ್ಯಾಶ್ ಸಂಸ್ಥೆಯ ಸಹಸಂಸ್ಥಾಪಕ ಹಾಗೂ ಸಿಟಿಒ ಶ್ರೀಕೃಷ್ಣ ಹೊಳ್ಳ, ತಮ್ಮ ಉದ್ಘಾಟನಾ ಭಾಷಣದಲ್ಲಿ, ‘ವಿದ್ಯಾರ್ಥಿಗಳು ವೃತ್ತಿಜೀವನದಲ್ಲಿ ಮೇಲುಗೈ ಸಾಧಿಸಲು ತಂತ್ರಜ್ಞಾನ ಬೆಳವಣಿಗೆಯ ಜತೆ ಅಪ್ಡೇಟ್ ಹೊಂದುವುದು ಅಗತ್ಯ. ಎಂಸಿಎ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನ ವೃದ್ಧಿಗಾಗಿ ಇಂತಹ ಪ್ರಾಜೆಕ್ಟ್ ಪ್ರದರ್ಶನಗಳು ಬಹುಮುಖ್ಯವಾಗಿದೆ’ ಎಂದರು.
ಕಾರ್ಯಕ್ರಮದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಿದ್ದ ಅಟೊಡೆಸ್ಕ್ ಸಂಸ್ಥೆಯ ಸೀನಿಯರ್ ಸೇಲ್ಸ್ಫೋರ್ಸ್ ಡೆವಲಪರ್ ಪ್ರಣತಿ ಚೈತನ್ಯ ಪದ್ಯಾಣ ಮಾತನಾಡಿ ‘ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಅವರ ಜೀವನದ ಗುರಿಯನ್ನು ನಿರ್ಧರಿಸಲು ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ವೃತ್ತಿಜೀವನದ ಗುಂಗಿನಲ್ಲಿ ತಮ್ಮ ಹವ್ಯಾಸ ಹಾಗೂ ಆಸಕ್ತಿಗಳನ್ನು ಮರೆಯಬಾರದು. ಅದೆಷ್ಟೋಬಾರಿ ನಮ್ಮ ಹವ್ಯಾಸಗಳು ನಮ್ಮ ವೃತ್ತಿಜೀವನದ ಗುರಿಯನ್ನು ಮುಟ್ಟಲು ಸಹಕಾರಿಯಾಗುವ ವಿಶೇಷ ಚೈತನ್ಯವನ್ನು ನಮಗೆ ನೀಡುತ್ತವೆ’ ಎಂದರು. ಇನ್ನೋರ್ವ ಗೌರವ ಅತಿಥಿಯಾಗಿ ಭಾಗವಹಿಸಿದ್ದ ನಿಟ್ಟೆ ಎಂಸಿಎ ವಿಭಾಗದ ಹಳೆವಿದ್ಯಾರ್ಥಿನಿ ಹಾಗೂ ಮಂಗಳೂರಿನ ರಾಕ್ ಸ್ಟಾರ್ ಸಾಫ್ಟ್ವೇರ್ ಸಂಸ್ಥೆಯ ಸಾಫ್ಟ್ವೇರ್ ಡೆವಲಪರ್ ಸೌಜನ್ಯ ಜೆ ಶೆಟ್ಟಿ ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನದ ಸಂದರ್ಭವನ್ನು ನೆನೆದು ಇಂತಹ ಪ್ರಾಜೆಕ್ಟ್ ಸ್ಪರ್ಧೆಗಳು ಹಾಗೂ ಪ್ರದರ್ಶನಗಳು ಜ್ಞಾನ ವೃದ್ಧಿಗೆ ಬಹಳಷ್ಟು ಸಹಕಾರಿಯಾಗಲಿದೆ. ವಿದ್ಯಾರ್ಥಿಯಾಗಿದ್ದಾಗ ನಾವು ಮಾಡುವ ತಪ್ಪುಗಳಿಂದ ಕಲಿಕೆಗೆ ಹಾಗೂ ಹೊಸದೃಷ್ಟಿಕೋನದ ಚಿಂತನೆಗೆ ಅವಕಾಶ ಸಿಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಚಾರ್ಯರಾದ ಡಾ. ನಿರಂಜನ್ ಎನ್ ಚಿಪ್ಲುಂಕರ್, ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ‘ಕಲಿಕಾ ಸಂದರ್ಭದಲ್ಲಿ ಮಾಡುವ ವಿವಿಧ ಪ್ರಯೋಗಗಳು ಬಹಳ ಮಹತ್ವದ್ದು. ಇಂದಿನ ವೃತ್ತಿಜೀವನದಲ್ಲಿ ಇಂಟರ್ಡಿಸಿಪ್ಲೀನರಿ ಪ್ರಯೋಗಗಳು ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ಪ್ರಸ್ತುತ ದಿನಗಳಲ್ಲಿ ಸ್ಥಳವು ಅಭಿವೃದ್ಧಿಗೆ ಅಡ್ಡಿಯಾಗುವುದಿಲ್ಲ. ಗ್ರಾಮೀಣ ಪ್ರದೇಶಗಳೂ ಸಹ ತಾಂತ್ರಿಕ ಬೆಳವಣಿಗೆ ಮತ್ತು ನಾವೀನ್ಯತೆಗೆ ಹೊಸ ಅವಕಾಶಗಳ ಬಾಗಿಲನ್ನು ತೆರೆಯುತ್ತಿವೆ.’ ಎಂದು ತಿಳಿಸಿದರು.
ಎಂಸಿಎ ವಿಭಾಗದ ಮುಖ್ಯಸ್ಥೆ ಡಾ. ಮಮತಾ ಬಲಿಪ ಸ್ವಾಗತಿಸಿದರು. ಪ್ರಾಜೆಕ್ಟ್ ಸಂಯೋಜಕಿ ಡಾ. ಸ್ಪೂರ್ತಿ ಶೆಟ್ಟಿ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ಸಾತ್ವಿಕಾ ಜೈನ್ ವಂದಿಸಿದರು. ವಿದ್ಯಾರ್ಥಿನಿ ಮೈತ್ರೆಯೀ ನಾವಡ ಕಾರ್ಯಕ್ರಮ ನಿರೂಪಿಸಿದರು.
ಈ ಪ್ರಾಜೆಕ್ಟ್ ಪ್ರದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರೂಪಿಸಿದ ಒಟ್ಟು 54ಪ್ರಾಜೆಕ್ಟ್‌ಗಳು ಪ್ರದರ್ಶನಗೊಂಡವು.
ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments