ಕಾರ್ಕಳ:ಕಾರು ಚಾಲಕಿಯ ನಿರ್ಲಕ್ಷ್ಯ,ಜೀವನ್ಮರಣ ಸ್ಥಿತಿಯಲ್ಲಿ ವಿದ್ಯಾರ್ಥಿಗಳು
ಕೆದಿಂಜೆ:ಕಾರು ಚಾಲಾಕಿ ಏಕಾಏಕಿ ಯೂಟರ್ನ್ ಹೊಡೆದುದರ ಪರಿಣಾಮ ಬೈಕ್ ಡಿಕ್ಕಿ ಹೊಡೆದು ಇಬ್ಬರು ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಕೆದಿಂಜೆ ಗ್ರಾಮದ ಸುಂಕಮಾರು ಎಂಬಲ್ಲಿ ನಡೆದಿದೆ.
ಮಾ.4ರಂದು ಸಂಜೆ ಈ ಘಟನೆ ನಡೆದಿದೆ.ವಿದ್ಯಾರ್ಥಿಗಳು ಕಾಪು ದೇವಸ್ಥಾನದಿಂದ ಪಡುಬಿದ್ರಿ ಮಾರ್ಗವಾಗಿ ನಿಟ್ಟೆಗೆ ಬರುತ್ತಿದ್ದ ಸಂದರ್ಭ,ಕೆದಿಂಜೆ ಗ್ರಾಮದ ಸುಂಕಮಾರು ಎಂಬಲ್ಲಿ ರಸ್ತೆಯ ಬದಿಯಲ್ಲಿ ನಿಲ್ಲಿಸಿದ್ದ ಕಾರನ್ನು (KA-19-ML-5389) ಅದರ ಚಾಲಕಿಯು ಯಾವುದೇ ಸೂಚನೇ ನೀಡದೇ ನಿರ್ಲಕ್ಷ್ಯತನದಿಂದ ತನ್ನ ಬಲಕ್ಕೆ ತಿರುಗಿಸಿದ್ದಾರೆ.
ಇದರಿಂದಾಗಿ ನಿಯಂತ್ರಣ ತಪ್ಪಿದ ಬೈಕ್ ಕಾರಿಗೆ ಡಿಕ್ಕಿ ಹೊಡೆದಿದ್ದು,ಬೈಕ್ ಸಮೇತ ಇಬ್ಬರೂ ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದಾರೆ.ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ಸುಪ್ರೀತ್ ಶೆಟ್ಟಿ ಕೆದಿಂಜೆ ಅಂಬ್ಯುಲೆನ್ಸ್ ನಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.ಬೈಕ್ ಸವಾರ ವೈಶಾಕ್ ತಲೆ,ಸೊಂಟ ಮತ್ತು ಎಡಕಾಲಿಗೆ ಗಂಭೀರ ಗಾಯಗೊಂಡು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಿಂಬದಿ ಸವಾರೆ ಗಂಭೀರ ಗಾಯಗೊಂಡು ಚಿಕಿತ್ಸ್ ಪಡೆಯುತ್ತಿದ್ದಾರೆ.ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.