ಕಾರ್ಕಳ:ಮಹಿಳೆಯ ಕರಿಮಣಿ ಸರಕ್ಕೆ ಕನ್ನ-ಆರೋಪಿ ಬಂಧನ
ಕಾರ್ಕಳ:ಬೆಳುವಾಯಿ ಕರಿಯನಂಗಡಿ ನಡೆದುಕೊಂಡು ಹೋಗುತಿದ್ದ ಮಹಿಳೆಯೋರ್ವರಲ್ಲಿ ಬೈಕಿನಲ್ಲಿ ಬಂದ ಅಪರಿಚಿತನೋರ್ವ ‘ಬೆಳುವಾಯಿಗೆ ದಾರಿ ಯಾವುದು’ ಎಂದು ಕೇಳಿ ಆಕೆಯ ಕರಿಮಣಿ ಸರವನ್ನು ಸೆಳೆದುಕೊಂಡು ಪರಾರಿಯಾದ ಘಟನೆ ಸೋಮವಾರ ನಡೆದಿದೆ.
ಬೆಳುವಾಯಿ ಕಾಯಿದೆಮನೆ ಇಂದಿರಾ ಅವರು ಅಳಿಯ ಭಾಸ್ಕರ ಅವರ ಗೃಹಪ್ರವೇಶ ಕಾರ್ಯಕ್ರಮ ಮುಗಿಸಿ ನಡೆದುಕೊಂಡು ಹೋಗುತ್ತಿರುವಾಗ ಈ ಘಟನೆ ನಡೆದಿದೆ.ಕರಿಮಣಿ ಸರಕ್ಕೆ ಕೈ ಹಾಕುವಾಗ ಪ್ರತಿಭಟಿಸಿದ ಆಕೆಯನ್ನು ಆತ ದೂಡಿ ಹಾಕಿದ್ದಾನೆ.ದೂಡಿದ ರಭಸಕ್ಕೆ ಮಹಿಳೆ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿ ಕಾರ್ಕಳ ತಾಲೂಕು ಕಾಂತಾವರ ಗ್ರಾಮದ ವ್ಯಕ್ತಿ ಎಂದು ತಿಳಿದುಬಂದಿದೆ.
ಸದ್ಯದಲ್ಲೇ ವಿಸ್ತೃತ ಮಾಹಿತಿ…