ಪಳ್ಳಿ:ಬಂಟರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ
ಬಂಟರ ಸಂಘ ಪಳ್ಳಿ ನಿಂಜೂರು ಹಾಗೂ ಮಹಿಳಾ ಘಟಕ ಪಳ್ಳಿ ನಿಂಜೂರು ಇದರ ಸಹಭಾಗಿತ್ವದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರಾಮಕೃಷ್ಣ ಸಭಾಭವನ ಪಳ್ಳಿ ಇಲ್ಲಿ ನಡೆಯಿತು.ಪಳ್ಳಿ – ನಿಂಜೂರು ಬಂಟರ ಸಂಘ 10 ವರ್ಷ ಪೂರ್ಣಗೊಳಿಸಿತು. ಈ ವರ್ಷದಿಂದ ಮಹಿಳಾ ಘಟಕವನ್ನು ಸ್ಥಾಪಿಸಲಾಯಿತು.
ವಿಷು ಶೆಟ್ಟಿ ಅಂಬಲಪಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಉದಯ ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿ,ಫೆಡರೇಷನ್ ಆಫ್ ಕ್ವಾರಿ ಅಸೋಸಿಯೇಷನ್ ನ ಅಧ್ಯಕ್ಷರಾದ ರವೀಂದ್ರ ಶೆಟ್ಟಿ ಬಜಗೋಳಿ,ಸಹನಾ ಗ್ರೂಪ್ ಮಾಲಕ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸುರೇಂದ್ರ ಶೆಟ್ಟಿ ಕಾರ್ಕಳ ಮತ್ತಿತರ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಮಾರಂಭದ ಅಧ್ಯಕ್ಷತೆಯನ್ನು ನಿಕಟ ಪೂರ್ವಕ ಅಧ್ಯಕ್ಷರಾದ ವಿಜಯ ಎಮ್ ಶೆಟ್ಟಿ ಪಳ್ಳಿ ವಹಿಸಿದ್ದರು.ಬಂಟರ ಯಾನೆ ನಾಡವರ ಸಂಘ ಕಾರ್ಕಳ ಸಂಚಾಲಕರಾದ ವಿಜಯ ಶೆಟ್ಟಿ ಕಾರ್ಕಳ,ಉಡುಪಿ ಗ್ರಾಮೀಣ ಬಂಟರ ಸಂಘ, ಕುಂತಲ ನಗರ ಕಾರ್ಯಧ್ಯಕ್ಷ ಪದ್ಮನಾಭ ಹೆಗ್ದೆ ಮರ್ಣೆ, ಕಾರ್ಕಳ ತಾಲೂಕು ಮಹಿಳಾ ಬಂಟರ ಸಂಘದ ಅಧ್ಯಕ್ಷರಾದ ಪೂರ್ಣಿಮ ಏನ್ ಹೆಗ್ಡೆ ಕುಂಟಾಡಿ, ಪಳ್ಳಿ – ನಿಂಜೂರು ಬಂಟರ ಸಂಘದ ನೂತನ ಅಧ್ಯಕ್ಷರಾದ ಚಂದ್ರ ಶೇಖರ ಶೆಟ್ಟಿ ಹಾಗು ಮಹಿಳಾ ಘಟಕದ ಅಧ್ಯಕ್ಷರಾದ ಕಾಂತಿ ದಿನೇಶ ಶೆಟ್ಟಿ ಪಳ್ಳಿ, ಜಗದೀಶ್ ಹೆಗ್ಡೆ, ಕುಂಟಾಡಿ ಕೃಷ್ಣರಾಜ ರೈ, ಕಾರ್ಕಳ NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ, ಪಳ್ಳಿ ನಿಂಜೂರು ಬಂಟರ ಸಂಘ ಹಾಗು ಪಳ್ಳಿ – ನಿಂಜೂರು ಮಹಿಳಾ ಘಟಕ ಪದಾಧಿಕಾರಿಗಳು, ಸಮಿತಿಯ ಸದಸ್ಯರು ಮತ್ತು ಇನ್ನಿತರ ಊರ ಹಾಗು ಪರವೂರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.ಪಳ್ಳಿ – ನಿಂಜೂರು ಬಂಟರ ಸಂಘದ ಸ್ಥಾಪಕ ಅಧ್ಯಕ್ಷ ಮನೋಹರ ಶೆಟ್ಟಿ ಪಳ್ಳಿ ಸ್ವಾಗತಿಸಿದರು.ಸುಜಾತ ಮೋಹನ್ ಶೆಟ್ಟಿ ನಿಂಜೂರು ವಂದಿಸಿದರು.ಚಿತ್ರ ವಿನಯ ಶೆಟ್ಟಿ ನಿಂಜೂರು ಕಾರ್ಯಕ್ರಮ ನಿರೂಪಿಸಿದರು.ನೂತನ ಅಧ್ಯಕ್ಷರಾದ ಚಂದ್ರ ಶೇಖರ ಶೆಟ್ಟಿ ನಿಂಜೂರು ಅವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.ಪಳ್ಳಿ – ನಿಂಜೂರು ಗ್ರಾಮದ ಬಂಟ ಸಮಾಜದವರೆಲ್ಲರೂ ಬಾಗವಹಿಸಿದ್ದರು