ಕಾರ್ಕಳ:ದ್ವಿತೀಯ ಪಿಯುಸಿ ಫಲಿತಾಂಶ-ಕ್ರೈಸ್ಟ್ ಕಿಂಗ್ ನ ಸುಧೀಕ್ಷಾ ಶೆಟ್ಟಿ ರಾಜ್ಯಕ್ಕೆ ಐದನೇ ರ‍್ಯಾಂಕ್
ಕ್ರೈಸ್ಟ್ ಕಿಂಗ್: ದ್ವಿತೀಯ ಪಿಯುಸಿ ಫಲಿತಾಂಶ – 595 ಅಂಕಗಳನ್ನು ಪಡೆದ ವಾಣಿಜ್ಯ ವಿಭಾಗದ ಸುಧೀಕ್ಷಾ ಶೆಟ್ಟಿ ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್
ರಾಜ್ಯಕ್ಕೆ ಐದನೇ ರ‍್ಯಾಂಕ್
ಕಾರ್ಕಳ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸುಧೀಕ್ಷಾ ಎಸ್ ಶೆಟ್ಟಿ 595 ಅಂಕಗಳನ್ನು ಪಡೆದುಕೊಂಡು ಉಡುಪಿ ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಅಲ್ಲದೆ ರಾಜ್ಯಮಟ್ಟದಲ್ಲಿ ಐದನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ.
ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಹೀಗೆ ನಾಲ್ಕೂ ವಿಷಯಗಳಲ್ಲಿ 100ಕ್ಕೆ 100ಅಂಕಗಳನ್ನು ಪಡೆದುಕೊಂಡಿದ್ದಾಳೆ. ಕಾರ್ಕಳದ ಜೋಡುರಸ್ತೆ ನಿವಾಸಿಗಳಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ಶ್ರೀಮತಿ ಸುದರ್ಶಿನಿ ಶೆಟ್ಟಿ ದಂಪತಿಗಳ ಪುತ್ರಿಯಾದ ಸುಧೀಕ್ಷಾ ಶೆಟ್ಟಿ ರಾಜ್ಯಮಟ್ಟದ ವಾಲಿಬಾಲ್ ಕ್ರೀಡಾಪಟುವೂ ಆಗಿದ್ದಾಳೆ.
ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು ಬೋಧಕ ವೃಂದದವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.