ಜೆಇಇ ಮೈನ್ಸ್–2025:ಕ್ರೈಸ್ಟ್ ಕಿಂಗ್ ನ ಅನಂತ್ ಎನ್.ಕೆ. ಸಾಧನೆ
ಕ್ರೈಸ್ಟ್ ಕಿಂಗ್: ರಾಷ್ಟ್ರಮಟ್ಟದ ಜೆಇಇ ಮೈನ್ಸ್–2025 (ಹಂತ -2) ಪರೀಕ್ಷೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ಅನಂತ್ ಎನ್.ಕೆ 99.6912 ಪರ್ಸೆಂಟೈಲ್‌ನೊAದಿಗೆ ಅಭೂತಪೂರ್ವ ಸಾಧನೆ
ರಾಷ್ಟ್ರ ಮಟ್ಟದ ಜೆಇಇ ಮೈನ್ಸ್–2025 (ಹಂತ – 2) ಪರೀಕ್ಷೆಯಲ್ಲಿ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಸಕ್ತ ದ್ವಿತೀಯ ವಿಜ್ಞಾನ ವಿಭಾಗದ ಅನಂತ್.ಎನ್.ಕೆ ಶೇಕಡಾ 99.6912 ಪರ್ಸೆಂಟೈಲ್ ಪಡೆದುಕೊಳ್ಳುವುದರ ಮೂಲಕ ಸಂಸ್ಥೆಯು ಅಭೂತಪೂರ್ವ ಸಾಧನೆಗೈದಿದೆ.
ಭೌತಶಾಸ್ತ್ರದಲ್ಲಿ 99.3968, ರಾಸಾಯನಶಾಸ್ತ್ರದಲ್ಲಿ 99.4211, ಗಣಿತಶಾಸ್ತ್ರ ದಲ್ಲಿ 99.3743 ಅಂಕಗಳನ್ನು ಪಡೆದುಕೊಂಡು ಒಟ್ಟಾರೆ 99.6912 ಪರ್ಸೆಂಟೈಲ್ ಅಂಕಗಳನ್ನು ಪಡೆದುಕೊಂಡಿರುವ ಅನಂತ್.ಎನ್.ಕೆ ಸಂಸ್ಥೆಗೆ ಕೀರ್ತಿ ತಂದಿದ್ದಾನೆ.
ಈ ವಿದ್ಯಾರ್ಥಿಯು ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿಯೂ 593 ಅಂಕಗಳೊಂದಿಗೆ ರಾಜ್ಯಕ್ಕೆ ಏಳನೇ ರ‍್ಯಾಂಕ್ ಪಡೆದುಕೊಂಡಿದ್ದಾನೆ, ವಿದ್ಯಾರ್ಥಿಯ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿಯವರು, ಪ್ರಾಚಾರ್ಯರು, ಬೋಧಕ ವೃಂದದವರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.