M K ಪ್ರೆಂಡ್ಸ್ ಮಾವಿನ ಕಟ್ಟೆ ನಂದಳಿಕೆ ಕಾರ್ಕಳ ಇವರ ನೇತೃತ್ವದಲ್ಲಿ ನಾಲ್ಕನೇ ವರ್ಷದ ಗ್ರಾಮೀಣ ಕ್ರೀಡೋತ್ಸವ “ಕೆಸರ್‌ಡ್ ಒಂಜಿ ದಿನ” ಕಾರ್ಯಕ್ರಮವು ಜುಲೈ 20 ರಂದು ಮನ್‌ಬೊಟ್ಟು ಗದ್ದೆ, ಮಾವಿನಕಟ್ಟೆ, ನಂದಳಿಕೆ ಕಾರ್ಕಳ ಇಲ್ಲಿ ನಡೆಯಲಿದೆ.
ಕೆಸರಿನ ಗದ್ದೆಯಲ್ಲಿ ಪುರುಷರಿಗೆ ಮಹಿಳೆಯರಿಗೆ ಮತ್ತು ಮಕ್ಕಳಿಗೆ ವಿವಿಧ ರೀತಿಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾವಿನಕಟ್ಟೆ ಶ್ರೀ ಮಹಮ್ಮಾಯಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಗಣೇಶ್ ಕುಡ್ಪ, ಸುರೇಶ್ ಕೋಟ್ಯಾನ್, ನಂದಳಿಕೆ ಗ್ರಾಂ ಪಂಚಾಯತ್ ಸದಸ್ಯ ಸಂತೋಷ್ ಶೆಟ್ಟಿ ಇವರ ಗಣ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮದ ಉದ್ಘಾಟನೆಯು ಬೆಳಿಗ್ಗೆ ನಡೆಯಲಿದೆ. ಪೂನದ ಯಶಸ್ವೀ ಉದ್ಯಮಿ ಪ್ರಕಾಶ್ ಶೆಟ್ಟಿ ದೀಪ ಪ್ರಜ್ವಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಸಭಾ ಅಧ್ಯಕ್ಷತೆಯನ್ನು ನವಿ ಮುಂಬಯಿಯ ಯುವ ಹೊಟೇಲ್ ಉದ್ಯಮಿ ಶ್ರೀ ಸುಕೇಶ್ ಶೆಟ್ಟಿ, ಕಾರ್ತಿಕ ನಿವಾಸ ತೆಳ್ಳಾರು ವಹಿಸಲಿದ್ದಾರೆ. ವಿಶೇಷ ಆಮಂತ್ರಿತರಾಗಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಇವರು ಆಗಮಿಸಲಿದ್ದಾರೆ.
ಮುಖ್ಯ ಗಣ್ಯ ಅತಿಥಿಗಳಾಗಿ ಪ್ರಸಿದ್ಧ ಉದ್ಯಮಿ ಇನ್ನಾದ ದಿವಾಕರ ಶೆಟ್ಟಿ, ಉದ್ಯಮಿ ಹಾಗೂ ಯುವ ಮುಖಂಡ ವಿಖ್ಯಾತ್ ಶೆಟ್ಟಿ ಕಾರ್ಕಳ, ಹಿಂದೂ ಮುಖಂಡ ಗುರುಪ್ರಸಾದ್ ಶೆಟ್ಟಿ ನಾರಾವಿ, ಸಾಮಾಜಿಕ ಕಾರ್ಯಕರ್ತ ಅರುಣ್ ನಿಟ್ಟೆ, ಹಿಂದೂ ಮುಖಂಡ ರತ್ನಾಕರ ಅಮೀನ್ ಅಜೆಕಾರು ಇವರು ಆಗಮಿಸಲಿದ್ದಾರೆ.
ಸಂಜೆ 5-30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಖ್ಯಾತ ಧಾರ್ಮಿಕ ಮುಂದಾಳು ಸುಹಾಸ್ ಹೆಗ್ಡೆ ಚಾವಡಿ ಅರಮನೆ ನಂದಳಿಕೆ ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿ ಗಣ್ಯರಾಗಿ ಶ್ರೀ ಜಯ ದುರ್ಗಾಪರಮೇಶ್ವರಿ ದೇವಸ್ಥಾನ ಕನ್ನರ್ಪಾಡಿ ಉಡುಪಿ ಇದರ ನಿಕಟಪೂರ್ವ ಅಧ್ಯಕ್ಷರಾದ ಕೆ. ಕೃಷ್ಣಮೂರ್ತಿ ಆಚಾರ್ಯ, ಸ್ಟೋನ್ & ಕ್ರಷರ್ ಮಾಲಕರ ಸಂಘ ಕರ್ನಾಟಕ ಅಧ್ಯಕ್ಷರು ಹಾಗೂ ಧಾರ್ಮಿಕ ಮುಖಂಡ ರವೀಂದ್ರ ಶೆಟ್ಟಿ ಬಜಗೋಳಿ, ಮಣಿಪಾಲದ ಹೊಟೇಲ್ ಉದ್ಯಮಿ ಹಾಗೂ ಕಂಬಳ ಕ್ಷೇತ್ರದ ಮಹಾನ್ ಸಾಧಕ ನಂದಳಿಕೆ ಶ್ರೀಕಾಂತ್ ಭಟ್, ಪ್ರಸಿದ್ಧ ಉದ್ಯಮಿ ಕಾರ್ಕಳ ಟೈಗರ್ಸ್ ಖ್ಯಾತಿಯ ಬೋಳ ಪ್ರಶಾಂತ್ ಕಾಮತ್, ನಂದಳಿಕೆಯ ಗಣ್ಯ ಉದ್ಯಮಿ ರವಿದಾಸ್ ಕುಡ್ವ, ಖ್ಯಾತ ಉದ್ಯಮಿ ಪ್ರಭಾಕರ್ ಶೆಟ್ಟಿ ಇಂದಾರು, ಬೆಳ್ಮಣ್ಣಿನ ಯಶಸ್ವೀ ಉದ್ಯಮಿ ನಿತ್ಯಾನಂದ ಶೆಟ್ಟಿ, ಉದ್ಯಮಿ ಗಣ್ಯರಾದ ಹರೀಶ್ ಪಕಲ ಇವರ ಉಪಸ್ಥಿತಿ ಇರಲಿದೆ.
ವಾಲಿಬಾಲ್ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ನಂದಳಿಕೆಯ ಯುವ ಕ್ರೀಡಾಪಟು ಶ್ರೀ ಸೃಜನ್ ಶೆಟ್ಟಿ ನಂದಳಿಕೆ ಇವರನ್ನು ಗಣ್ಯರ ಉಪಸ್ಥಿತಿಯಲ್ಲಿ ಸನ್ಮಾನಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಕೆಸರಿನ ಗದ್ದೆಯಲ್ಲಿ ನಡೆಯಲಿರುವ ವಿವಿಧ ಆಟೋಟ ಸ್ಪರ್ಧೆಗಳು ವಿವರ ಇಂತಿದೆ:
ಪುರುಷರಿಗೆ : ಹಗ್ಗ ಜಗ್ಗಾಟ, ವಾಲಿಬಾಲ್` ವೈಯಕ್ತಿಕ ಸ್ಪರ್ಧೆಗಳು`
ಮಹಿಳೆಯರಿಗೆ: ಹಗ್ಗ ಜಗ್ಗಾಟ`ತ್ರೋಬಾಲ್, ವೈಯಕ್ತಿಕ ಸ್ಪರ್ಧೆಗಳು.
ಮಕ್ಕಳಿಗೆ : ಪ್ರೀ ಪ್ರೈಮರಿ ವಿಭಾಗ, ಪ್ರೈಮರಿ ವಿಭಾಗ` ಹೈಸ್ಕೂಲ್ ವಿಭಾಗದಲ್ಲಿ ವಿವಿಧ ಆಟೋಟ ಸ್ಪರ್ಧೆಗಳು.
ನಿಧಿ ಶೋಧನೆ ಮತ್ತು ಮಡಿಕೆ ಒಡೆಯುವ ಸ್ಪರ್ಧೆಯೂ ಇರಲಿದೆ.
ನಂದಳಿಕೆ ಕೆಸರಿನ ಗದ್ದೆಯಲ್ಲಿ ನಡೆಯಲಿರುವ ಈ ಕ್ರೀಡಾಕೂಟದ ಸುಂದರ ಚಿತ್ರೀಕರಣ/ ರೀಲ್ಸ್ ಮಾಡುವ ಹವ್ಯಾಸಿ ವೀಡಿಯೋ ಗ್ರಾಫ್‌ರುಗಳಿಗೆ *ಆಕರ್ಷಕ ನಗದು ಬಹುಮಾನ* (ಪ್ರಥಮ, ದ್ವಿತೀಯ ತೃತೀಯ) ಘೋಷಿಸಲಾಗಿದೆ.
ಬಹುಮಾನ ವಿವರ ಇಂತಿದೆ:
ಪುರುಷರ ಹಗ್ಗ ಜಗ್ಗಾಟ :
ಪ್ರಥಮ ಬಹುಮಾನ`: *ರೂಪಾಯಿ 7,777/- & ಆಕರ್ಷಕ ಟ್ರೋಫಿ*
ದ್ವಿತೀಯ ಬಹುಮಾನ: *ರುಪಾಯಿ 4,444/- & ಆಕರ್ಷಕ ಟ್ರೋಫಿ*
ತೃತೀಯ ಹಾಗೂ ಚತುರ್ಥ: *ನಗದು ಮತ್ತು ಟ್ರೋಫಿ.*
ಪುರುಷರ ವಾಲಿಬಾಲ್:
ಪ್ರಥಮ ಬಹುಮಾನ : *ರುಪಾಯಿ 7,777/- & ಆಕರ್ಷಕ ಟ್ರೋಫಿ*
ದ್ವಿತೀಯ ಬಹುಮಾನ : *ರುಪಾಯಿ 4,444/- & ಆಕರ್ಷಕ ಟ್ರೋಫಿ.*
*ಮಹಿಳೆಯರ ಹಗ್ಗಜಗ್ಗಾಟ:*
ಪ್ರಥಮ ಬಹುಮಾನ : *ರುಪಾಯಿ 3,333/- & ಆಕರ್ಷಕ ಟ್ರೋಫಿ*
ದ್ವಿತೀಯ ಬಹುಮಾನ : *ರುಪಾಯಿ 2,222/- & ಆಕರ್ಷಕ ಟ್ರೋಫಿ*
*ಮಹಿಳೆಯರ ತ್ರೋಬಾಲ್:*
ಪ್ರಥಮ ಬಹುಮಾನ : *ರುಪಾಯಿ 3,333/- & ಆಕರ್ಷಕ ಟ್ರೋಫಿ*
ದ್ವಿತೀಯ ಬಹುಮಾನ : *ರುಪಾಯಿ 2,222/- & ಆಕರ್ಷಕ ಟ್ರೋಫಿ*
ಹೆಚ್ಚಿನ ಮಾಹಿತಿಗಾಗಿ ಮತ್ತು ಹಗ್ಗ ಜಗ್ಗಾಟಕ್ಕೆ ತಂಡದ ಹೆಸರು ನೋಂದಾಯಿಸಲು ಸಂಪರ್ಕಿಸಿ:- 7483219036/ 7019920303
ಕ್ರೀಡಾಪಟುಗಳಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಮಧ್ಯಾಹ್ನ ಗಂಜಿ ಊಟದ ವ್ಯವಸ್ಥೆ ಮಾಡಲಾಗಿದೆ.