ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಗೆ ಸುಳ್ಯ ನ್ಯಾಯಾಲಯ ದಂಡ ವಿಧಿಸಿದ್ದಲ್ಲದೆ 10 ದಿನಗಳ ಕಾಲ ಸುಳ್ಯ ಪೊಲೀಸ್ ಠಾಣೆಯ ಆವರಣವನ್ನು ಶುಚಿಗೊಳಿಸುವ ಶಿಕ್ಷೆಯನ್ನು ವಿಧಿಸಿದೆ.
2025ರ ಎ.22 ರಂದು ರಾತ್ರಿ ಅಂಕತ್ ಪಲ್ಸಾಯ ಎಂಬಾತ ಮದ್ಯದ ಅಮಲಿನಲ್ಲಿ ಕೆವಿಜಿ ಜಂಕ್ಷನ್ ಬಳಿ ಸುಳ್ಯ ಎಸ್ಐ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಲ್ಲದೇ ವಾಹನದ ದಾಖಲೆಯನ್ನು ಹಾಜರಿಪಡಿಸದೆ ವಾಹನ ಚಲಾಯಿಸಿಕೊಂಡು ಹೋಗಿರುವ ಬಗ್ಗೆ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಬಳಿಕ ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಹಿರಿಯ ಸಿಜೆ ಮತ್ತು ಜೆಎಂಎಫ್ ಸಿ ನ್ಯಾಯಾಲಯ, ಕುಡಿದು ವಾಹನ ಚಲಾಯಿಸಿರುವುದು ಮತ್ತು ಅನುಚಿತ ವರ್ತನೆಯ ಕಾರಣಕ್ಕೆ 12 ಸಾವಿರ ರೂ. ದಂಡ ಪಾವತಿಸುವಂತೆ ಮತ್ತು ಜು. 19 ರಿಂದ ಜು.28 ರವರೆಗೆ ಠಾಣೆಯ ಆವರಣ ಶುಚೀಕರಣ ಮಾಡುವಂತೆ ಆದೇಶಿಸಿದೆ.