
ನಿಟ್ಟೆ:ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
ಜುಗಾರಿ ಅಡ್ಡಕ್ಕೆ ಪೊಲೀಸರು ದಾಳಿ ನಡೆಸಿದ ಘಟನೆ ಆ.18ರಂದು ನಿಟ್ಟೆ ಗ್ರಾಮ ಹುಣಸೆಕಟ್ಟೆ ಎಂಬಲ್ಲಿ ನಡೆದಿದೆ.ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ದಿಲೀಪ್ ಜಿ ಆರ್ ಪೊಲೀಸ್ ನೇತೃತ್ವದಲ್ಲಿ ದಾಳಿ ನಡೆಸಿ ಆರು ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.
ಸದಾನಂದ, ಗಣೇಶ್ , ಪ್ರಥಮ್, ಜಯರಾಜ್, ಸೂರ್ಯ ಮತ್ತು ರಾಜ ಬಂಧಿತರು.ಇಸ್ಪೀಟು ಆಟಕ್ಕೆ ಬಳಸಿದ ನಗದು ಹಣ 10,200 ರೂ. ಹಣ,ಇಸ್ಪೀಟ್ ಎಲೆಗಳು, ನೆಲಕ್ಕೆ ಹಾಸಿದ 2 ಹಳೆಯ ಪ್ಲಾಸ್ಟಿಕ್ ಗೋಣಿ ಚೀಲ, ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆದಿದ್ದು ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












