ಪೊಲೀಸ್ ತನಿಖೆಯಲ್ಲಿರುವ ಮೂರ್ತಿಯನ್ನು ಶಿಲ್ಪಿಗೆ ವಾಪಾಸ್ ನೀಡಲು ಹೈಕೋಟ್೯ ನಕಾರ.
ಮುಂದುವರೆದ ಪರಶುರಾಮ ಮೂರ್ತಿ ವಿವಾದ.
ಬೈಲೂರು ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪಿಸಿದ ಪರಶುರಾಮ ಮೂರ್ತಿಯ ವಿಚಾರಕ್ಕೆ ಸಂಭಂದಿಸಿದಂತೆ ಕಾರ್ಕಳ ಪೊಲೀಸರು ವಶಪಡಿಸಿಕೊಂಡಿರುವ ಪರಶುರಾಮ ಮೂರ್ತಿಯನ್ನು ಆರೋಪಿತರಿಗೆ ವಾಪಸ್ ನೀಡಲು ಹೈಕೋರ್ಟ್ ನಿರಾಕರಿಸಿದೆ.
ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಆರೋಪಿತರ ಪರವಾಗಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯ ವಿಚಾರಣೆ ನಡೆದಿದ್ದು,ಕಾರ್ಕಳ ಪೋಲಿಸರ ತನಿಖೆಯ ಹಂತದಲ್ಲಿಯುವ ಮೂರ್ತಿಯ ಬಿಡಿಭಾಗಗಳನ್ನು ಮರಳಿ ಒಪ್ಪಿಸುವಂತೆ ಕೇಳಿಕೊಳ್ಳಲಾಗಿತ್ತು.
ಈ ಬಗ್ಗೆ ದೂರುದಾರರಾಗಿರುವ ನಲ್ಲೂರು ಕೃಷ್ಣ ಶೆಟ್ಟಿ ಯವರ ಪರ ವಾದಿಸಿದ್ದ ನ್ಯಾಯವಾದಿ ಶ್ರೀಕಾಂತ್.ವಿ.ಕೆ. ಆಕ್ಷೇಪ ವ್ಯಕ್ತಪಡಿಸಿ ಅರ್ಜಿದಾರರು ಕೇಳಿಕೊಂಡಂತೆ ಮೂರ್ತಿಯನ್ನು ಮರು ವಶಕ್ಕೆ ನೀಡದಂತೆ ಕೇಳಿಕೊಂಡಿದ್ದರು.
ವಾದ ಪ್ರತಿವಾದವನ್ನು ಆಲಿಸಿದ ಹೈಕೋರ್ಟ್ ಮೂರ್ತಿಯ ಬಿಡಿಭಾಗವನ್ನು ಅರ್ಜಿದಾರ ಕೃಷ್ಣ ನಾಯ್ಕ್ ರವರಿಗೆ ನೀಡಲು ನಿರಾಕರಿಸಿ ಆದೇಶ ಹೊರಡಿಸಿದೆ.ಮೂರ್ತಿ ವಿಚಾರದಲ್ಲಿ ಗೊಂದಲ ಇನ್ನು ಮುಂದುವರಿದಿದ್ದು ದಿನದಿಂದ ದಿನಕ್ಕೆ ಹೊಸ ತಿರುವು ಪಡೆಯುತ್ತಿದ್ದು ಕುತೂಹಲವನ್ನು ಹೆಚ್ಚಿಸಿದೆ.