ಮೂರನೇ ಆರೋಪಿ ಅಭಯ್ ಬಂಧನ:ಕಾರ್ಕಳ ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಪ್ರತಿಕ್ರಿಯೆ
ಕಾರ್ಕಳ ಗ್ಯಾಂಗ್ ರೇಪ್ ಪ್ರಕರಣದ ಮೂರನೇ ಆರೋಪಿ ಅಭಯ್ ಎಂಬಾತ ಬಜರಂಗದಳ ಸಂಘಟನೆಯ ಕಾರ್ಯಕರ್ತನಲ್ಲ. ಆತನಿಗೂ ಬಜರಂಗದಳಕ್ಕೂ ಯಾವುದೇ ರೀತಿಯ ಸಂಬಂಧ ಅಥವಾ ಸಂಪರ್ಕ ಇರುವುದಿಲ್ಲ. ಸಂಘಟನೆಯ ಹೆಸರು ಕೆಡಿಸಲು ಮಾಡುತ್ತಿರುವ ಅಪಪ್ರಚಾರಕ್ಕೆ ಸ್ಪಷ್ಟನೆ ನೀಡುವ ಅವಶ್ಯಕತೆಯೂ ನಮಗಿಲ್ಲ. ಆದರೆ ಆರೋಪಿ ಯಾರೇ ಇರಲಿ ಕಾನೂನಿನ ಶಿಕ್ಷೆಗೆ ಒಳಪಡಲೇಬೇಕು ಎಂದು ಕಾರ್ಕಳ ತಾಲೂಕು ಬಜರಂಗದಳ ಸಂಯೋಜಕ ಮನೀಶ್ ನಿಟ್ಟೆ ಹೇಳಿದ್ದಾರೆ.
ಇಲ್ಲಿ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ನಮಗೆ ಮುಖ್ಯವಲ್ಲ, ಸಂತ್ರಸ್ತ ಯುವತಿಗೆ ನ್ಯಾಯ ಸಿಗಬೇಕು ಮತ್ತು ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಲೇ ಬೇಕು ಇದು ನಮ್ಮ ಆಗ್ರಹ. ಪೋಲಿಸ್ ತನಿಖೆಯಲ್ಲಿರುವ ಶಂಕಿತ ಆರೋಪಿಗಳು ತಪ್ಪಿತಸ್ಥರು ಎಂದಾದಲ್ಲಿ ಅವರ ವಿರುದ್ಧವೂ ಅತ್ಯಂತ ಪ್ರಬಲ ಕಾಯ್ದೆ ಮೂಲಕ ಕೇಸ್ ದಾಖಲಾಗಬೇಕು. ಇಂತಹ ಅಮಾನುಷ ಕೃತ್ಯಗಳು ಕಾರ್ಕಳದಲ್ಲಿ ಇಲ್ಲಿಗೆ ಕೊನೆಯಾಗಬೇಕು ಮತ್ತು ಈ ಪ್ರಕರಣದಲ್ಲಿ ನೀಡುವ ಕಾನೂನಿನ ಶಿಕ್ಷೆ ಎಲ್ಲರಿಗೂ ಪಾಠವಾಗಬೇಕು. ಹಿಂದೂ ಎಂದ ಮಾತ್ರಕ್ಕೆ ಆತ ಸಂಘಟನೆಯ ಕಾರ್ಯಕರ್ತನಾಗುವುದಿಲ್ಲ. ಈ ಪ್ರಕರಣದಲ್ಲಿ ಬಜರಂಗದಳದ ನಿಲುವು ಸ್ಪಷ್ಟವಾಗಿದೆ ಎಂದಿದ್ದಾರೆ.