ಶಿವಾಜಿ ಪ್ರತಿಮೆ ವಿಚಾರ ಪ್ರಧಾನಿ ಮೋದಿಯವರು ಕ್ಷಮೆ ಕೋರಿದಂತೆ ಶಾಸಕ ಸುನೀಲ್ ಕುಮಾರ್ ಕ್ಷಮೆ ಕೋರಲಿ
ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರದಾನ ಮಂತ್ರಿಯವರು ಮರಾಠಿಗರ ಕ್ಷಮೆ ಕೋರಿದಂತೆ ಪರಶುರಾಮನ ಪ್ರತಿಮೆ ವಿಚಾರವಾಗಿ ಶಾಸಕ ಸುನೀಲ್ ಕುಮಾರ್ ನಾಡಿನ ಜನತೆಯ ಕ್ಷಮೆಯಾಚಿಸಲಿ ಎಂದು ಕಾರ್ಕಳ ಕಾಂಗ್ರೆಸ್ ಆಗ್ರಹಿಸಿದೆ
ಲೋಕಸಭಾ ಚುನಾವಣಾ ಪೂರ್ವದಲ್ಲಿ ಮಹಾರಾಷ್ಟ್ರದಲ್ಲಿ ಉದ್ಘಾಟನೆಗೊಂಡ ಶಿವಾಜಿ ಪ್ರತಿಮೆ ಕುಸಿದ ಪ್ರಕರಣ ಕಾರ್ಕಳದ ಪರಶುರಾಮನ ಕಂಚಿನ ಪ್ರತಿಮೆ ಪ್ರಕರಣವನ್ನೇ ಹೋಲುತ್ತದೆ ಇಲ್ಲಿಯೂ ವಿಧಾನಸಭಾ ಚುನಾವಣೆಯ ಉದ್ದೇಶದಿಂದ ಕಾಮಗಾರಿ ಪೂರ್ಣವಾಗುವ ಮೊದಲೇ ತುರಾತುರಿಯಲ್ಲಿ ಉದ್ಘಾನೆಗೊಂಡಿದೆ ಅಲ್ಲಿ ಪ್ರಕರಣವನ್ನು ತನಿಖೆಗೆ ಒಪ್ಪಿಸಲಾಗಿ ಒಬ್ಬನ ಬಂಧನವಾಗಿದ್ದರೆ ಇಲ್ಲಿಯೂ ಸಿಐಡಿ ತನಿಕೆಗೆ ಆದೇಶ ನೀಡಲಾಗಿದ್ದು ಒಬ್ಬ ಅಧಿಕಾರಿಯ ಅಮಾನತು ಆಗಿದೆ, ಶಿವಾಜಿ ಪ್ರತಿಮೆಯನ್ನು ಉದ್ಘಾಟಿಸಿದ ಪ್ರದಾನಿ ತಪ್ಪೊಪ್ಪಿಕೊಂಡು ಮರಾಠಿಗರ ಕ್ಷಮೆಯಾಚಿಸಿದ್ದಾರೆ ಆದರೆ ವಿಪರ್ಯಾಸವೆಂದರೆ ಇಲ್ಲಿ ಶಾಸಕ ಸುನೀಲ್ ಕುಮಾರ್ ನಾನು ಮಾಡಿದ್ದೇ ಸರಿ ಎಂದು ಸಮರ್ಥನೆ ನೀಡುತ್ತಾ ಪ್ರಶ್ನಿಸಿದವರನ್ನೇ ಟಾರ್ಗೇಟ್ ಮಾಡುತ್ತಿದ್ದಾರೆ, ಶಾಸಕರಿಗೆ ಪ್ರದಾನಿಗಳ ಮೇಲೆ ಕಿಂಚಿತ್ತು ಗೌರವವಿದ್ದರೆ ಅವರಂತೆ ಇವರೂ ಕ್ಷಮೆಯಾಚಿಸಲಿ ಎಂದು ಬ್ಲಾಕ್ ಕಾಂಗ್ರೇಸ್ ವಕ್ತಾರ ಶುಭದರಾವ್ ಆಗ್ರಹಿಸಿದ್ದಾರೆ
ಶಾಸಕರ ಒಂದು ತಪ್ಪಿನಿಂದ ಕ್ಷೇತ್ರದ ಬಹಳಷ್ಟು ಜನ ಅನುಭನಿಸುವಂತಾಯಿತು, ಪಕ್ಷದ ಪಧಾದಿಕಾರಿಗಳಿಗೆ ಇಷ್ಟವಿಲ್ಲದಿದ್ದರೂ ಸಮರ್ಥಿಸುವುದು ಅನಿವಾರ್ಯವಾಯಿತು ಪ್ರತಿಭಟನೆ ಸತ್ಯಾಗ್ರಹಗಳು ನಡೆದು ಅಮಾಯಕರ ಮೇಲೆ ಅನಾವಶ್ಯಕ ಪೋಲೀಸ್ ಕೇಸುಗಳು ದಾಖಲಾದವು ತನಿಖೆಯ ಕಾರಣಗಳಿಂದ ಅಧಿಕಾರಿಗಳಿಗೂ ಒತ್ತಡಗಳಾದವು, ಸಾಮಾಜಿಕ ಜಾಲತಾಣದಲ್ಲಿ ಪರಸ್ಪರ ಅರೋಪ ಪ್ರತ್ಯಾರೋಪಗಳು ನಡೆದು ದೈಹಿಕ ಹಲ್ಲೆಗೂ ಕಾರಣವಾಯಿತು, ಅಂದೇ ಈ ಬಗ್ಗೆ ಸ್ಪಷ್ಟನೆ ನೀಡಿ ಒಪ್ಪಿಕೊಂಡಿದ್ದರೆ ಎಲ್ಲಾ ರಾದ್ದಾಂತಗಳನ್ನು ತಡೆಯಬಹುದಿತ್ತು ಎಂದು ಅವರು ಬೇಸರ ವ್ಯಕ್ತ ಪಡಿಸಿದ್ದಾರೆ,
ಇನ್ನೂ ಕಾಲ ಮಿಂಚಿಲ್ಲ ಪ್ರದಾನಿ ಮೋದಿಯವರನ್ನು ಮಾದರಿಯಾಗಿಸಿ ಇವರೂ ನಾಡಿನ ಜನತೆಯಲ್ಲಿ ಕ್ಷಮೆಯಾಚಿಸು ಆಗ್ರಹಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.