Tuesday, February 10, 2026
Google search engine
Homeಕಾರ್ಕಳ2ನೇ ಮದುವೆಗೆ ರೆಡಿ ಆಗಿದ್ದ ವರನಿಗೆ ಶಾಕ್ – ಮದುಮಗಳಿಂದಲೇ ದಾಖಲಾಯ್ತು ದೂರು

2ನೇ ಮದುವೆಗೆ ರೆಡಿ ಆಗಿದ್ದ ವರನಿಗೆ ಶಾಕ್ – ಮದುಮಗಳಿಂದಲೇ ದಾಖಲಾಯ್ತು ದೂರು

2ನೇ ಮದುವೆಗೆ ರೆಡಿ ಆಗಿದ್ದ ವರನಿಗೆ ಶಾಕ್ – ಮದುಮಗಳಿಂದಲೇ ದಾಖಲಾಯ್ತು ದೂರು

ಮೊದಲ ಪತ್ನಿ ವಿಚ್ಛೇದನ ಕೋರ್ಟ್‌ನಲ್ಲಿರುವಾಗಲೇ ಮತ್ತೊಂದು ಮದುವೆಗೆ ಸಿದ್ಧವಾಗಿದ್ದ ವರನಿಗೆ ಮತ್ತೊಂದು ಶಾಕ್ ಎದುರುರಾಗಿದೆ. ಮದುವೆ ಮಂಟಪದಲ್ಲಿ ಸೃಷ್ಟಿಯಾದ ಹೈಡ್ರಾಮಾ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಮೊದಲ ಪತ್ನಿ ಎಂಟ್ರಿ ಬಳಿಕ ಥಂಡ ಹೊಡೆದಿದ್ದ ಪತಿಗೆ ಈಗ ಮತ್ತೊಂದು ಸಂಕಷ್ಟ ಎದುರುಗಿದೆ. ಪ್ರಕರಣಕ್ಕೆ ಟ್ವಿಸ್ಟ್ ಎಂಬಂತೆ ಹಸೆಮಣೆ ಏರಿದ್ದ ಯುವತಿ ಸಹ ವರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾಳೆ.

ತುಮಕೂರಿನ ಎಡೆಯೂರು ದೇವಸ್ಥಾನದ ಬಳಿಯ ಖಾಸಗಿ ಕಲ್ಯಾಣ ಮಂಟಪದಲ್ಲಿ ನಡೆಯಬೇಕಿದ್ದ ಮದುವೆಯಲ್ಲಿ ಹೈಡ್ರಾಮಾ ಸೃಷ್ಟಿಯಾಗಿತ್ತು. ಇನ್ನೇನು ಮದುಮಗ ಹರಿಪ್ರಸಾದ್ ಮದುವೆ ಹೆಣ್ಣಿಗೆ ತಾಳಿ ಕಟ್ಟಬೇಕಿತ್ತು. ಅಷ್ಟರಲ್ಲೇ ಮಂಟಪಕ್ಕೆ ಎಂಟ್ರಿ ಕೊಟ್ಟ ಆತನ ಮೊದಲ ಹೆಂಡತಿ ಲೇಪಾಕ್ಷಿ ರಂಪಾಟ ಮಾಡಿ ಮದುವೆ ನಿಲ್ಲಿಸಿದ್ದಳು. ಮೊದಲ ಪತ್ನಿ ರಂಪಾಟದ ಬಳಿಕ ಥಂಡ ಹೊಡೆದಿದ್ದ ಪತಿ ಹರಿಪ್ರಸಾದ್‌ಗೆ ಈಗ ಮತ್ತೊಂದು ಸಂಕಷ್ಟ ಎದುರಾಗಿದೆ. ಹರಿಪ್ರಸಾದ್‌ನ ಎರಡನೇ ಮದುವೆಗೆ ಹಸೆಮಣೆ ಏರಿದ್ದ ಯುವತಿ ಸಹ ಆತನ ವಿರುದ್ಧ ದೂರು ನೀಡಿದ್ದಾಳೆ.

ಮದುವೆಗೆ ರೆಡಿಯಾಗಿದ್ದ ಮಂಡ್ಯ ಮೂಲದ ಯುವತಿ ಈಗ ತಿರುಗಿ ಬಿದಿದ್ದಾಳೆ. ಮೊದಲನೇ ಮದುವೆ ವಿಚಾರ ತಮಗೆ ತಿಳಿಸದೇ ಮುಚ್ಚಿಟ್ಟಿದ್ದಾರೆ. ಜೊತೆಗೆ ಮದುವೆಗೆಂದು ಲಕ್ಷ ಲಕ್ಷ ಹಣ ಪಡೆದಿದ್ದಾರೆ. ಅಲ್ಲದೇ ಮದುವೆ ಗಂಡು ಎಂದು ಚಿನ್ನಾಭರಣ ಸಹ ನೀಡಲಾಗಿತ್ತು. ಅಷ್ಟೇ ಅಲ್ಲದೇ ನನ್ನ ಕೆಲ ಫೋಟೋಗಳು ಅವರ ಬಳಿ ಇದೆ. ಎಲ್ಲವನ್ನೂ ವಾಪಸ್ ಕೊಡಿಸುವಂತೆ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ಅಮೃತೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಇನ್ನು, ನ್ಯಾಯಕ್ಕಾಗಿ ಅಮೃತೂರು ಪೊಲೀಸರ ಬಳಿ ಬಂದ ಕುಟುಂಬ ದೂರು ನೀಡಿದೆ. ಆದರೇ ಎನ್‌ಸಿಆರ್ ದಾಖಲಿಸಿಕೊಂಡ ಪೊಲೀಸರು ಆಗಿರುವ ವಂಚನೆ ಸಂಬಂಧ ಯುವತಿಯ ಸ್ವಂತ ಜಿಲ್ಲೆಯಾದ ಮಂಡ್ಯದಲ್ಲಿ ದೂರು ನೀಡುವಂತೆ ಸೂಚಿಸಿದ್ದಾರೆ. ಸದ್ಯ ಮಗಳ ಮದುವೆ ಎಂದು ಲಕ್ಷ ಲಕ್ಷ ಖರ್ಚು ಮಾಡಿ ಮದುವೆಗೆ ಸಿದ್ದರಾದವರು ಈಗ ಹಣವೂ ಇಲ್ಲ. ಇತ್ತ ನಂಬಿಕೆಗೂ ದ್ರೋಹವಾಗಿದೆ ಎಂದು ಕಂಗಾಲಾಗಿದ್ದಾರೆ. ಆದರೆ ಈ ಬಗ್ಗೆ ಹರಿಪ್ರಸಾದ್‌ರನ್ನು ಸಂಪರ್ಕಿಸಿದಾಗ, ಮಂಡ್ಯ ಮೂಲದ ಯುವತಿ ಕುಟುಂಬ ಮಾಡುತ್ತಿರುವ ಆರೋಪ ಸುಳ್ಳು ಎಂದಿದ್ದಾರೆ. ಮೂರು ವರ್ಷಗಳ ಹಿಂದೆ ಒಟ್ಟಿಗೆ ಕೆಲಸ ಮಾಡುವಾಗ ಯುವತಿ ಪರಿಚಯವಾಗಿದ್ದು, ಮೊದಲನೇ ಪತ್ನಿ ವಿಚಾರ ಯುವತಿ ಹಾಗೂ ಆಕೆಯ ತಾಯಿಗೂ ಸಹ ಗೊತ್ತಿತ್ತು ಎಂದು ತಿಳಿಸಿದ್ದಾರೆ. ಆದರೆ ಹರಿಪ್ರಸಾದ್ ವಿರುದ್ಧ ಆರೋಪ ಮಾಡಿದ ಕುಟುಂಬ ಸದ್ಯ ಮಂಡ್ಯ ಜಿಲ್ಲೆಯಲ್ಲಿ ದೂರು ನೀಡಲು ನಿರ್ಧಾರಿಸಿದ್ದಾರೆ.

ಮೊದಲ ಹೆಂಡತಿಯಿಂದ ದೂರಾದ ಹರಿಪ್ರಸಾದ್ ಎರಡನೇ ಮದುವೆಯಾಗಲು ನಿರ್ಧರಿಸಿದಾಗ ಆದ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಾನೂನು ಹೊರಟದಲ್ಲಿ ಮುಂದುವರೆಯುವುದಾಗಿ ಹರಿಪ್ರಸಾದ್ ತಿಳಿಸಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments