Friday, March 20, 2026
Google search engine
Homeಕಾರ್ಕಳಕಚ್ಚಾತೈಲ, ಗ್ಯಾಸ್ ಬಿಕ್ಕಟ್ಟು; ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿ..

ಕಚ್ಚಾತೈಲ, ಗ್ಯಾಸ್ ಬಿಕ್ಕಟ್ಟು; ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿ..

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಸಂಘರ್ಷ ಭಾರತದ ಮೇಲೂ ಪರಿಣಾಮ ಬೀರಿದೆ. ಕಚ್ಚಾತೈಲ, ಗ್ಯಾಸ್ ಸಮಸ್ಯೆ ಬಳಿಕ ಷೇರುಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಠಿಯಾಗುತ್ತಿದ್ದು, ರೂಪಾಯಿ ಮೌಲ್ಯವೂ ಕುಸಿಯುತ್ತಿದೆ. ಈ ನಡುವೆ ಬ್ಲ್ಯಾಕ್ ಮಾರ್ಕೆಟ್ ಮೇಲೆ ನಿಗಾ ವಹಿಸಲು ಸರ್ಕಾರ ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿ ಮಾಡಿದೆ.

ಅಮೆರಿಕ-ಇಸ್ರೇಲ್‌, ಇರಾನ್ ಸಂಘರ್ಷ 21 ದಿನಕ್ಕೆ ಕಾಲಿಟ್ಟಿದೆ. ಯುದ್ಧ ಇನ್ನಷ್ಟು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇದೆ. ಹಿಗಾಗಿ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಸೇರಿದಂತೆ ಗ್ಯಾಸ್ ಸಮಸ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಗ್ಯಾಸ್ ಅನ್ನು ಅಗತ್ಯ ಸರಕುಗಳ ಕಾಯ್ದೆಗೆ ಸೇರಿಸಿದ್ದ ಸರ್ಕಾರ ಈಗ, ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಅನ್ನು ಜಾರಿಗೊಳಿಸಿದೆ.

ಸೆಕ್ಷನ್ 3 ರ ಜಾರಿಯಿಂದ ಪೆಟ್ರೋಲಿಯಂ ಉತ್ಪನ್ನಗಳು ಮತ್ತು ನೈಸರ್ಗಿಕ ಅನಿಲದ ಉತ್ಪಾದನೆ,ಸಂಸ್ಕರಣೆ, ಸಂಗ್ರಹಣೆ, ಆಮದು, ರಫ್ತು, ಮಾರುಕಟ್ಟೆ ಮತ್ತು ಬಳಕೆಯಲ್ಲಿ ತೊಡಗಿರುವ ಎಲ್ಲಾ ಕಂಪನಿಗಳು ಮಾಹಿತಿಯನ್ನು ಸರ್ಕಾರದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಕೋಶದೊಂದಿಗೆ ನವೀಕೃತ ಡೇಟಾವನ್ನು ಹಂಚಿಕೊಳ್ಳುವುದು ಕಡ್ಡಾಯವಾಗಲಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments